ನಿಮ್ಮ ಭವಿಷ್ಯಕ್ಕಾಗಿ ನೀವು ಓದಬೇಕು  : ಪ್ರೊ.ಬಾಬು

ದಾವಣಗೆರೆ : ನಿಮ್ಮ ಮುಂದಿನ ಭವಿಷ್ಯಕ್ಕಾಗಿ ನೀವು ಓದಬೇಕು ಓದಿದರೆ ಮಾತ್ರ ಭವಿಷ್ಯ ಸದೃಢಗೊಳ್ಳಲು, ಜ್ಞಾನ ಗಳಿಸಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು  ಹೇಳಿದರು.

 

ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ  ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ಗೆಲ್ಯಕ್ತಿಕ್ ಫಿಸ್ತಾ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವೆ ಕಡಿಮೆಯಾಗಿಬಿಟ್ಟಿದೆ ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಪ್ರತಿನಿತ್ಯ ಓದುವ ಹವ್ಯಾಸದಿಂದ ಜ್ಞಾನ  ಅಭಿವೃದ್ಧಿಯಾಗಿ ಸಮಾಜದ ತಿಳುವಳಿಕೆ ಹೆಚ್ಚಾಗಿ ಸಮಾಜದಲ್ಲಿ ಒಳ್ಳೇದು ಕೆಟ್ಟದನ್ನು ನಿರ್ಧರಿಸುವ ತಂತ್ರಗಾರಿಕೆ ತಿಳಿಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪದವಿ ನಂತರ ಮುಂದಿನ ಭವಿಷ್ಯದ ಆಯ್ಕೆ ಮಾಡುವಾಗ ತನ್ನ ಸ್ವ ಸಾಮರ್ಥ್ಯ ಏನೆಂಬುದನ್ನು ಅರಿತು ಕೊಂಡು  ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ತಮ್ಮ ಜೀವನದ ಗುರಿಯನ್ನು ಸುಲಭವಾಗಿ ಮುಟ್ಟಲು ಸಾಧ್ಯ ಇದಕ್ಕೆ ಸತತ ಪ್ರಯತ್ನ ಆತ್ಮವಿಶ್ವಾಸ ಛಲ ಹಾಗೂ ನಂಬಿಕೆ ಬಹುಮುಖ್ಯ ಎಂದು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಜ್ಞಾನ ವಿದ್ಯಾರ್ಥಿಗಳಿಗೆ ತಮ್ಮ ಪದವಿ ನಂತರ ಹಲವಾರು ಅವಕಾಶಗಳಿವೆ ವಿದ್ಯಾರ್ಥಿಗಳು ಒಂದಿಷ್ಟು ಕೌಶಲ್ಯಗಳನ್ನು  ಕಲಿತುಕೊಂಡರೆ ಉದ್ಯೋಗ ತಮ್ಮ ಕೈಯಲ್ಲಿದ್ದಂತೆ ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ತಮ್ಮ ಕಾಲೇಜು ಮಟ್ಟದಲ್ಲಿ ಅರಿತುಕೊಂಡರೆ ಸುಲಭವಾಗಿ ಉದ್ಯೋಗಗಳಿಸಲು ಸಾಧ್ಯ ಎಂದು ಹೇಳಿದರು.    

 

ವಿದ್ಯಾರ್ಥಿಗಳು ಕನಸು ಕಾಣುವುದನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಕನಸು ಕಾಣಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. 

ಜಗತ್ತು ಪ್ರತಿನಿತ್ಯ ಬದಲಾಗುತ್ತ ಸಾಗುತ್ತದೆ ಬದಲಾವಣೆಗೆ ನಮ್ಮನ್ನು ಒಗ್ಗಿಸಿಕೊಳ್ಳಬೇಕು ಬದಲಾದಂತೆಲ್ಲ ಜೀವನಮಟ್ಟವನ್ನು ಬದಲಾಯಿಸುವ ಪ್ರಯತ್ನ ಮಾಡಿದಾಗ ನಾವು ಸಮಾಜದಲ್ಲಿ ಗೌರವಯುತವಾಗಿ ಬಾಳಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ವಾಮದೇವಪ್ಪನವರು ಮಾತನಾಡುತ್ತಾ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಷೆಯಲ್ಲಿ  ಪ್ರಬುದ್ಧತೆಯನ್ನು   ಸಾಧಿಸಿದರೆ ನೀವು ಎಲ್ಲಾ ಕಡೆಯಲ್ಲೂ ಸಲುವರಾಗುತ್ತೀರಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀವು ಕನ್ನಡವಾಗಿರಿ ಎಂದು ಹಾರೈಸಿದರು

 

ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆದ ಶ್ರೀಮತಿ ಶೈಲಜಾ ರವರು  ಮಾತನಾಡುತ್ತಾ ವಿದ್ಯಾರ್ಥಿಗಳು ವಾಸ್ತವದ ಸ್ಥಿತಿಯನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ ಪ್ರತಿದಿನದ ಪ್ರಚಲಿತ ಘಟನೆಗಳನ್ನು ನೋಡಿಕೊಂಡು ಅದರೊಂದಿಗೆ ಜೀವನ ನಡೆಸುವುದು ಇಂದು ಸಾಮಾನ್ಯವಾಗಿದೆ ಹಾಗಾಗಿ ಪ್ರತಿದಿನದ ಮಾಹಿತಿಯನ್ನು ಕ್ರೋಡೀಕರಿಸಿಕೊಳ್ಳುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳಿಸಿಕೊಂಡರೆ ಅವರ ಯಶಸ್ಸಿಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ ಡಾ.ಭೀಮಣ್ಣ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಶಿವರಾಜ್   ಪ್ರೊ ಗೌಸಖಾನ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಎಂ ಮಂಜಣ್ಣ ರವರು ಹಾಗೂ ಕಚೇರಿ ಅಧ್ಯಕ್ಷರಾದ  ಶೇಷಪ್ಪ ರವರು ಮಾತನಾಡಿದರು.

 

ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top