ಬಳ್ಳಾರಿ: ಚುನಾವಣೆ ಸಮಯದಲ್ಲಿ ನನ್ನ ಕೈ ಹಿಡುದು ನನ್ನ ಈ ಸ್ಥಾನಕ್ಕೆ ತಂದಿದ್ದಿರಿ ನಿಮ್ಮೆರಿಗೂ ನಾನು ಅಭಾರಿಯಾಗಿರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಹೇಳಿದರು.
ನಗರದ ಸಚಿವರ ಗೃಹ ಕಚೇರಿಯಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ನಾನು ಶ್ರಮವಹಿಸುತ್ತೇನೆ. ನಿಮಗೆ ಸಮಸ್ಯೆ ಇದ್ದಲ್ಲಿ ನೇರವಾಗಿ ನನ್ನನ್ನು ಭೇಟಿ ಮಾಡಿ, ನಿಮ್ಮ ಸೇವೆಗೆ ನಾನು ಸದಾ ಸಿದ್ದ. ನನಗಾಗಿ ಯಾರು ಕಾಯಬೇಕಿಲ್ಲ ನಾನು ಇಲ್ಲದ ಸಮಯದಲ್ಲಿ ಪೂನ್ ಕರೆ ಮಾಡಿದರೆ ಸಾಕು ನಾನು ಸ್ಪಂದಿಸುತ್ತೇನೆ ಎಂದು ಸಚಿವರು ಹೇಳಿದರು.
ನಂತರ ಸಮಸ್ಯೆ ಹೇಳಿಕೊಂಡು ಬಂದವರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಅಭಿಮಾನಿಗಳು ಹಾಜರಿದ್ದರು.
Facebook
Twitter
LinkedIn
WhatsApp
Telegram
Email