ನಿರ್ದೇಶಕ ರಾಮ್ ಗೋಪಾಲ್ ವರ್ಮ, ನಟ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ, ಎಂದಾಗಲೇ ಚಿತ್ರ ಪ್ರೇಮಿಗಳು ತೆರೆದ ಕಣ್ಣುಗಳಿಂದ ನೋಡಿದ್ದರು. ಇದೀಗ ಅವರ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವಿಲ್ ಮಾಡಲಾಗಿದೆ. ಹೌದು ಇತ್ತೀಚೆಗೆ ನಡೆದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್ ’ಐ ಯಾಮ್ ಆರ್’ ಶೀರ್ಷಿಕೆ ಬಿಡುಗಡೆ ಮಾಡಿ, ’ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿನಿಮಾದಲ್ಲಿ ಇಲ್ಲ ಅಂತ? ಏಕೆಂದರೆ, ನಾನು ನಾಯಕನಾಗಲು ಉಪೇಂದ್ರ ಅವರೆ ಕಾರಣ. ನಿರ್ದೇಶಕನಾಗಬೇಕೆಂದಿದ್ದ ನನಗೆ ನಾಯಕನಾಗಲು ಪ್ರೇರೇಪಿಸಿದೇ ಅವರು. ಇನ್ನೂ ನನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಸಿನಿಪಯಣ ಆರಂಭಿಸಿದ್ದು ಆರ್ ಜಿ ವಿ ಅವರು. ಇವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರವುದು ಖಂಡಿತ. ನಿರ್ಮಾಪಕ ರಾಜ್ ಯಜಮಾನ್ ಅವರನ್ನು ಬಹಳ ದಿನಗಳಿಂದ ಬಲ್ಲೆ. ಇಲ್ಲಿಗೆ ಬಂದು ಅವರ ಇತಿಹಾಸ ತಿಳಿದು ಇನ್ನೂ ಸಂತೋ?ವಾಯಿತು. ಆರ್ ಎಂದರೆ ಏನು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್, ಆರ್ ಎಂದರೆ ರಿಯಲ್ ಸ್ಟಾರ್. ಆರ್ ಎಂದರೆ ರಾಮ್ ಗೋಪಾಲ್ ವರ್ಮ ಅಂತ ಇರಬೇಕು. ಹಿಂದೆ ಮೂರು ಆರ್ ಬಂದಾಗ ಯಾರು ಕೇಳಲಿಲ್ಲ. ಈಗ ಒಂದು ಆರ್ ಬಗ್ಗೆ ಎ? ಕೇಳುತ್ತಿದ್ದಿರಾ? ನೋಡಿ’ ಎಂದು ಹೇಳಿದರು.
’ಉಪೇಂದ್ರ ಅವರು ಈಗಾಗಲೇ ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಹೆಸರು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಆರ್ ಎಂದರೆ ಏನು? ಎಂಬುದನ್ನು ಈಗಲೇ ಹೇಳುವುದಿಲ್ಲ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಒಟ್ಟಿನಲ್ಲಿ ನಮ್ಮಿಬ್ಬರಿಂದ ಉತ್ತಮ ಚಿತ್ರ ಬರಲಿದೆ’ ಎಂದ ರಾಮ ಗೋಪಾಲ್ ವರ್ಮ, ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ “ಕೆ ಜಿ ಎಫ್ ೨” ಚಿತ್ರತಂಡಕ್ಕೆ ಶುಭ ಕೋರಿದರು. ’ನಾನು ಆರ್ ಜಿ ವಿ ಅವರ “ಶಿವ” ಸಿನಿಮಾ ನೋಡಿ, “ಓಂ” ಚಿತ್ರ ಮಾಡಬೇಕೋ? ಬೇಡವೋ? ಎಂದು ಯೋಚಿಸಿದ್ದೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿರುವವರು ಆರ್ ಜಿ ವಿ ಸರ್. ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ನೈಜಘಟನೆ ಆಧಾರಿತ ಚಿತ್ರವಿದು. ಅವರು ಹೇಳಿದಂತೆ ಉತ್ತಮ ಚಿತ್ರ ಆಗಿ ಹೊರಹೊಮ್ಮುವ ವಿಶ್ವಾಸವಿದೆ. ಟೈಟಲ್ ರಿಲೀಸ್ ಮಾಡಿಕೊಟ್ಟ ಸುದೀಪ ಅವರಿಗೆ ಧಾನ್ಯವಾದ. ಇನ್ನೂ ನಿರ್ಮಾಪಕ ರಾಜ್ ಅವರ ಬಗ್ಗೆ ಹೇಳಬೇಕಾದರೆ, ಇವರು ನನ್ನ ಜೊತೆ ನಟಿಸಿದ್ದಾರೆ. “ಉಪೇಂದ್ರ” ಚಿತ್ರದಲ್ಲಿ ನಾಯಕಿ ದಾಮಿನಿ ಅವರ ಲವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು’ ಎಂದು ಉಪೇಂದ್ರ ನೆನಪಿಸಿಕೊಂಡರ
’ಇಂದು ನನ್ನ ಹುಟ್ಟುಹಬ್ಬ. ಈ ಮೂರು ದಿಗ್ಗಜರು ಸೇರಿ ನನ್ನ ನಿರ್ಮಾಣದ ಚಿತ್ರಕ್ಕೆ ಚಾಲನೆ ನೀಡಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಕಿಚ್ಚ ಸುದೀಪ, ಉಪೇಂದ್ರ ಹಾಗೂ ಆರ್ ಜಿ ವಿ ಅವರಿಗೆ ಅನಂತ ವಂದನೆ’ ಎಂದರು ನಿರ್ಮಾಪಕ ರಾಜ್ ಯಜಮಾನ್. ನಿರ್ಮಾಪಕ ರಾಜ್ ಯಜಮಾನ್ ಕುಟುಂಬದವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಇವರ ತಂದೆ ಹಾಗೂ ಅಜ್ಜಿಯವರು ರಾಜಕುಮಾರ್ ಅಭಿನಯದ “ಭಲೇರಾಜ”, “ಪ್ರೇಮದ ಕಾಣಿಕೆ”, “ಸಾಕ್ಷಾತ್ಕಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.