ದಾವಣಗೆರೆ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಮಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ನಾಯಕರ ಕೊಡುಗೆ ಕುರಿತು ಸ್ಮರಿಸಿದರು. ಇದೇ ವೇಳೆ ಅವರು ಕಿತ್ತೂರಿನ ವೀರ ರಾಣಿ ಚೆನ್ನಮ್ಮ ಅವರ ಕಲಾಕೃತಿ ಅನಾವರಣಗೊಳಿಸಿದರು. ಪೀಠಾಧೀಶರಾದ ಶ್ರೀ ವಚನಾನಂದ ಸ್ವಾಮಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ವಿನಯ ಕುಲಕರ್ಣಿ, ಪರಮೇಶ್ವರ ನಾಯಕ್, ಶಾಸಕ ರಾಮಪ್ಪ, ಮಾಜಿ ಶಾಸಕ ಅಶೋಕ್ ಖೇಣಿ ಮತ್ತಿತರರು ಹಾಜರಿದ್ದರು.