ದೇವನಹಳ್ಳಿ,ಮಾ,6 : ಮಾರಿಯೋಟ್ ಬಾನ್ವಾಯ್ 30 ಅತಿವಿಶೇಷವಾದ ಹೋಟೆಲ್ ಬ್ರಾಂಡ್‌ಗಳ ಪೋರ್ಟ್‌ಫೋಲಿಯೋ ಪೈಕಿ ಒಂದಾಗಿರುವ ಜೆಡಬ್ಲ್ಯು ಮಾರಿಯೋಟ್ , ಇಂದು ಜೆಡಬ್ಲ್ಯು ಮಾರಿಯೋಟ್ ಬೆಂಗಳೂರು ಪ್ರೆಸ್ಟೀಜ್ ಗೋಲ್ಡ್‌ಶೈರ್ ರೆಸಾರ್ಟ್ ಮತ್ತು ಸ್ಪಾದ ತೆರೆಯುವಿಕೆಯನ್ನು ಘೋಷಿಸಿತು . ಈ ಐಶಾರಾಮೀ ರೆಸಾರ್ಟ್ , ಒಂದು ಕಾಲದಲ್ಲಿ ಪುರಾತನ ಬೆಟ್ಟದ ಕೋಟೆ ಮತ್ತು ಭಾರತೀಯ ರಾಜಮನೆತನಗಳ ಬೇಸಿಗೆ ಪ್ರವಾಸಿತಾಣವಾಗಿದ್ದ ಬೆಂಗಳೂರಿನ ಅತಿಸುಂದರ ನಂದಿ ಬೆಟ್ಟಗಳ ಪ್ರದೇಶದಲ್ಲಿ ಸ್ಥಾಪನೆಗೊಂಡಿದೆ . ಈ ಪ್ರಕೃತಿಯ ವಾತಾವರಣದಲ್ಲಿ ಪ್ರತಿಷ್ಠಾಪಿತವಾಗಿರುವ ಹೊಸ ರೆಸಾರ್ಟ್ ಇಡೀ ಅಸ್ತಿತ್ವದ ಮೇಲೆ ಅಂದರೆ ಮಾನಸಿಕವಾಗಿ ಹಾಜರಿದ್ದು , ದೈಹಿಕವಾಗಿ ಪೋಷಣೆಗೊಂಡು ಮತ್ತು ಚೈತನ್ಯದಲ್ಲಿ ಪುನಶ್ಚತನಗೊಳ್ಳಲು ಅತಿಥಿಗಳಿಗೆ ಅವಕಾಶ ಮಾಡಿಕೊಡುವ ಜೆಡಬ್ಲ್ಯು ಮಾರಿಯೋಟ್ ಬ್ರಾಂಡ್‌ನ ವಾಗ್ದಾನವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಪ್ರೆಸ್ಟೀಜ್ ಗ್ರೂಪ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಕಾರಹಳ್ಳಿ ಬಳಿಯ ಪ್ರಸ್ಟೀಜ್ ಗೋಲ್ಡ್ ಶೈರ್ ರೆಸಾರ್ಟ್ ಮತ್ತು ಸ್ಪಾ ತೆರೆಯುವಿಯೊಂದಿಗೆ ಜೆಡಬ್ಲೂ ಮಾರಿಯೋಟ್ ಬ್ರಾಂಡ್ ನ್ನು ವಿಸ್ತರಿಸುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತನ್ನ ಆತಿಥ್ಯ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಿಕೊಳ್ಳುತ್ತಿರುವುದಕ್ಕೆ ಪ್ರೆಸ್ಟೀಜ್ ಗ್ರೂಪ್ ಸಂತೋಷಿಸುತ್ತದೆ . 301 – ಕೋಣೆಗಳ ಈ ರೆಸಾರ್ಟ್ ದಕ್ಷಿಣ ಏಶ್ಯಾದಲ್ಲೇ ತನ್ನ ವಿಧದಲ್ಲಿ ವಿಶಿಷ್ಟವಾಗಿದೆ . 35,000 ಚದರಡಿ ವಿಸ್ತೀರ್ಣದ ಕನ್ಯನ್ ಸೆಂಟರ್ ಮತ್ತು 24,000 ಚದರಡಿಗಳ ಕಂಬರಹಿತ ಸ್ಥಳವು , 4000 ಕ್ಕಿಂತ ಹೆಚ್ಚಿನ ಅತಿಥಿಗಳಿಗೆ ಸ್ಥಳಾವಕಾಶ ಒದಗಿಸಿ , ಭರ್ಜರಿಯಾದ ವಿವಾಹಗಳು , ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ರಾತ್ರಿಗಳು ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ . ದಕ್ಷಿಣ ಭಾರತದಲ್ಲೇ ಅತ್ಯುತ್ತಮ ರೆಸಾರ್ಟ್ ಆಗಲಿರುವ ಈ ರೆಸಾರ್ಟ್ , ಆಚರಣೆಗಳು ಹಾಗೂ ವ್ಯಾಪಾರ ಸಭೆಗಳಿಗೆ ಖಂಡಿತವಾಗಿಯೂ ಏಕನಿಲುಗಡೆ ಗಮ್ಯವಾಗಲಿದೆ . ” ಎಂದು ಹೇಳಿದರು . ಪ್ರೇರಿತ ವಿನ್ಯಾಸಗಳು 301 – ಕೋಣೆಗಳ ರೆಸಾರ್ಟ್ , ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಕೇವಲ 20 ನಿಮಿಷಗಳ ಡ್ರೈವ್ ದೂರದಲ್ಲಿರುವ 275 – ಎಕರೆಗಳ ಪ್ರಶಸ್ತಿ – ವಿಜೇತ ಪ್ರೆಸ್ಟೀಜ್ ಗೋಲ್ಡ್‌ರ್ ಕೋರ್ಸ್ ಮತ್ತು ಐಶಾರಾಮಿಕ ನಿವಾಸ ಅಭಿವೃದ್ಧಿ ಪ್ರದೇಶದಲ್ಲಿದೆ .
ಬೆಂಗಳೂರಿನ ಆರ್ಕಿಟೆಕ್ಟರ್ ಸಂಸ್ಥೆಯಾದ ಥಾಮಸ್ ಅಂಡ್ ಅಸೋಸಿಯೇಟ್ಸ್‌ನಿಂದ ಪರಿಕಲ್ಪಿಸಲ್ಪಟ್ಟಿರುವ ಇದರ ತೆಳುವಾದ , ಆಧುನಿಕ ಆರ್ಕಿಟೆಕ್ಚರ್ ಈ ಪ್ರದೇಶದ ರೇಷ್ಮೆಯ ಸೌಂದರ್ಯದಿಂದ ಪ್ರೇರಿತಗೊಂಡಿದೆ . ರೆಸಾರ್ಟ್‌ನ ಸರಿಸಾಟಿಯಿಲ್ಲದ ಒಳಾಂಗಣ ವಿನ್ಯಾಸಗಳನ್ನು ವಿಶ್ವದ ಮುಂಚೂಣಿ ಆತಿಥ್ಯ ವಿನ್ಯಾಸ ಸಂಸ್ಥೆಯಾದ ಸಿಂಗಪೂರಿನ ಹರ್ಶ್ ಬೆಡ್ಕರ್ ಅಸೋಸಿಯೇಟ್ಸ್ ವಿನ್ಯಾಸಗೊಳಿಸಿದ್ದು , ನಂದಿ ಬೆಟ್ಟಗಳ ಸುಂದರ ನೋಟ ಒದಗಿಸುವ ಲಾಬಿಯನ್ನು , ಅದ್ಭುತ ಭೂಚಿತ್ರಣ , ಮತ್ತು ಅತ್ಯಾಧುನಿಕ , ಸೂಕ್ಷ್ಮ ಅತಿಥಿ ಕೋಣೆಗಳು ಮತ್ತು ಖಾಸಗಿ ಈಜುಕೊಳ ಮತ್ತು ಲಾನ್‌ಗಳಿರುವ ವಿಲ್ಲಾಗಳನ್ನು ಹೊಂದಿದೆ . ತಲ್ಲೀನಗೊಳಿಸುವ ಪಾಕವೈವಿಧ್ಯ ಅನುಭವಗಳು ಗೋಲ್ಡ್‌ಕೋರ್ಸ್‌ಗೆ ಎದುರಾಗಿ , ಮತ್ತು ನಂದಿಬೆಟ್ಟಗಳ ಹಿತವಾದ ವಾತಾವರಣದಲ್ಲಿ ಆಸ್ಕೊ ಆಸನ ಮತ್ತು ಒಳಾಂಗಣದೊಂದಿಗೆ ಜೆಡಬ್ಲ್ಯು , ಮಾರಿಯೋಟ್ ಬೆಂಗಳೂರು ಪ್ರೆಸ್ಟೀಜ್ ಗೋಲ್ಡ್‌ಶೈರ್ ರೆಸಾರ್ಟ್ ಮತ್ತು ಸ್ಪಾ ಅತಿಥಿಗಳು ಹಾಗೂ ಸ್ಥಳೀಯರಿಗಾಗಿ ಆರು ಡೈನಿಂಗ್ ಆಯ್ಕೆಗಳನ್ನು ಒದಗಿಸುತ್ತದೆ . ದಿ ಏವಿಯರಿ , ರೆಸಾರ್ಟ್‌ನ ಸದಾಕಾಲದ ಡೈನಿಂಗ್ ರೆಸ್ಟಾರೆಂಟ್ ಆಗಿದ್ದು ಬಟ್ಟೆ ಹಾಗೂ ಲಾ ಕಾರ್ಟ್ ಶೈಲಿಗಳೆರಡರಲ್ಲೂ ಭಾರತೀಯ , ಪಾಶ್ಚಿಮಾತ್ಯ ಮತ್ತು ಏಶ್ಯನ್ ಪಾಕವೈವಿಧ್ಯಗಳನ್ನು ಒದಗಿಸುವ ಪುಟ್ಟ , ಕನಿಷ್ಟ ಅಲಂಕಾರದ ಆದರೆ ಸುಂದರವಾದ ಹಾಗೂ ಸಂವಾದನಡೆಸುವ ಆಡುಗೆಮನೆಯನ್ನು ಹೊಂದಿದೆ . ಈಸ್ಟ್ , ಅತಿಸೂಕ್ಷ್ಮವಾದ ಮತ್ತು ಅತ್ಯಂತ ಪೋಷಣೆಯುಕ್ತ ಉತ್ಪನ್ನಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಏಷಿಯಾ ಫೆಸಿಫಿಕ್ ಅಧ್ಯಕ್ಷ ರಾಜೀವ್ ಮೆನನ್, ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ರಿಜ್ವಾನ್ ರಜಾಕ್, ಜನರಲ್ ಮ್ಯಾನೇಜರ್ ರೋನನ್ ಫೆರಾನ್, ಗೌರವ್ ಸಿಂಗ್, ನೀರಜ್ ಗೋಯಲ್, ಉಜ್ಮಾನ್ ಇರ್ಫಾನ್, ಫಯಟಜ್ ರಿಜ್ವಾನ್, ಜಾಯಿದ್ ನೌಮನ್, ಹಾಗೂ ಇತರೆ ಗಣ್ಯರು ಇದ್ದರು.