ಶಿಡ್ಲಘಟ್ಟ: ಬುಧವಾರ ಮದ್ಯ ರಾತ್ರಿ ಅಪಘಾತವೊಂದು ಶಿಡ್ಲಘಟ್ಟ ತಾಲ್ಲೂಕಿನ ಮಾಳಮಾಚನಹಳ್ಳಿ ಹಾಗೂ ಚಿಕ್ಕದಾಸರಹಳ್ಳಿ ಮಾರ್ಗ ಮದ್ಯದಲ್ಲಿ ನಡೆದಿದೆ. ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು,ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ.ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟವರು .ಚಿಕ್ಕದಾಸರಹಳ್ಳಿ ಗ್ರಾಮದ ನಾಗರಾಜಪ್ಪರವರ ಮಗ ಕೃಷ್ಣಪ್ಪ (35) ಹಾಗೂ ಮಾಳಮಾಚನಹಳ್ಳಿ ಗ್ರಾಮದ ಮಂಜುನಾಥ್ವರವರ ಮಗ ಅಭಿ (21) ಎಂದು ತಿಳಿದುಬಂದುದೆ ಮಾಳಮಾಚನಹಳ್ಳಿ ಗ್ರಾಮದ ರಘು ಮತ್ತು ಭಾರತ್ ರವರಿಗೆ ಗಂಭೀರ ಸ್ವರೂಪದ ಗಾಯಗೊಂಡಿದೆ.
ಅಪಘಾತವಾದ ನಂತರದ ಪರಿಸ್ಥಿತಿಯನ್ನ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಪಘಾತವಾದ ಬಳಿಕ ಸ್ಥಳಕ್ಕೆ ಅಂಬ್ಯುಲೆನ್ಸ್ ಬಂದಿದ್ದು, ಗಾಯಾಳುಗಳನ್ನ ಆಸ್ಪತ್ರೆಯ ಸಾಗಿಸಲಾಗಿದೆ. ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶಿಲನೆಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.