ಕಡಧಾಮ್: ಟೆರೇಸ್ ಮೇಲೆ ಬಿದ್ದಿದ್ದ ಚಾಕೊಲೇಟ್ ತಿಂದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
ಸಾಧನಾ (7) ಮತ್ತು ಅವರ ಸಹೋದರಿ ಶಾಲಿನಿ (4) ಅವರು ಬೆಳಗ್ಗೆ ಚಾಕೊಲೇಟ್ ನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ಪೋಷಕರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಕ್ಕದ ಮನೆಯ ಇನ್ನೂ ಇಬ್ಬರು ಬಾಲಕಿಯರು ಕೂಡ ಚಾಕೊಲೇಟ್ ಅನ್ನು ಸೇವಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಘಟನೆ ನಡೆದಿದೆ, ಟೆರೇಸ್ ಮೇಲೆ ಬಿದ್ದಿದ್ದ ಚಾಕೊಲೇಟ್ ಅನ್ನು ನಾಲ್ವರು ತಿಂದಿದ್ದರು, ತಕ್ಷಣವೇ ಹೊಟ್ಟೆ ನೋಡು ಶುರುವಾಗಿತ್ತು. ಎದೆ ಉರಿಯೂ ಇತ್ತು. ಬಾಲಕಿಯರ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದರು.
ಮರಣೋತ್ತರ ಪರೀಕ್ಷೆ ಬಳಿಕವೇ ನಿಜವಾದ ಕಾರಣ ತಿಳಿದುಬರಲಿದೆ.
Facebook
Twitter
LinkedIn
WhatsApp
Email
Telegram