ಸಿಂಧನೂರು, : ಮತ್ತು ಉಕ್ರೇನ್ ನಡುವೆ ಯುದ್ಧದ ಗಲಾಟೆಯಲ್ಲಿ ಸಿಂಧನೂರಿನ ಮೆಡಿಕಲ್ ಓದುವ ೩ ಜನ ವಿದ್ಯಾರ್ಥಿಗಳು ಸಿಲುಕಿದ್ದಾರೆ ಆತಂಕದಲ್ಲಿ ಪೋ?ಕರು ಇದ್ದಿದ್ದು ಕಂಡುಬಂದಿದೆ
ಉಕ್ರೇನ್‌ನ ಝಪೊರೊಜ್ಚ್ ಸ್ಟೇಟ್ ಮೆಡಿಕಲ್ ಇನ್ವರ್ಸಿಟಿ ಕಾಲೇಜಿನಲ್ಲಿ ಸಿಂಧನೂರಿನ ಸ್ಥಳೀಯ ನಿವಾಸಿಗಳಾದ ಜಯಶ್ರೀ ಹೋಟೆಲಿನ ಮಾಲಿಕ ಕೃ? ಅವರ ಮಗಳು ತೃಪ್ತಿ, ಗುರುರಾಜ್ ಬಾದರ್ಲಿ ಮಗ ನಂದೀಶ್ ಹಾಗೂ ತುರುವಿಹಾಳ ನಿವಾಸಿ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ಅವರ ಸೋದರ ಶಿವನಗೌಡ ಮಗ ಸೋಮು ಈ ೩ ವಿದ್ಯಾರ್ಥಿಗಳು ಮೆಡಿಕಲ್ ವಿದ್ಯಾರ್ಥಿಗಳು ಆಗಿದ್ದು ಉಕ್ರೇನ್‌ನ ಝಪೊರೊಜ್ಚ್‌ನಲ್ಲಿ ಸಿಲುಕಿ ಸಮಸ್ಯೆ ಅನುಭವಿಸುತ್ತಿರುವುದು ತಿಳಿದುಬಂದಿದೆ
ವಿದ್ಯಾರ್ಥಿನಿ ತೃಪ್ತಿ ಎಂಬಿಬಿಎಸ್ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದು, ನಂದೀಶ್ ಎಂಬಿಬಿಎಸ್ ೩ ವ?ದ ವಿದ್ಯಾರ್ಥಿ ಹಾಗೂ ಸೋಮು ಆರನೆಯ ಸೆಮಿಸ್ಟರ್ ವಿದ್ಯಾರ್ಥಿ ಆಗಿದ್ದು ೩ ಜನ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಈಗ ಉಕ್ರೇನ್‌ನಲ್ಲಿ ಸಿಲುಕಿ ಸಮಸ್ಯೆಗೆ ಈಡಾಗಿದ್ದಾರೆ ಪಾಲಕರು ಸಹ ಆತಂಕದಲ್ಲಿ ಇದ್ದಿದ್ದು ತಿಳಿದುಬಂದಿದೆ
ನಂದೀಶ್ ಬುಕ್ ಆದ ಟಿಕೆಟ್ ಕ್ಯಾನ್ಸಲ್- ಮೆಡಿಕಲ್ ವಿದ್ಯಾರ್ಥಿ ನಂದೀಶ ಬಾದರ್ಲಿ ಇವರು ಫೆ.೨೫ ರಂದು ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿದ್ದರು ನಡೆದ ಗಲಾಟೆಯಿಂದ ಟಿಕೆಟ್ ಕ್ಯಾನ್ಸಲ್ ಆಗಿರೋದು ತಿಳಿದುಬಂದಿದೆ
ಏಳೆಂಟು ತಿಂಗಳಾಯಿತು ಹೋಗಿ ಮೂರು ಜನ- ಕಳೆದ ೨ ವ? ಉಕ್ರೇನ್‌ನಲ್ಲಿ ವಿದ್ಯಾಭ್ಯಾಸ ಮಾಡಿ ರಜೆಗೆಂದು ಬಂದಿದ್ದ ೩ ಜನ ವಿದ್ಯಾರ್ಥಿಗಳು ಮತ್ತೆ ಉಕ್ರೇನ್ ದೇಶಕ್ಕೆ ಕಳೆದ ಏಳೆಂಟು ತಿಂಗಳಲ್ಲಿ ಹೋಗಿರೋದು ಗೊತ್ತಾಗಿದೆ,
ಕನ್ನಡನಾಡು ತೃಪ್ತಿ,ನಂದೀಶ್,ಸೋಮು ಮಾತು- ಮೆಡಿಕಲ್ ಓದಲು ನಾವು ಉಕ್ರೇನ್‌ಗೆ ಬಂದಿದ್ದೇವೆ, ಇತರ ಯುದ್ಧ ನಡೆದಿರುವುದರಿಂದ ಭಯ ವಾಗಿರುತ್ತದೆ, ನಾವು ಇರುವ ಸ್ಥಳಕ್ಕೂ ಯುದ್ಧ ನಡೆಯುತ್ತಿರುವ ಸ್ಥಳಕ್ಕೆ ಸುಮಾರು ೧೮೦ ಕಿಲೋಮೀಟರ್ ದೂರ ಇರುತ್ತದೆ ಆದರೂ ಕಾಲೇಜು ಹಾಗೂ ಇನ್ನಿತರ ಹೊರಗಡೆ ಹೋಗಲು ಅವಕಾಶ ಇಲ್ಲ, ನಮ್ಮ ದೇಶದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಕೊಠಡಿಗಳಲ್ಲಿ ಹಾಗೂ ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ಇರಲು ಸೂಚಿಸಿದ್ದಾರೆ, ಇಲ್ಲಿ ಈಗ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ನಾಳೆಯಿಂದ ಏನಾದರೂ ಯುದ್ಧ ಮತ್ತ? ಹೆಚ್ಚಿಗೆ ಆದರೆ ತುಂಬಾ ಸಮಸ್ಯೆ ಆಗುತ್ತದೆ ಏನು ಮಾಡೋದು ಗೊತ್ತಾಗುತ್ತಿಲ್ಲ ಆದರೂ ಇಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು
,,,,, ಎಲ್ಲಾ ವಿದ್ಯಾರ್ಥಿನಿಯರು ಒಂದೇ ಕಡೆ ಇದ್ದೇವೆ, ಕಳೆದ ದಿನ ಬಾಂಬ್ ಶಬ್ದ ದೂರದಿಂದ ಕೇಳುತ್ತಿತ್ತು, ಇವಾಗ ಇಲ್ಲ ಎಚ್ಚರಿಕೆಯಿಂದ ಇರಿ ಅಂತ ಇಲ್ಲಿಯ ಅಧಿಕಾರಿಗಳು ಮೈಕ್ ಮೂಲಕ ಹೇಳುತ್ತಿದ್ದಾರೆ, ಆದರೂ ಭಯ ಇದೆ ನಮ್ಮ ಪೋ?ಕರಿಗೆ ನಾವು ದಿನಾಲು ತಿಳಿಸುತ್ತಿದ್ದೇವೆ,
ತೃಪ್ತಿ ಮೆಡಿಕಲ್ ವಿದ್ಯಾರ್ಥಿನಿ
,,,,,,,,ತುಂಬಾ ಭಯ ಇದೆ ನಿನ್ನೆಗೆ ೧೮೦ ಕಿಲೋಮೀಟರ್ ದೂರದಲ್ಲಿ ಯುದ್ಧ ಆಗಿದೆ ಇವಾಗ ನಾವು ಇರುವ ಸ್ಥಳಕ್ಕೆ ಹತ್ತಿರ ಆಗುತ್ತಿದೆ ಅಂತ ಮಾಹಿತಿ ಇಲ್ಲಿಯ ಅಧಿಕಾರಿಗಳು ಕೊಟ್ಟಿರುತ್ತಾರೆ ಗಂಟೆ ಗಂಟೆಗೂ ಯುದ್ಧ ಯಾವತರ ಆಗುತ್ತಿದೆ ಅಂತ ಗೊತ್ತಾಗುತ್ತಿಲ್ಲ, ಎಲ್ಲರೂ ನಿಮ್ಮ ನಿಮ್ಮ ಸೇಫ್ಟಿ ನೋಡಿಕೊಳ್ಳಿ ಅಂತ ಹೇಳಿದ್ದಾರೆ
ನಂದೀಶ್ ಮೆಡಿಕಲ್ ವಿದ್ಯಾರ್ಥಿ
,,,,,,,, ಕಾಲೇಜಿನ ಆಡಳಿತ ಮಂಡಳಿಯವರು ಸೂಚನೆ ನೀಡಿದ್ದಾರೆ ಯಾವುದಕ್ಕೂ ಸೇಫ್ಟಿ ಆಗಿ ಇರೀ ಅಂತ, ಊಟ ವ್ಯವಸ್ಥೆ ನಾವೇ ನೋಡಿಕೊಳ್ಳುತ್ತಿದ್ದೇವೆ ಆದರೂ ಇಲ್ಲಿಯ ವಾತಾವರಣ ನೋಡಿದರೆ ಗಾಬರಿಯಾಗಿದೆ, ನಮ್ಮ ದೇಶದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಇರಲು ಹಾಸ್ಟೆಲ್ ವ್ಯವಸ್ಥೆ ಮಾಡಿದ್ದಾರೆ ಗಂಟೆ ಗಂಟೆಗೂ ಅಲಾರಾಂ ಹಾಕುವುದರ ಮೂಲಕ ನಡೆಯುವ ಘಟನೆಗಳ ಬಗ್ಗೆ ಸೂಚನೆ ಇಲ್ಲಿಯ ಸಿಬ್ಬಂದಿಗಳು ತಿಳಿಸುತ್ತಿದ್ದಾರೆ
ಸೋಮು ನಾಯಕ್
,,,, ಭಾರತ ದೇಶಕ್ಕೆ ಕೂಡಲೇ ನಮ್ಮ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕು, ಯಾವ ಸಮಯದಲ್ಲಿ ಏನಾಗುತ್ತದೋ ಗೊತ್ತಿಲ್ಲ ನಮ್ಮ ಮಕ್ಕಳು ಸ್ವಲ್ಪ ಭಯದಲ್ಲಿ ಇದ್ದಾರೆ ಸದ್ಯಕ್ಕೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಲು ಸದ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ, ಇದೇ ತರ ಆದರೆ ಅವರಿಗೆ ಊಟದ ಸಮಸ್ಯೆ ಆಗುತ್ತದೆ
ಮೂರು ಜನ ವಿದ್ಯಾರ್ಥಿಗಳ ಪೋ?ಕರ ಅಭಿಪ್ರಾಯ ಸಿಂಧನೂರುಉಕ್ರೇನ್‌ನಲ್ಲಿ ಸಿಲುಕಿದ ಸಿಂಧನೂರಿನ ಮೂರು ಜನ ವಿದ್ಯಾರ್ಥಿಗಳು, ಆತಂಕದಲ್ಲಿ ಪೋ?ಕರು