ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ ’ಎಂ.ಶ್ರೀನಿವಾಸುಲು’

ಬದುಕಿನುದ್ದಕ್ಕೂ ಹಲವಾರು ಅಡತಡೆಗಳು ಇದ್ದಿದ್ದೇ.ಆದರೆ ಅವುಗಳನ್ನು ಎದುರಿಸುವಲ್ಲಿ ಕೆಲವರು ಸೋತು ಸತ್ತರೆ ಇನ್ನು ಕೆಲವರು ಗೆದ್ದು ಬೀಗುತ್ತಾರೆ.ಆದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆಲ್ಲುವ ಚೈತನ್ಯ ತುಂಬುವ ಹಲವು ಮಾರ್ಗಗಳಲ್ಲಿ ರಂಗಭೂಮಿ ಅಗ್ರಮಾನ್ಯವಾದುದ್ದಾಗಿದೆ.ಆ ನಿಟ್ಟಿನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿ ಬದುಕಿನುದ್ದಕ್ಕೂ ಗೆದ್ದು ಬೀಗಿದ ಹಲವರಲ್ಲಿ ಒಬ್ಬರು ಬಳ್ಳಾರಿ ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಎಂ.ಶ್ರೀನಿವಾಸುಲು. ಇವರು ಕ್ರಿ.ಶ.೦೧.೦೯.೧೯೬೨ ರಲ್ಲಿ ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ ಎಂ.ರಾಮುಡು ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು. ಹುಟ್ಟಿದ್ದು ಬಡ ಕುಟುಂಬದಲ್ಲಾದ್ದರಿಂದ ಮತ್ತು ಅಪ್ಪನ ಮಧ್ಯ ವ್ಯಸನದಿಂದಾಗಿ ಒಂದ್ಹೊತ್ತಿನ ಊಟಕ್ಕೂ ಪರದಾಡುವ ಸಂದರ್ಭದಲ್ಲಿ ಅಜ್ಜಿ ಲಕ್ಷಮ್ಮಮ್ಮ ಮತ್ತು ಅಮ್ಮ ಪಾರ್ವತಮ್ಮರ ಛಲಭರಿತ ಪ್ರೋತ್ಸಾಹ ಮತ್ತು ಕಾರ್ಯದಿಂದಾಗಿ, ೧೦ನೇ ತರಗತಿಯವರೆಗೆ ಬಳ್ಳಾರಿಯ ಮದ್ದೀಕೇರಿ ಭೀಮಯ್ಯ ಸ್ವಂತ ಲಿಂಗಣ್ಣ ಶೆಟ್ಟಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು. ಆದರೆ ಮುಂದೆ ಓದಲು ಆರ್ಥಿಕವಾಗಿ ಸಬಲರಿಲ್ಲದ ಕಾರಣ ಆಗ ಕರ್ನಾಟಕ ಸಾರಿಗೆ ಇಲಾಖೆಯವರು ಭದ್ರತಾ ಸಿಬ್ಬಂದಿಗೆ ಅರ್ಜಿ ಕರೆದಿದ್ದರಿಂದ ಅರ್ಜಿ ಸಲ್ಲಿಸಿ ಕೆಲದಿನಗಳು ಕಾಯ್ದರು.ಅವರ ಪರಿಶ್ರಮಕ್ಕೆ ತಕ್ಕಂತೆ ೧೯೮೧ ರಲ್ಲಿ ತಮ್ಮ ೧೯ನೇ ವಯಸ್ಸಿಗೆ ಭದ್ರತಾ ರಕ್ಷಕ ಸಿಬ್ಬಂದಿ ಕೆಲಸ ಪಡೆದು ಮನೆಯ ಜವಾಬ್ದಾರಿಯನ್ನೆಲ್ಲಾ ವಹಿಸಿಕೊಂಡರ ಮನೆಯ ಹಿನ್ನಲೆಯಿಂದ ರಂಗಭೂಮಿಯ ಯಾವ ಪ್ರಭಾವ ಇಲ್ಲದಿದ್ದರೂ, ಕೇವಲ ಶಾಲಾ ಹಂತದಿಂದಲೂ ನಗರದಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಲೇ ತಮ್ಮೊಳಗೆ ಒಬ್ಬ ನಟನ ತಯಾರಿ ನಡೆಸಿದ್ದರು.ಅದಕ್ಕೆ ಇಂಬು ಎನ್ನುವಂತೆ ಸಾರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೊದಲಾರ್ಧದಲ್ಲೇ ದೊರೆಯಿತು.

ಈಗಾಗಲೇ ಬೆಳಗಲ್ ವೀರಣ್ಣ,ರೂಪನಗುಡಿ ವೆಂಕಟೇಶ, ಅಡ್ವೋಕೇಟ್ ನಟರಾಜ,ಚನ್ನಬಸಪ್ಪ ಮುಂತಾದ ನಟರಿಂದ ಪ್ರಭಾವಿತರಾಗಿದ್ದರಿಂದ ಅವರನ್ನೂ ಮೀರಿಸುವ ಮಟ್ಟಿಗೆ ಅಭಿನಯಿಸುವ ಇಚ್ಛೆಯನ್ನು ಹೊಂದಿದ್ದರಿಂದ ಸಾರಿಗೆ ಇಲಾಖೆಯ ಕಲಾಸಕ್ತ ನೌಕರರೆಲ್ಲ ಸೇರಿ ತಿಮ್ಮಪ್ಪ ಎಂಬ ರಂಗ ನಿರ್ದೇಶಕರ ನೇತೃತ್ವದಲ್ಲಿ ಹಮ್ಮಿಕೊಂಡ ’ಕಲಿತ ಕಳ್ಳ’ ನಾಟಕದಲ್ಲಿ ನೀಡಿದ ದಿವಾಕರ್ ಎಂಬ ಚಿಕ್ಕ ಪಾತ್ರದಿಂದಲೇ ಮಿಂಚಿದ್ದರು. ಈ ನಾಟಕದ ಯಶಸ್ವಿ ತರುವಾಯ ಕಾಲಕ್ರಮೇಣ ಅಣ್ಣ ತಂಗಿ, ರಕ್ತರಾತ್ರಿಯಲ್ಲಿ ಭೀಮನಾಗಿ, ಕುರುಕ್ಷೇತ್ರದಲ್ಲಿ ದುಶ್ಯಾಸನ, ಜಗಜ್ಯೋತಿ ಬಸವೇಶ್ವರದಲ್ಲಿ ಬಸವೇಶ್ವರ, ಮಹಾರತಿ ಕರ್ಣದಲ್ಲಿ ,ಅಲ್ಲೂರಿ ಸೀತಾರಾಮರಾಜುದಲ್ಲಿ ಅಲ್ಲೂರಿ ಸೀತಾರಾಮರಾಜು, ಆಡಾದನಿ ನಾಯಕ, ಸಾರಂಗಧರದಲ್ಲಿ ಅನಾಮಿಕನಾಗಿ ಸಾಲು ಸಾಲು ೧೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಕಲಾ ರಸಿಕರ ಜನಮನ್ನಣೆ ಪಡೆದರು.


ಒಂದೆಡೆ ನಾಟಕ ಪ್ರವೃತ್ತಿ,ಮತ್ತೊಂದು ಕಡೆ ಸಾರಿಗೆ ಇಲಾಖೆ ವೃತ್ತಿ ಎರಡನ್ನು ನಿಭಾಯಿಸುವಲ್ಲಿ ಭರದಲ್ಲಿ ಸೋಲುವ ಹಂತದಲ್ಲಿವಿದ್ದರೂ ಅಜ್ಜಿ ಮತ್ತು ಅಮ್ಮನ ಸಹಾಯದಿಂದ ಗೆದ್ದ ಉದಾಹರಣೆಗಳು ಅನೇಕ.ಹಾಗಾಗಿ ತಮ್ಮ ಅಜ್ಜಿ ಮತ್ತು ಅಮ್ಮನನ್ನೇ ತಮ್ಮ ರಂಗಭೂಮಿ ಮತ್ತು ಯಶಸ್ವಿ ಜೀವನಕ್ಕೆ ಮಾರ್ಗದರ್ಶಿಗಳೆಂದು ಹೆಮ್ಮೆಯಿಂದ ನುಡಿಯುತ್ತಾರೆ. ಇದಲ್ಲದೇ ಅದೆ? ಬಾರಿ ನಾಟಕಕ್ಕೆ ಅಡ್ಡಿಯಾಗಿ ಬಂದ ಇಲಾಖೆಯ ಕಾರ್ಯಗಳಿಂದ ಅನಿವಾರ್ಯವಾಗಿ ಇಲಾಖಾಧಿಕಾರಿಗಳನ್ನು ಕಾಡಿ ಬೇಡಿ ಮನವೋಲಿಸಿ ಬಂದು ಅಭಿನಯಿಸಿದ ಉದಾಹರಣೆಗಳು ಅನೇಕವು. ರಂಗಭೂಮಿಯಲ್ಲಿ ಪಳಗುತ್ತಲೇ ಮುಂದೆ ತಾವೇ ಸ್ವತಃ ಆಡಾದಾನಿ ಎಂಬ ತೆಲುಗು ನಾಟಕವನ್ನು ಗೆಳೆಯ ಭೀಮಲಿಂಗರೊಂದಿಗೆ ರಚಿಸಿ,ನಿರ್ದೆಶಿಸಿ ಅಭಿನಯಿಸಿದರು.ಅಲ್ಲದೇ ಮುಂದೆ ಕೃಪ್ರಸಾದರ ನಿರ್ದೇಶನದಲ್ಲಿ ಅಭಿನಯಿಸಿದ ಅಲ್ಲೂರಿ ಸೀತಾರಾಮರಾಜು ನಾಟಕದಲ್ಲಿ ಮುಖ್ಯಪಾತ್ರದಲ್ಲಿ ನೀಡಿದ ಅಭಿನಯ ಇಂದಿಗೂ ಶ್ರೀನಿವಾಸರನ್ನು ನೆನಪಿನಲ್ಲಿಡುವಂತೆ ಮಾಡಿದೆ.ಇದಾದ ನಂತರ ಬೆಳಗಲ್ ವೀರಣ್ಣರ ನಿರ್ದೇಶನದಲ್ಲಿ ಅಭಿನಯಿಸಲ್ಪಟ್ಟ ಜಗಜ್ಯೋತಿ ಬಸವೇಶ್ವರ ನಾಟಕವೂ ಸಹ ಇವರ ಅಭಿನಯಕ್ಕೆ ಖ್ಯಾತಿಯನ್ನು ತಂದುಕೊಟ್ಟಿತು. ಆ ಮುಲಕ ವೀಣಾ ಆದೋನಿ, ರಮೇಶಗೌಡ ಪಾಟೀಲ್,ಶಿವಶಂಕರ್ ನಾಯ್ಡು ,ಸುಭದ್ರಮ್ಮ ಮನ್ಸೂರ್ ರಂತಹ ಘಟಾನುಘಟಿಗಳೊಂದಿಗೆ ನಿರ್ಭಯವಾಗಿ ಮತ್ತು ಅಮೋಘವಾಗಿ ಅಭಿನಯಿಸಿ ಹೆಸರನ್ನು ಗಳಿಸಿದರು.


ಕೇವಲ ಕನ್ನಡವೊಂದೇ ಅಲ್ಲದೇ ಮಹಾರತಿ ಕರ್ಣ, ಆಡಾದಾನಿ ಬುಡುಬುಡಿಕೆ,ದೃತರಾ? ಕೌಗಿಲೆ ಎಂಬ ಮತ್ತಿತರೆ ನಾಟಕಗಳಲ್ಲೂ ಅಭಿನಯಿಸುವ ಮೂಲಕ ಉಭಯಭಾ? ಕಲಾವಿದರ ಪಟ್ಟವನ್ನು ಅಲಂಕರಿಸಿದರು. ಮೊದ ಮೊದಲು ನೀಳಕಾಯದ ಇವರು ವೀಣಾ ಆದೋನಿ,ವನಮಾಲಾರಂತಹ ಅಂದಿನ ಸ್ಪೂರದ್ರೂಪಿ ಚಲುವೆಯರೊಂದಿಗೆ ಅದ್ಭುತವಾಗಿ ನೃತ್ಯ ಮಾಡುವ ಮೂಲಕ ಮತ್ತು ಇಂದಿಗೂ ಅದೇ ನಟರೊಂದಿಗೆ ತಮ್ಮ ದಡೂತಿ ದೇಹದ ಪೌರಾಣಿಕ ಪಾತ್ರಗಳಾದ ಭೀಮ, ದುಶ್ಯಾಸನ ಪಾತ್ರಗಳನ್ನು ಅದ್ಭುತವಾಗಿ ಅಭಿನಯಿಸುವ ಮೂಲಕ ಅವರುಗಳ ಒಲುಮೆಗೆ ಪಾತ್ರರಾಗಿದ್ದಾರೆ.ಇಂತಹ ರಂಗಚೇತನ ಕೆಲವು ವರ್ಷಗಳ ಹಿಂದೆ ಇಲಾಖೆಯ ಅಧಿಕಾರದಿಂದ ನಿವೃತ್ತಿ ಹೊಂದುವ ಮೂಲಕ ಇಂದಿಗೂ ರಂಗಭೂಮಿಯ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಇಂತಹ ಅದಮ್ಯ ಚೇತನ ಮಣಿಯ ರಂಗ ಕಾಯಕವನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಲ್ಲದೇ ರಾಘವ ಮೆಮೋರಿಯಲ್ ಅಸೋಸಿಯೇನ್ ರಿಂದ ಬಳ್ಳಾರಿ ಜಿಲ್ಲಾ ರಾಘವ ಪ್ರಶಸ್ತಿ ನೀಡಿ ಅಭಿನಂದಿಸಿದೆ. ಇಂತಹ ಮಹನೀಯರು ಎಲೆ ಮರೆ ಕಾಯಿಯಂತೆ ಇಂದಿಗೂ ನಮ್ಮೊಂದಿಗೆ ಇರುವುದೇ ನಮ್ಮೆಲ್ಲರ ಸೌಭಾಗ್ಯ. ಹಾಗಾಗಿ ಇಂತವರಿಗೆ ಸೂಕ್ತ ಮನ್ನಣೆ ದೊರೆಯುವ ಮೂಲಕ ಇಂದಿನ ಯುವ ರಂಗ ಕಲಾಸಕ್ತರಿಗೆ ಮಾದರಿಯಾಗಲಿ ಎಂಬುದೇ ನನ್ನೀ ಲೇಖನದ ಅಶಯ.

ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.

Leave a Comment

Your email address will not be published. Required fields are marked *

Translate »
Scroll to Top