ಕೊಪ್ಪಳ,: ಮಹಾಶಿವರಾತ್ರಿ ಪ್ರಯುಕ್ತ ಕೊಪ್ಪಳದಲ್ಲಿ ಹಣ್ಣುಗಳ ಮೇಳ ತೋಟಗಾರಿಕೆ ಇಲಾಖೆ ವತಿಯಿಂದ ದ್ರಾಕ್ಷಿ , ದಾಳಿಂಬೆ, ಪೇರಲ, ಕಲ್ಲಂಗಡಿ, ಕರಬೂಜ, ಅಂಜೂರ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶನಿವಾರ ದಿ. 26 ರಿಂದ ಮಾ. 01 ರವರೆಗೆ ಅಯೋಜಿಸಲಾಗಿದೆ. ಮೇಳೆದ ಚಾಲನೆಯನ್ನು ಜಿಲ್ಲಾಧಿಕಾರಿ ಕೊಪ್ಪಳ ಜಿಲಾಧಿಕಾರಿ ವಿಕಾಸ್ ಕೀಶೊರ್ ಸುರಳ್ಕರ್, ಜಿ.ಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಜಂಟಿಯಾಗಿ ನೀಡಿದರು. ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈತರು ಬೆಳೆದ ವಿವಿಧ ಹಣ್ಣುಗಳ ಪ್ರದರ್ಶನ ಹಾಗೂ ಮಧ್ಯವರ್ತಿಗಳಿಲ್ಲದೇ ರೈತರಿಂದ ನೇರ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. 20 ರೈತರು ವಿವಿಧ ಹಣ್ಣುಗಳನ್ನು ಮಾರಾಟ ಮಾಡಲು ತಂದಿರುತ್ತಾರೆ.
ಮೇಳದಲ್ಲಿ ದ್ರಾಕ್ಷಿ ಅಂದಾಜು – 2 ಟನ್, ಪೇರಲ – 1 ಟನ್, ಪಪ್ಪಾಯ – 1 ಟನ್, ಕಲ್ಲಂಗಡಿ ಟನ್, ಕರಬೂಜ 4 ಟನ್, ದಾಳಿಂಬೆ – 2 ಟನ್, ಜೇನು–500 ಕೆ.ಜಿ. ಮಾರಾಟವಾಗುವ ನಿರೀಕ್ಷೆ ಇದೆ. ವಿವಿಧ ಹಣ್ಣುಗಳ ಪೋಷಕಾಂಶಗಳ ಪ್ರದರ್ಶನ , ಉಪ ವಿವಿಧ ತಳಿಗಳ ಜೇನು ಹಾಗೂ ಉತ್ಪನ್ನಗಳ ಪ್ರದರ್ಶನ, ಒಂದು ಜಿಲ್ಲೆ ಒಂದು ಬೆಳೆ ಯೋಜನೆಯ ಪ್ರಚಾರ ಹಾಗೂ ಪೇರಲದ ಉಪ ಉತ್ಪನ್ನಗಳ ಪ್ರದರ್ಶನ, ಈ ಭಾಗದ ರೈತರು ಬೆಳೆದ ಬಾಳೆ ಗಿಡಗಳ ಪ್ರದರ್ಶನ, ದ್ರಾಕ್ಷಿ , ದಾಳಿಂಬೆ, ಕಲ್ಲಂಗಡಿ , ಜೇನು, ಪಪ್ಪಾಯ ಹಣ್ಣುಗಳ ಪ್ರದರ್ಶನ ಹಾಗೂ ಹಣ್ಣುಗಳ ಉಪ ಉತ್ಪನ್ನಗಳ ಪ್ರದರ್ಶನ, ಇಲಾಖಾ ನರ್ಸರಿಗಳಲ್ಲಿ ಬೆಳೆದ ವಿವಿಧ ಸಸಿಗಳು , ಎರೆಹುಳು, ಎರೆಜಲ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಹಾಗೂ ಪ್ರದರ್ಶನ ಮಾಡಲಾಯಿತು. ಪ್ರದರ್ಶನಕ್ಕೆ ಅಪಾರ ಸಂಖ್ಯೆಯ ಜನ ಭೇಟಿ ನೀಡುವ ನಿರೀಕ್ಷೆ ಇದೆ.