ಬೆಂಗಳೂರು : ದೇಶದಲ್ಲಿ ಮೊಟ್ಟಮೊದಲ ಬಾರಿಗೆ 150ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಬ್ರಹ್ಮೋಪದೇಶ,ಉಪನಯನ ಕಾರ್ಯಕ್ರಮ*ಮಲ್ಲೇಶ್ವರಂ ಬ್ರಾಹ್ಮಣ ಸಭಾ(ರಿ)ಕಛೇರಿಯಲ್ಲಿ ಅಧ್ಯಕ್ಷರಾದ ಪ್ರಕಾಶ್ ಎಸ್. ಅಯ್ಯಂಗಾರ್ ರವರು 150ಬ್ರಾಹ್ಮಣ ವಟುಗಳಿಗೆ ಉಚಿತ ಬ್ರಹ್ಮೋಪದೇಶ,ಸಾಮೂಹಿಕ ಉಪನಯಮ ಕಾರ್ಯಕ್ರಮ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಅಧ್ಯಕ್ಷರಾದ ಪ್ರಕಾಶ್ ಎಸ್.ಅಯ್ಯಂಗಾರ್ ರವರು ಮಾತನಾಡಿ ಶ್ರೀ ಜಗದ್ಗುರು ಶಂಕರಚಾರ್ಯ,ಶ್ರೀ ರಾಮಾನುಚಾರ್ಯ ಮತ್ತು ಶ್ರೀ ಮಧ್ವಚಾರ್ಯ ಆಶೀರ್ವಾದದಿಂದ ರಾಷ್ಟ್ರದಲ್ಲಿ ಮೊಟ್ಟಮೊದಲ ಬಾರಿಗೆ 150ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಉಚಿತವಾಗಿ ಬ್ರಹ್ಮೋಪದೇಶ/ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ದಿನಾಂಕ 2-5-2022ರಂದು ರಾಯಲ್ ಸೆನೇಟ್,ಅರಮನೆ ಮೈದಾನ ಹಮ್ಮಿಕೊಳ್ಳಲಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಉಪನಯನ ಮಾಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.
ಬಡ ಬ್ರಾಹ್ಮಣರು ಈಗಾಗಲೇ ಎರಡು ವರ್ಷದಿಂದ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿ ಇದ್ದಾರೆ .ಪೂಜಾಧಿ,ಕರ್ಮಕಾರ್ಯಗಳು, ಮಾಡಬೇಕಾದರೆ ವಟುಗಳು ಉಪನಯನ ಆಗಬೇಕು ಅದರಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಉಪನಯನ ಮಾಡಲು ಅವಕಾಶ ನೀಡಲಾಗಿದೆ . ಬ್ರಾಹ್ಮಣ ವಟುಗಳಿಗೆ ಉಚಿತವಾಗಿ ಬೆಳ್ಳಿಯ ಉದ್ದರಣೆ,ಪಂಚಪಾತ್ರೆ ಮತ್ತುಸಂಧ್ಯವಂದನೆ ಪುಸ್ತಕ ನೀಡಲಾಗುತ್ತಿದೆ. ವಟುವಿನ ತಾಯಿಗೆ ಸೀರೆ, ತಂದೆಗೆ ಪಂಚೆ,ಶಾಲ್ಯವನ್ನು ಬ್ರಾಹ್ಮಣ ಸಭಾದಿಂದ ನೀಡಲಾಗುತ್ತಿದೆ. ಉಪನಯನ ವಟುಗಳ ಕುಟುಂಬದವರಿಗೆ ಆಹ್ವಾನ ನೀಡಲಾಗಿದೆ ಅಂದಾಜು 5ಸಾವಿರ ಬ್ರಾಹ್ಮಣ ಸಮುದಾಯದವರು ಬರುವ ಸಾಧ್ಯತೆ ಎಲ್ಲರಿಗೂ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.
ಶ್ರೀವೈಷವ,ಸ್ವಾರ್ತ,ಮಾಧ್ವ ಸಂಪ್ರಾದಯ ತ್ರಿಮತಸ್ಥ ಬ್ರಾಹ್ಮಣರು ಎಲ್ಲರು ಒಂದೇ . ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವನ್ನು ಆರ್ಥಿಕವಾಗಿ ಸಬಲರಾಗಿ ಮಾಡಬೇಕು ಅವರ ಸಹ ಉತ್ತಮ ಜೀವನ ಸಾಗಿಸಲು ಸಹಕಾರಿಯಾಗಬೇಕು ಎಂದು ಮಲ್ಲೇಶ್ವರಂ ಬ್ರಾಹ್ಮಣ ಸಭಾ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ ಎಂದು ಹೇಳಿದರು.