ಸೌಲಭ್ಯವಂಚಿತ ಹುಲಿಗಿ ತುಂಗಭದ್ರ ನದಿ ವ

ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿಪೀಠ ವಾದ ಶ್ರೀ ಹುಲಿಗಮ್ಮ ದೇವಸ್ಥಾನದ ತುಂಗಭದ್ರ ನದಿಯ ಪವಿತ್ರ ಸ್ನಾನ ಮಾಡುವ ಮಹಿಳಾ ಭಕ್ತಾದಿಗಳು ತಮ್ಮ ವಸ್ತುಗಳನ್ನು ಬದಲಾಯಿಸಲು ಹರಸಾಹಸ ಪಡುವಂತಾಗಿದೆ, ರಾಜ್ಯ ಸೇರಿದಂತೆ .ಹೊರ ರಾಜ್ಯ ಗಳಿಂದ ಬರುವ ಭಕ್ತಾದಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ನದಿ ಪಾತ್ರದಲ್ಲಿ ಸುಸಜ್ಜಿತವಾದ ಕೊಠಡಿ ಇಲ್ಲದೆ ತುಂಗಭದ್ರೆಯಲ್ಲಿಮಿಂದದ್ದ ಮಹಿಳಾ ಭಕ್ತಾದಿಗಳು ತಮ್ಮ ವಸ್ತ್ರಗಳನ್ನು ಬದಲಿಸಲು ಇಲ್ಲದ ಕಸರತ್ತುಗಳನ್ನು ನಡೆಸಬೇಕಾದ ಪರಿಸ್ಥಿತಿ ಒದಗಿದೆ, ಶ್ರದ್ಧೆ ಭಕ್ತಿ ಕೇಂದ್ರವಾದ ಶ್ರೀ ಹುಲಿಗಮ್ಮ ದೇವಿ ತುಂಗಭದ್ರೆಯಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಸ್ನಾನ ಮಾಡುವ ಭಕ್ತಾದಿಗಳಿಗೆ

ಸುಸಜ್ಜಿತವಾದ ಕೊಠಡಿಗಳನ್ನು ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಮುಜರಾಯಿ ಇಲಾಖೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಕೊಪ್ಪಳದ ತಾಸಿಲ್ದಾರರು ಸೇರಿದಂತೆ ಶಾಸಕರು ಹಾಗೂ ಸಂಸದರ ಹೊಣೆಗಾರಿಕೆ ಅತ್ಯಗತ್ಯವಾಗಿದೆ, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಹುಂಡಿಯಲ್ಲಿ ಹಾಕುವ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ರಶೀದಿ ಸಮೇತವಾಗಿ ಹಣ ಪಡೆದುಕೊಳ್ಳುವ ಅಲ್ಲಿನ ಆಡಳಿತ ಸಿಬ್ಬಂದಿ ಅವರು ಕೊಠಡಿಗಳ ನಿರ್ಮಾಣದ ಜೊತೆಗೆ, ನದೀಪಾತ್ರ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ, ಇದಕ್ಕೆ ಮಾದರಿಯ ಬಗ್ಗೆ ಶೃಂಗೇರಿಯ ಶಾರದಾಂಬೆ ಧರ್ಮಸ್ಥಳದ ಮಂಜುನಾಥ ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಮತ್ತಿತರ ದೇವಾಲಯಗಳಲ್ಲಿ ಕಂಡುಬರುವ ಸ್ವಚ್ಛತೆ ಭಕ್ತಾದಿಗಳಿಗೆ ಕಲ್ಪಿಸುವ ಮೂಲಸೌಲಭ್ಯಗಳ ಬಗ್ಗೆ ಯೋಚಿಸಬೇಕಾಗಿದೆ, ಬೇರೆ ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ದೇವಸ್ಥಾನದ ಬಗ್ಗೆ ಸ್ವಚ್ಛತೆಯ ಬಗ್ಗೆ ವ್ಯವಸ್ಥೆಯ ಬಗ್ಗೆ ಮತ್ತಷ್ಟು ಭಕ್ತಿಭಾವ ಬೆಳೆಸಿಕೊಳ್ಳುವುದರ ಮೂಲಕ ಇನ್ನೂ ಎರಡು ದಿನ ಸನ್ನಿಧಾನದಲ್ಲಿ ತಂಗಿ ಅಮ್ಮನವರ ಸೇವೆಗೆ ಮುಂದಾಗುವಂತೆ ಪ್ರೇರಣೆ ನೀಡುವ ಕಾರ್ಯ ಆಗಬೇಕೆಂಬ ಸದುದ್ದೇಶದಿಂದ ಸರಕಾರದ ಗಮನಸೆಳೆಯುವ ಪ್ರಯತ್ನ ಇದಾಗಿದೆ,

Leave a Comment

Your email address will not be published. Required fields are marked *

Translate »
Scroll to Top