ಬಳ್ಳಾರಿ,ಮಾ.06 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ವಿಡಿಯೋ ಆನ್‍ವಿಲ್ಸ್ ವಾಹನಗಳ ಮುಖಾಂತರ ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು 15ದಿನಗಳ ಕಾಲ ಜಿಲ್ಲೆಯಾದ್ಯಂತ ಏರ್ಪಡಿಸಲಾಗಿರುವ ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಭಾನುವಾರ ಚಾಲನೆ ನೀಡಿದರು.ಚಾಲನೆ ನೀಡಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು,ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೇಗೇರುವಂತೆ ಶುಭಹಾರೈಸಿದರು.
ನಂತರ ಸಚಿವರು ಬಾಲ್ಯವಿವಾಹ ನಿಷೇಧ ಸಹಿ ಸಂಗ್ರಹ ಅಭಿಯಾನಕ್ಕೆ ತಾವು ಸಹಿ ಮಾಡುವುದರ ಮೂಲಕ ಬೆಂಬಲ ಸೂಚಿಸಿದರು ಹಾಗೂ ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಸಚಿವ ಶ್ರೀರಾಮುಲು ಅವರು ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ, ಬಾಲ್ಯವಿವಾಹದಿಂದ ಬಹಳಷ್ಟು ದುಷ್ಪರಿಣಾಮಗಳಿದ್ದು,ಅದನ್ನು ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಿಸಬೇಕು. ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಡಿಯೋ ಆನ್‍ವಿಲ್ಸ್ ವಾಹನದ ಮುಖಾಂತರ ಬಾಲ್ಯವಿವಾಹ ನಿಷೇಧ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಅಭಿಯಾನವು ಜಿಲ್ಲೆಯ 5 ತಾಲೂಕುಗಳಲ್ಲಿ 82 ಹಳ್ಳಿಗಳಲ್ಲಿ 15 ದಿನಗಳ ಕಾಲ ಸಂಚರಿಸಿ ಅರಿವು ಮೂಡಿಸಲಿದೆ ಎಂದರು.
ಈ ಅಭಿಯಾನ ಸಂಚರಿಸಲಿರುವ ಸ್ಥಳಗಳಿವು:ಕೌಲ್ ಬಜಾರ್, ಕುರಿಹಟ್ಟಿ, ಅಲ್ಲಿಪುರ,ಇಂದ್ರಾನಗರ,ಬಸವನಕುಂಟೆ, ಸಂಗನಕಲ್ಲು,ಮೋಕಾ, ವಣೇನೂರು,ಬಸರಕೋಡು,ಹಡ್ಲಿಗಿ, ವೈ.ಬೂದಿಹಾಳು,ರೂಪನಗುಡಿ,ಸಂಜೀವರಾಯನಕೋಟೆ, ಹಲಕುಂದಿ, ಶಂಕರಬಂಡೆ, ಶಿಡಿಗಿನಮೋಳ, ಕೆ.ವೀರಾಪುರ, ಕಾರೇಕಲ್ಲು,ಮಿಂಚೇರಿ, ಬ್ಯಾಲಚಿಂತೆ, ಕುರುಗೋಡು 1ರಿಂದ 24ನೇ ವಾರ್ಡ್,ಬಾದನಹಟ್ಟಿ, ವದ್ದಟ್ಟಿ, ಗೆಣಕಿಹಾಳ್,ಸಿದ್ದಮನಹಳ್ಳಿ, ಏಳುಬಿಂಚೆ,ಓರ್ವಾಯಿ, ಗುತ್ತಿಗನೂರು, ಎಚ್.ವೀರಾಪುರ, ಕೋಳೂರ,ದಮ್ಮೂರ,ಸೋಮಸಮುದ್ರ,ಏರ್ರಂಗಳಿ,ವದ್ದಟ್ಟಿ, ಅಂಬಾನಗರ, ಪಾರ್ವತಿನಗರ,
ಡ್ರೈವರ್ಕಾಲೋನಿ,ದೇಶನೂರ,ಕೆಂಚನಗುಡ್ಡ,ಕೆ.ಬೆಳಗಲ್ಲು,ಹಚ್ಚೊಲ್ಳಿ,ರಾವಿಹಾಳ್,ಬಾಗೇವಾಡಿ,ಕುಡುದರಾಳ್,ಅಗನಸೂರು,ತೆಕ್ಕಲಕೋಟೆ,ಬಲಕುಂದಿ,ಹಳೇಕೋಟೆ,ನಡುವಿ,ನಿಟ್ಟೂರು,ಕರೂರು,ದರೂರು,ಉತ್ತನೂರು,ತಾಳೂರು,ಆಗಲೂರುಹೊಸಳ್ಳಿ,ಸಿರಿಗೇರಿ,ಎಂ.ಸೂಗೂರ,ಮುದ್ದೇಟನೂರು,ಕೊಂಚಗೇರಿ,ಶಾನವಾಸಪುರ,ಕಂಪ್ಲಿ,ದೇವಲಾಪುರ, ಮೆಟ್ರೀ,ಸುಗ್ಗೇನಹಳ್ಳಿ, ಎಮ್ಮಿಗನೂರು, ರಾಮಸಾಗರ,ಸಂಡೂರು,ಲಕ್ಷ್ಮೀಪುರ, ಕೃಷ್ಣನಗರ, ಸುಶೀಲನಗರ, ಜೈಸಿಂಗಾಪುರ, ತೋರಣಗಲ್ ಸ್ಟೇಶನ್, ಕುರೇಕುಪ್ಪ,ಬಸಾಪುರ, ವಡ್ಡು,ತಾಳೂರು, ಚೋರನೂರು,ಉಪ್ಪಾರಹಳ್ಳಿ, ಕಾಳಿಂಗೇರಿ,ಸುಗ್ಗೇನಹಳ್ಳಿ, ಬೊಮ್ಮಘಟ್ಟ.
ಈ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್, ಮಾಜಿ ಸಂಸದರು, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದ್ದರು.