ರಾಯಚೂರು ಕೋರ್ಟ್ನಲ್ಲಿ ಮೂವರು ವಿಚಾರಣಾಧೀನ ಖೈದಿಗಳು ಪರಾರಿ!

ರಾಯಚೂರು: 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ ಮರಳಿ ಕರೆತರುವ ವೇಳೆ ಮೂವರು ವಿಚಾರಣಾಧೀನ ಕೈದಿಗಳು ತಪ್ಪಿಸಿಕೊಂಡು ಪರಾರಿಯಾದ ಘಟನೆ ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಹರ್ಷ, ಇಫ್ರಾಮ್ ಹಾಗೂ ಪಲ್ಲು ಗೋವಿಂದ ಎಂದು ಗುರುತಿಸಲಾಗಿದೆ. 2017ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೂಲದ ಏಳು ಜನರ ವಿರುದ್ಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಒಬ್ಬ ಆರೋಪಿ ಮುಂಚೆಯಿಂದಲೂ ತಲೆಮರೆಸಿಕೊಂಡಿದ್ದರೆ, ಉಳಿದ ಆರು ಜನರನ್ನು ಬಂಧಿಸಲಾಗಿತ್ತು.

ಇಂದು ನ್ಯಾಯಾಯಲಕ್ಕೆ ವಿಚಾರಣೆಗೆ ಕರೆತಂದಿದ್ದು, ವಿಚಾರಣೆ ಬಳಿಕ ಮೂತ್ರಕ್ಕೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಮಹಾರಾಷ್ಟ್ರ ಸೇರಿ ಬೇರೆ ರಾಜ್ಯಗಳಿಗೆ ತೆರಳುವ ಎಲ್ಲ ಬಸ್ ಗಳ ತಪಾಸಣೆ ನಡೆಸುತ್ತಿದ್ದಾರೆ. ಒಂದು ತಂಡ ಕಟ್ಟಿಕೊಂಡು ರಾಬರಿ ಮತ್ತು ಕೊಲೆ ಮಾಡುತ್ತಿದ್ದ ಆರೋಪಿಗಳಾಗಿದ್ದಾರೆ. ಈ ತಂಡದ ಇನ್ನು ಹಲವರು ಆಂಧ್ರತಪ್ರದೇಶದ ಚಿಂಚಲಗೂಡ ಜೈಲಿನಲಿದ್ದಾರೆ. ತಪ್ಪಿಸಿಕೊಂಡ ಖೈದಿಗಳಿಗಾಗಿ ಪೋಲಿಸರು ತೀವೃ ಶೋಧ ನಡೆಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top