ಪಡ್ಡೆ ಹೈಕ್ಳ ಮನಸು ಗೆದ್ದು ವೈರಲ್ ಆದ ಗಾಳಿಪಟ-೨ ಎಕ್ಸಾಂ ಸಾಂಗ್


ಸ್ಯಾಂಡಲ್‌ವುಡ್‌ನಲ್ಲಿ ಗಣೇಶ್ ಹಾಗೂ ಯೋಗರಾಜ್ ಭಟ್ ಮುಂದಾಳತ್ವದಲ್ಲಿ ’ಗಾಳಿಪಟ’ ಹಾರಾಡಿ ೧೪ ವರ್ಷ ಆಯ್ತು. ಈಗ ’ಗಾಳಿಪಟ ೨’ ಸರದಿ. ಹೌದು ಗಾಳಿಪಟ ೨ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದು, ಇತ್ತೀಚೆಗೆ ಈ ಚಿತ್ರದ ಎಕ್ಸಾಂ ಸಾಂಗ್ ರಿಲೀಸ್ ಆಗಿದೆ. ಯೋಗರಾಜ್ ಭಟ್‌ರ ಸಾಹತ್ಯ, ವಿಜಯ್ ಪ್ರಕಾಶ್ ಧ್ವನಿ ಹಾಗೂ ಅರ್ಜುನ್ ಜನ್ಯ ಸಂಗೀತ ಪ್ರೇಕ್ಷಕರ ಮನಸು ಗೆದ್ದಿದೆ. ಅದರಲ್ಲೂ ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಈ ಗೀತೆಯಲ್ಲಿ ಬರುವ ಭಟ್‌ರ ಸಾಹಿತ್ಯದ ಸಾಲುಗಳಿಗೆ ಪಡ್ಡೆ ಹೈಕ್ಳು ಸೇರಿದಂತೆ ಕಾಲೇಜ್ ಹುಡುಗರು ಶಿಳ್ಳೆ ಹೊಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಎಕ್ಸಾಂ ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ’ನಂಗು ನಿರ್ದೇಶಕರಿಗೂ ಸಂಬಂಧವೇ ಇಲ್ಲ. ನಾನು ಸುಧಾಮ್ಮಾ ತಿರುಪತಿಯಿಂದ ಬರುವಾಗ ಅವರಿಗೆ ಪೋನ್ ಕಾಲ್ ಬಂತು. ಅವರು ನೋಡಿ ಯೋಗರಾಜ್ ಭಟ್ ಒಳ್ಳೆ ಕಥೆ ಇದೆ ಎನ್ನುತ್ತಿದ್ದಾರೆ ನೋಡುವೆಯಾ ಎಂದರು. ಸುಧಾಮ್ಮಾ ಒಂದು ಮಾತು ಹೇಳಿದ್ರಿಂದ ಸಿನಿಮಾ ಶುರು ಆಯ್ತು. ಕೊರೋನಾ ಟೈಮ್‌ನಲ್ಲೂ ಕರ್ಗಿಸ್ತಾನದಲ್ಲಿ ೨೦ ಶೂಟ್ ಮಾಡಲಾಗಿದೆ. ಸಾಂಗ್‌ಗಳು ತುಂಬಾ ಚನ್ನಾಗಿ ಬಂದಿವೆ. ಸಿನಿಮಾ ಕೂಡಾ ಅ? ಚನ್ನಾಗಿ ಬಂದಿದೆ. ನಾನು ಸಿನಿಮಾ ಎಕ್ಸಾಂನಲ್ಲಿ ನಾಲ್ಕು ಸಲ ಪೇಲ್ ಆಗಿದ್ದು, ಈ ಸಲ ಪಾಸ್ ಆಗಲೇ ಬೇಕು. ಅದಕ್ಕಾಗಿ ಮಾದ್ಯಮದವರ ಸಹಕಾರ ಬೇಕು’ ಎಂದು ಹೇಳಿದರು.


ನಂತರ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್ ’ಎಲ್ಲರು ಹೇಳುತ್ತಿರುವಂತೆ ಗಾಳಿಪಟ ಬ್ರಾಂಡ್. ಈ ಚಿತ್ರದಲ್ಲಿ ಅನಂತನಾಗ್ ಸರ್ ಮೇ? ಪಾತ್ರ ಮಾಡಿದ್ದು, ಸಿನಿಮಾ ಕಥೆ ಮೇಷ್ಟ್ರ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈ ಎಕ್ಸಾಂ ಸಾಂಗ್‌ನಲ್ಲಿ ನನ್ನ ಅರ್ಜುನ್ ಧ್ವನಿ ಇದ್ದು, ಗೀತೆಯಲ್ಲಿ ಬರುವ ಬುಲೆಟ್ ಪ್ರಕಾಶ್‌ಗೆ ಹುಬ್ಬಳ್ಳಿ ಭಾ?ಯಲ್ಲಿ ಬರೆದು ಕೊಟ್ಟಿದ್ದೆ ಅದಕ್ಕೆ ನಾನು ಧ್ವನಿ ನೀಡಿದೆ. ಇದು ಅವರ ಕೊಣೆಯ ಸಿನಿಮಾ ಎಂಬುದು ಬೇಸರವಿದೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ ಗಣೇಶ್, ’ಗಾಳಿಪಟ ಅಂದ್ರೆ ಎಮೋ?ನ್ ಅರ್ಥ ಬರುತ್ತದೆ. ತುಂಬಾ ವರ್ಷವಾದಮೇಲೆ ಕುದುರೆ ಮುಖದಲ್ಲಿ ಕಾಲೇಜ್ ಸೆಟ್ ಹಾಕಿ ಶೂಟ್ ಮಾಡಲಾಗಿದೆ. ಡಬ್ಬಿಂಗ್‌ನಲ್ಲಿ ಸಿನಿಮಾ ನೋಡುವಾಗ ತುಂಬಾ ಖುಷಿ ಆಯ್ತು. ಫನ್ ಎಮೋ?ನ್ ಜೊತೆ ರಿಲೇಶನ್ ಬಗ್ಗೆ ಹೇಳಲಾಗಿದೆ’ ಎನ್ನುವರು. ಹಾಗೆಯೇ ಇನ್ನೋರ್ವ ನಾಯಕರಾದ ದಿಗಂತ್ ಹಾಗೂ ಪವನ್ ಕುಮಾರ್ ತಮ್ಮ ಅನುಭವ ಹಂಚಿಕೊಂಡರು. ಚಿತ್ರದ ನಾಯಕಿ ಶರ್ಮಿಳಾ ಮಂಡ್ರೆ ’ನಾನು ಕೂಡ ಎಕ್ಸಾಮ್ ಟೈಮ್ ಭಯ ಪಡತಾ ಇದ್ದೆ. ಈ ಚಿತ್ರದಲ್ಲಿ ನಾನು ಟೀಚರ್ ಪಾತ್ರ ಮಾಡಿದ್ದೇನೆ. ಮೂರು ವ? ಆದಮೇಲೆ ಸಿನಿಮಾ ತೆರೆಗೆ ಸಿದ್ದವಾಗಿದೆ. ಈ ಫ್ಯಾಮಿಲಿ ಸ್ಟ್ರಾಂಗ್ ಆಗಿದ್ದು, ೧೪ ವ? ಆದಮೇಲೆ ನಾನು ಕೋಡ ಗಣೇಶ್ ಜೊತೆ ನಟನೆ ಮಾಡಿದ ಖುಷಿ ಇದೆ’ ಎಂದರು. ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ನಿಶ್ವಿಕಾ ನಾಯ್ಡು ಮಾತನಾಡಿ ’ಈ ತಂಡದಲ್ಲಿ ನಾನಿರುವುದು ತುಂಬಾ ಖುಷಿ ಇದೆ. ಗಾಳಿಪಟ ಒಂದು ಬ್ರಾಂಡ್. ಮೊದಲ ಗಾಳಿಪಟ ಸಿನಿಮಾ ಬಂದಾಗ ನಾನು ಸ್ಕೂಲ್‌ನಲ್ಲಿ ಇದ್ದೆ. ಇದರಲ್ಲಿ ಚಿಕ್ಕ ಪಾತ್ರ ಮಾಡಿದ್ದು ಬೋಲ್ಡ ಆಗಿ ಕಾಣಿಸಿಕೊಂಡಿದ್ದೇನೆ’ ಎಂದರು. ನಂತರ ಮತ್ತೋರ್ವ ನಾಯಕಿ ವೈಭವಿ ಶಾಂಡಿಲ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಇನ್ನೋರ್ವ ನಾಯಕಿ ಮಲಯಾಳಂನ ಸಂಯುಕ್ತಾ ಮೆನನ್ ಅಂದಿನ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ.


ಇನ್ನು ಚಿತ್ರದ ಛಾಯಾಗ್ರಾಹಕ ಸಂತೋ? ರೈ ಪತಾಜೆ ’ಭಟ್ರ ಜೊತೆ ಇದು ನನ್ನ ಮೂರನೇ ಸಿನಿಮಾ. ಗಣೇಶ್ ಜೊತೆ ಆರನೇ ಚಿತ್ರ. ಗಾಳಿಪಟ ದೊಡ್ಡ ಕುಟುಂಬ. ಕಥೆ ಬೇರೆ ಬೇರೆ ಸೆಡ್‌ನಲ್ಲಿ ಸಾಗುತ್ತದೆ. ಗಾಳಿಪಟ ೧ರಂತೆ ಇದರಲ್ಲೂ ಛಾಯಾಗ್ರಹಣ ಚನ್ನಾಗಿ ಇರುತ್ತದೆ’ ಎನ್ನುವರು. ಹಿರಿಯ ನಟ ಅನಂತ್ ನಾಗ್ ಮಾತನಾಡಿ ’ಮೂರು ವ?ದ ಅಜ್ಞಾತ ವಾಸದ ನಂತರ ಇಂಥ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಸಿನಿಮಾ ಪ್ರಾರಂಭದಲ್ಲಿ ಕ?ಗಳು ಬಂದು ಸುಧಾಮೂರ್ತಿಯವರು ರಮೇಶ್ ರೆಡ್ಡಿ ಅವರನ್ನು ನಿರ್ದೇಶಕರಿಗೆ ಪರಿಚಯ ಮಾಡಿಸಿದ್ರು. ಅಲ್ಲಿಂದ ಮತ್ತೆ ಸಿನಿಮಾ ಶುರು ಆಯ್ತು. ಸುಂದರವಾದ ಸಿನಿಮಾ ತಯಾರಾಗಿದೆ. ಕನ್ನಡದಲ್ಲಿ ಮಹತ್ವಪೂರ್ವ ಸಿನಿಮಾ ಇದು. ಕನ್ನಡತನ ಉಳಿಸಿಕೊಳ್ಳಬೇಕು ಎಂಬುದಕ್ಕೆ ಸಿನಿಮಾ ನೋಡಬೇಕು’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಂಗಾಯಣ ರಘು ’ಭಟ್ರ್ ಬಾಯ್ ಬಡಕೂ ಸಾಂಗ್ ಚನ್ನಾಗಿ ಬಂದಿದೆ. ಇದರಲ್ಲೂ ನಾನು ತಂದೆ ಪಾತ್ರ ಮಾಡಿದ್ದು, ನಿರೀಕ್ಷೆ ಹುಸಿ ಆಗಿಲ್ಲ. ಗಣೇಶ್ ಯೋಗರಾಜ್ ಭಟ್ರ ಕಾಂಬಿನೆ?ನ್ ಹೀಟ್ ಆಗಿವೆ. ಪಕ್ಕ ಈ ನೆಲದ ಸಿನಿಮಾ ಗಾಳಿಪಟ ೨. ನಾನೂ ಸಿನಿಮಾ ನೋಡಲು ಕಾತುರನಾಗಿದ್ದೇನೆ. ನಮ್ಮ ಚಿತ್ರಕ್ಕೆ ಅಭಿರುಚಿ ಇರುವಂತ ನಿರ್ಮಾಪಕರು ಸಿಕ್ಕಿದ್ದಾರೆ’ ಎನ್ನುವರು. ಸಾಹಿತಿ ಜಯಂತ್ ಕಾಯ್ಕಿಣಿ ’ಗಾಳಿಪಟ ಒಂದು ಬ್ರಾಂಡ್. ನಂಗೆ ಈ ಎಕ್ಸಾಂ ಸಾಂಗ್ ಪೆವರೇಟ್. ಇಗಲು ನಂಗೆ ಎಕ್ಸಾಂ ಬಗ್ಗೆ ಕನಸು ಬಿಳುತ್ತೆ. ಅರ್ಥವಿರುವ ಪದಗಳು ಈ ಗೀತೆಯಲ್ಲಿವೆ. ಈ ತಂಡ ನನ್ನ ಕುಟುಂಬ ಇದ್ದಹಾಗೆ. ಚಿತ್ರಕ್ಕೆ ಎರಡು ಗೀತೆ ಬರೆದಿದ್ದೇನೆ’ ಎನ್ನುವರು.

ಸೂರಜ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ರೀಮತಿ ಉಮಾ, ಎಂ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೈ ಪಾತಾಜಿ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ, ದೀಪು ಎಸ್ ಕುಮಾರ್ ಸಂಕಲನವಿದೆ. ತಾರಾಗಣದಲ್ಲಿ ಬುಲೆಟ್ ಪ್ರಕಾಶ್, ಶ್ರೀನಾಥ್, ಪದ್ಮಜಾ ರಾವ್, ಸುಧಾ ಬೆಳವಾಡಿ, ವಿಶ್ವ, ವಿಜಯ್, ಭರತ್ ಮುಂತಾದವರು ಇದ್ದಾರೆ. ಜೊತೆಗೆ ವಿಶೇಷ ಪಾತ್ರದಲ್ಲಿ ವಿಜಯ್ ಸೂರ್ಯ ಹಾಗೂ ಬಾಲ ಕಲಾವಿದನಾಗಿ ಗಣೇಶ್ ಮಗ ಕೂಡ ನಟನೆ ಮಾಡಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top