ಬಳ್ಳಾರಿ: “ಇಂದಿನ ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಮನಸ್ಥಿತಿಯೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಸಾಧಾರಣ ಕಲಿಕೆಯ ಅನುಭವವನ್ನು ಒದಗಿಸಲು ಬದ್ಧವಾಗಿ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಬೆಳೆಸುವ ಸಮಗ್ರ ಶೈಕ್ಷಣಿಕ ವಾತಾವರಣವನ್ನು ಪೋಷಿಸುವ ಗುರಿಯನ್ನು ಹೊಂದಿರುವ ತುಂಗಭದ್ರ ಎಜುಕೇಷನ್ ಹೆಲ್ತ್ & ರೂರಲ್ ಡೆವೆಲೊಪ್‌ಮೆಂಟ್ ಟ್ರಸ್ಟ್(ರಿ) ಸಂಸ್ಥೆಯ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ, 2023-24ನೇ ಶೈಕ್ಷಣಿಕ ವರ್ಷದಿಂದ ಕಿಷ್ಕಿಂದ ವಿಶ್ವವಿದ್ಯಾಲಯ ಪ್ರಾರಂಭಿಸುತ್ತಿರುವುದಾಗಿ” ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿಶ್ವವಿದ್ಯಾಲಯದ ಅನುಮೋದನೆಗೆ ಕಾರಣರಾದ ಕರ್ನಾಟಕ ಘನ ಸರ್ಕಾರಕ್ಕೆ ಹೃತ್ಪೂರ್ವಕವಾದ ವಂದನೆಗಳನ್ನು ತಿಳಿಸಿದ್ದಾರೆ
ಸಂಸ್ಥೆಯು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ನೇಮಕಗೊಂಡಿರುವ ಡಾ. ಯಶವಂತ್ ಭೂಪಾಲ್‌ರವರು ಮಾತನಾಡುತ್ತಾ “ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಂಸ್ಥೆಗಳಾದ 1)ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, 2)ಸಂಜಯ ಗಾಂಧಿ ಪಾಲಿಟೆಕ್ನಿಕ್, 3)ಬಳ್ಳಾರಿ ಪ್ರೆöÊವೇಟ್ ಐ.ಟಿ.ಐ, 4)ಬಿಪಿಎಸ್‌ಸಿ ಸ್ಕೂಲ್ & ಕಾಲೇಜ್, 5)ಬಿಪಿಎಸ್‌ಸಿ ಪದವಿ ಪೂರ್ವ ಕಾಲೇಜ್, 6)ಬಳ್ಳಾರಿ ಬಿಸಿನೆಸ್ ಕಾಲೇಜ್‌ಗಳು ಉತ್ತಮ ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶದೊಂದಿಗೆ ಹೆಚ್ಚಿನ ಪ್ಲೇಸ್‌ಮೆಂಟ್ ಮತ್ತು ಕೌಶಲ್ಯಾಬಿವೃದ್ದಿಗೆ ಹೆಸರುವಾಸಿಯಾಗಿವೆ. ಈ ಅನುಭವವೇ ಕಿಷ್ಕಿಂದ ವಿಶ್ವವಿದ್ಯಾಲಯ ಸ್ಥಾಪಿಸಲು ನಾಂದಿಯಾಗಿದೆ” ಎಂದು ತಿಳಿಸಿದರು.
ಕಿಷ್ಕಿಂದ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಕಾಯ್ದೆ 2023 ಕರ್ನಾಟಕ ಅಧಿನಿಯಮ ಸಂಖ್ಯೆ: 20/2023 ಸ್ಥಾಪಿತವಾಗಿ ಈ ವರ್ಷದಿಂದ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ಪಡೆದಿರುತ್ತದೆ. ವಿಶ್ವವಿದ್ಯಾಲಯವು ಬಳ್ಳಾರಿ-ಸಿರುಗುಪ್ಪ ರಸ್ತೆಯ ಸಿಂಧಿಗೇರಿ ಗ್ರಾಮದ ಹತ್ತಿರ ಟ್ರಸ್ಟಿನ ಸ್ವಂತ 50 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಶಾಶ್ವತ ಯೂನವರ್ಸಿಟಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ಇನ್ನೂ 2 ವರ್ಷದಲ್ಲಿ ಅಂದಾಜು ರೂ.100 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ, ಪ್ರಯೋಗಾಲಯ, ಆಡಳಿತ ಭವನ, ಗ್ರಂಥಾಲಯ, ವಸತಿ ಸೌಕರ್ಯ, ಆಟದ ಮೈದಾನ ಹಾಗೂ ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಹಾಗೂ ಈಗಾಗಲೇ ಅವಶ್ಯಕತೆಗೆ ಬೇಕಾಗುವ ಎಲ್ಲಾ ರೀತಿಯ ಕಾರ್ಯಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.
ಕಿಷ್ಕಿಂದ ವಿಶ್ಯವಿದ್ಯಾಲಯವನ್ನು ಎರಡು ವರ್ಷದ ಕಾಲ ತಾತ್ಕಾಲಿಕವಾಗಿ ಬಿಐಟಿಎಂ ಮತ್ತು ಬಿಬಿಸಿಯಲ್ಲಿ ನಡೆಸಲು ಸರ್ಕಾರದ ಅನುಮತಿ ದೊರೆತಿದ್ದು, ಇಂಜಿನಿಯರಿAಗ್ ಕೋರ್ಸುಗಳನ್ನು ಕರ್ನಾಟಕ-ಸಿಇಟಿ ಮುಖಾಂತರ ಭರ್ತಿ ಮಾಡಲು ಸಿಇಟಿ ಕೌನ್ಸಿಲಿಂಗ್ ಕೋಡ್ ಇ-301 ನೀಡಲಾಗಿದೆ. ಇದನ್ನು ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮೂಲಕ ಉಪಯೋಗಿಸಿಕೊಳ್ಳಬಹುದು. ಇದೇ ರೀತಿ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಯ ಪ್ರವೇಶಗಳಿಗಾಗಿಯೂ ನೊಂದಯಿಸಲು ಅವಕಾಶ ಇರುತ್ತದೆ.
ಈ ವರ್ಷದಿಂದ ಇಂಜಿನಿಯರಿಂಗ್ & ಟೆಕ್ನಾಲಜಿ ಸ್ಟಿಸ್ಟಮ್ ನಿಂದ 4 ವರ್ಷದ ಪದವಿ ಕೋರ್ಸುಗಳಾದ ಬಿ.ಟೆಕ್-ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಬಿ.ಟೆಕ್-ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಬಿ.ಟೆಕ್-ಎಲೆಕ್ಟ್ರಿಕಲ್ & ಎಲೆಕ್ಟಾçನಿಕ್ಸ್ ಇಂಜಿನಿಯರಿಂಗ್ ಹಾಗೂ 3 ವರ್ಷದ ಪದವಿ ಬಿ.ಸಿ.ಎ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಎ, ಎಂಸಿಎ ಕೋರ್ಸುಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿರುತ್ತದೆ.
ಕಿಷ್ಕಿಂದ ವಿಶ್ವವಿದ್ಯಾಲಯವು ಕೇಂದ್ರ ಸರ್ಕಾದ ಯುಜಿಸಿ ಯಿಂದ ಅನುಮೋದನೆಗೊಂಡು, ಆಲ್ ಇಂಡಿಯಾ ಯುನಿವರ್ಸಿಟಿ ಅಸೋಸಿಯೇಷನ್ ನಲ್ಲಿ ನೊಂದಾಯಿತಗೊಳ್ಳಲಿದೆ. ಕೇಂದ್ರ ಸರ್ಕಾರದ ಚಿಂತನೆಯಂತೆ ಹೊಸ ಎನ್.ಇ.ಪಿ ಆಧಾರದ ಮೇಲೆ ದೇಶದಾದ್ಯಂತ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಅನುಮೋದಿಸಿ, ಪ್ರತಿಷ್ಠಿತ ಸಂಸ್ಥೆಗಳು ಈಗಾಗಲೇ ಕರ್ನಾಟಕದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿರುತ್ತಾರೆ. ಕರ್ನಾಟಕದಲ್ಲಿ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಯಗಾಳಾದ ಪೆಸಿಟ್, ದಯಾನಂದ ಸಾಗರ್, ಗೀತಂ, ಆರ್.ವಿ., ರೇವಾ, ಕೆಎಲ್‌ಇ, ಜೆ.ಎಸ್.ಎಸ್., ಹೀಗೆ ಒಟ್ಟು 25 ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ.
ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಕಿಷ್ಕಿಂದ ವಿಶ್ವವಿದ್ಯಾಲಯವು ಬೌದ್ಧಿಕ ಬೆಳವಣಿಗೆ ಮತ್ತು ಪಾಂಡಿತ್ಯಪೂರ್ಣ ಅನ್ವೇಷಣೆಯ ದಾರಿದೀಪವಾಗಿ, ಕಲಿಕೆಗೆ ಸಮಗ್ರ, ವಿದ್ಯಾರ್ಥಿ-ಕೇಂದ್ರಿತ ವಿಧಾನವನ್ನು ಒದಗಿಸುವ ದೃಷ್ಟಿಕೋನದಿಂದ ಪ್ರೇರೇಪಿಸಲ್ಪಟ್ಟು, ಅವರ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳ ಮೂಲಕ ಭವಿಷ್ಯವನ್ನು ರೂಪಿಸುವ ಕಲಿಯುವವರ ವೈವಿಧ್ಯಮಯ ಸಮುದಾಯವನ್ನು ಪೋಷಿಸಲು ಬಯಸುತ್ತದೆ.