ವಿಷಯಗಳ ಬೆಳವಣಿಗೆಗೆ ವೇದಿಕೆಗಳ ಪಾತ್ರ ಮುಖ್ಯ

ದಾವಣಗೆರೆ:  ವಿಷಯಗಳು ಸೃಜನಾತ್ಮಕವಾಗಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದರೆ ಅದರಲ್ಲಿ ಆ ವಿಷಯಗಳ ಸಂಬಂಧಪಟ್ಟ ವೇದಿಕೆಗಳ ಪಾತ್ರ ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ  ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರ ವೇದಿಕೆಯು  ರಚನಾತ್ಮಕವಾಗಿ ಚಟುವಟಿಕೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು  ದಾವಣಗೆರೆ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ ಅನಿತಾ ಹೆಚ್ ಎಸ್ ರವರು ಅಭಿಪ್ರಾಯಪಟ್ಟರು.

ಅವರು ಇಂದು ವಿಶ್ವವಿದ್ಯಾನಿಲಯ ಎಂಬಿಎ ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಸದಸ್ಯರ  ಸಭೆಯಲ್ಲಿ ಮಾತನಾಡಿದರು.

 

ರಾಷ್ಟ್ರೀಯ ಶಿಕ್ಷಣ ನಿತ್ಯ ಜಾರಿಯಾಗಿದ್ದರಿಂದ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗಳ ಜೊತೆಗೆ ವೇದಿಕೆಯ ಪದಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ವಿದ್ಯಾರ್ಥಿ ಗೋಸ್ಕರ ಅಧ್ಯಾಪಕರಿಗೋಸ್ಕರ ಮಾಡಬೇಕಾದ ಕೆಲಸಗಳನ್ನು ಮಾಡುತ್ತ ಬಂದಿರುತ್ತಾರೆ ಅವರ ಸೇವೆ ಹೀಗೆ ನಿರಂತರವಾಗಿರಲಿ ಎಂದು ಹೇಳಿದರು.

ವೇದಿಕೆಯು ವಿಶ್ವವಿದ್ಯಾನಿಲಯ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ ವೇದಿಕೆಗಳಿಂದ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮಗಳಾಗಲಿ ಹಾಗೂ ಅಧ್ಯಾಪಕರಿಗೆ ಬೇಕಾಗುವ ಯಾವುದೇ ಮಾರ್ಗದರ್ಶನವಾಗಲಿ, ಸಿಗುವಂತಾಗಲಿ ಆಗ ವೇದಿಕೆಯು ಬೆಳೆಯುತ್ತದೆ ಎಂದು ಹೇಳಿದರು.

ವೇದಿಕೆ ಕಾರ್ಯದರ್ಶಿಯಾದ ವೆಂಕಟೇಶ್ ಬಾಬುರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ವೇದಿಕೆಯು ವಿಶ್ವವಿದ್ಯಾನಿಲಯ ದಲ್ಲಿ ತುಂಬಾ ದೊಡ್ಡ ವೇದಿಕೆಯಾಗಿದೆ ವೇದಿಕೆಯ ವತಿಯಿಂದ ಅಧ್ಯಾಪಕರ ಬೋಧನೆಗೆ ಅನುಕೂಲವಾಗುವಂತ ಕಾರ್ಯಗಾರಗಳನ್ನು ಮಾಡುತ್ತಾ ಬಂದಿರುತ್ತದೆ ಎಂದು ಹೇಳಿದರು.

ನಮ್ಮ ವೇದಿಕೆಯು ಒಂದು ಮಾದರಿ ವೇದಿಕೆಯಾಗುವಲ್ಲಿ ಎಲ್ಲಾ ಪದಾಧಿಕಾರಿಗಳು  ಶ್ರಮಿಸುತ್ತಿದ್ದಾರೆ ಹೀಗೆ ಮುಂದೆ ಉತ್ತಮ ವೇದಿಕೆಯಾಗಿ ಬೆಳೆಯುವ ಮಹತ್ತರವಾದ ಗುರಿಯನ್ನು ವೇದಿಕೆಯು ಹೊಂದಿರುತ್ತದೆ ಎಲ್ಲಾ ಆಧ್ಯಾಪಕರು ವೇದಿಕೆ ಕಾರ್ಯಕ್ರಮದಲ್ಲಿ ಸದಾ ಚಟುವಟಿಕೆಯಿಂದ ಭಾಗವಹಿಸಿದಾಗ ಅದು ಸಾಧ್ಯವಾಗುತ್ತದೆ ಎಂದು ಹೇಳಿದರು.

 

ಅಧ್ಯಾಪಕರೆಲ್ಲ ಕಾಲೇಜು ಪಾಠ ಎಂದು ಸೀಮಿತ ರಾಗದೆ ಬೇರೆ ಬೇರೆ ಕಡೆ ನಡೆಯುವಂತಹ ಕಾರ್ಯಗಾರಗಳಲ್ಲಿ ಭಾಗವಹಿಸಿದಾಗ ಭೌತಿಕ ಜ್ಞಾನದ ಮಟ್ಟ ಹೆಚ್ಚುವಲ್ಲಿ ಅನುಕೂಲವಾಗುತ್ತದೆ ಹಾಗಾಗಿ ಎಲ್ಲಾ  ಮಿತ್ರರು ವೇದಿಕೆಯ ವತಿಯಿಂದ ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ಎಂದು ಹೇಳಿದರು.

ವಾಣಿಜ್ಯ ನಿಕಾಯ್ದ ಡೀನ್ ರಾಧಾ ಪ್ರೊ ಲಕ್ಷ್ಮಣ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡಿ ಒದಗಿಸುವ ಶಿಕ್ಷಣd ಜೊತೆಗೆ ಪರೀಕ್ಷೆ ನೀಡಿ ಜೀವನದ ಶಿಕ್ಷಣವನ್ನು ಕಲಿಸುವತ್ತ  ಶಿಕ್ಷಕರು ಚಿಂತಿಸಬೇಕು ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳಾದ ಶಶಿಧರ್ ರವರು ಮಾತನಾಡುತ್ತಾ ವೇದಿಕೆಗಳ ಯಾವುದೇ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯ ಧನಾತ್ಮಕವಾಗಿ ಸ್ಪಂದಿಸುತ್ತದೆ ನಾವುಗಳು ಯಾವಾಗಲೂ ಸದಾ ಜೊತೆಗಿರುತ್ತೇವೆ ಎಂದು ಹೇಳಿದರು.

 

ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಂದ ಇತ್ತೀಚಿಗೆ ನಿವೃತ್ತರಾದ ಪ್ರೊ ಮರುಳ ಸಿದ್ದಪ್ಪ ಪ್ರೊ ಶಿವಪ್ಪ ಹೆಚ್ ಕೆ ಪ್ರೊ ಸಂಪಗಿ ನಾರಾಯಣ್ ರಾವ್ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಹಾಗೆ ಪಿ ಹೆಚ್ ಡಿ ಪಡೆದ ಉಪನ್ಯಾಸಕರಾದ ನಾಗವೇಣಿ ಹಾಗೂ ಶ್ರೀಮತಿ ಹಾಲಮ್ಮರವರನ್ನು ಸನ್ಮಾನಿಸಲಾಯಿತು.

ಬಿಕಾಂ ಪರೀಕ್ಷಾ ಮಂಡಳಿ ಅಧ್ಯಕ್ಷರಾದ ಬಿಸಿ ತಹಸಿಲ್ದಾರ್ ಅವರು ವೇದಿಕೆಯ ಎಲ್ಲಾ ಪದಾಧಿಕಾರಿಗಳ ಶುಭ ಕೋರಿದರು ಹಾಗೂ ನಿವೃತ್ತ ಅದ್ಯಾಪಕರುಗಳಿಗೆ ಸನ್ಮಾನಿಸಿದರು

 

ವೇದಿಕೆಯ ಅಧ್ಯಕ್ಷರಾದ ಪ್ರೊ ಕರಿಬಸಪ್ಪ ರವರು ಅಧ್ಯಕ್ಷರ ಭಾಷಣ ಮಾಡುತ್ತಾ  ವೇದಿಕೆಯು ಸದಾ ಅಧ್ಯಾಪಕ ಸ್ನೇಹ ಆಗಿ ಅಧ್ಯಾಪಕರ ಕುಂದುಕೊರತೆಗಳಿಗೆ ಸ್ಪಂದಿಸುತ್ತದೆ. ಅಧ್ಯಾಪಕರು ನಿರಂತರ ಅಧ್ಯಯನದಿಂದ ಬೌದ್ಧಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ  ಅದಕ್ಕೆ ವೇದಿಕೆ ಸ್ಪಂದಿಸುತ್ತದೆ ಎಂದು ಹೇಳಿದರು.

 

ಕಾರ್ಯಕ್ರಮವನ್ನು ವೇದಿಕೆ ನಿರ್ದೇಶಕರಾದ ಅರವಿಂದ ನಿರೂಪಿಸಿದರು ಖಜಾಂಚಿಯಾದ ಬಾಬು ಕೆ ಎ ರವರು ಅತಿಥಿಗಳನ್ನು ಸ್ವಾಗತಿಸಿದರು ಬಿಕಾಂ ಮತ್ತು ಬಿಬಿಎ ಪರೀಕ್ಷಾ ಮಂಡಳಿಯ ಅಧ್ಯಕ್ಷರುಗಳು ಹಾಗೂ ಇತರೆ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top