ಬೆಂಗಳೂರು,ಮಾ,27 : ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಸೇತುವೆಯ ರೂಪದಲ್ಲಿ ಪ್ರಕೋಷ್ಠಗಳು ಮಾಡುತ್ತಿವೆ. ಎಂದು ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಮತ್ತು ವಿಧಾನಪರಿಷತ್ ಸದಸ್ಯರಾದ ಭಾನುಪ್ರಕಾಶ್ ಅವರು ನುಡಿದರು. ರಾಣೆಬೆನ್ನೂರಿನಲ್ಲಿ ಇಂದು ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಣೆಬೆನ್ನೂರು ಭತ್ತದ ಕಣಜ ಎಂದ ಅವರು, ಪ್ರಕೋಷ್ಠಗಳು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸಂಚಾಲಕರು ಮತ್ತು ಸಹ ಸಂಚಾಲಕರು ಭವಿಷ್ಯದ ಕಾರ್ಯಯೋಜನೆಯನ್ನು ರೂಪಿಸಲಾಗುತ್ತದೆ. ಈಗಾಗಲೇ ನಡೆಸಿರುವ ಕಾರ್ಯಗಳು ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯದ ಕುರಿತು ವಿಚಾರ ವಿನಿಮಯ ನಡೆಯುತ್ತದೆ ಎಂದರು. ಬಿಜೆಪಿ, ದೇಶ ಮೊದಲು ಎಂಬ ಧ್ಯೇಯವಾಕ್ಯದೊಂದಿಗೆ ದೇಶಕ್ಕೆ ಮೊದಲ ಆದ್ಯತೆಯೊಂದಿಗೆ ಕೆಲಸ ಮಾಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರಿಂದ ನರೇಂದ್ರ ಮೋದಿ ವರೆಗೆ ಈ ಚಿಂತನೆ ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ ಪ್ರಶಿಕ್ಷಣ ವರ್ಗಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪಕ್ಷದ ವಿಚಾರಧಾರೆ ತಿಳಿಸಲು ಮತ್ತು ಸಂಘಟನೆ ಬಲಪಡಿಸಲು ಪ್ರಶಿಕ್ಷಣ ವರ್ಗಗಳು ಪೂರಕ. ಪ್ರಕೋಷ್ಠಗಳು ತಮ್ಮದೇ ಆದ ರೀತಿಯಲ್ಲಿ ಪಕ್ಷದ ಬೆಳವಣಿಗೆಗೆ ನೆರವಾಗುತ್ತಿವೆ. ಪ್ರಬುದ್ಧರು, ನೇಕಾರರು, ವೈದ್ಯರು, ನೇಕಾರರು, ವಕೀಲರು ಸೇರಿ ಸಮಾಜದ ವಿವಿಧ ವರ್ಗದವರನ್ನು ಮತ್ತು ವೃತ್ತಿಯವರನ್ನು ಪ್ರಕೋಷ್ಠಗಳು ಒಳಗೊಂಡಿವೆ ಎಂದು ವಿವರಿಸಿದರು. ಪ್ರಕೋಷ್ಠಗಳ ಸಹ ಸಂಚಾಲಕರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಿವಯೋಗಿ ಸ್ವಾಮಿ, ಸಹ ಸಂಚಾಲಕರಾದ ಜಯತೀರ್ಥ ಕಟ್ಟಿ, ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕರಾದ ಡಾ.ಬಸವರಾಜ ಕೆಲಗಾರ್ ಅವರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತು ಅಪೇಕ್ಷಿತರು ಪ್ರಧಾನಿ ನರೇಂದ್ರ ಮೋದಿ ಅವರ “ಮನ್ ಕಿ ಬಾತ್” ವೀಕ್ಷಿಸಿದರು.