ಬೆಂಗಳೂರು,ಫೆ,20 : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ:ಡಾ||ರಾಜ್ ಕುಮಾರ್ ವಾರ್ಡ್ ನಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭೂಗತ ಕೇಬಲ್ ಆಗಿ ಬದಲಾವಣೆಗೊಂಡಿರುವ ಕೆ.ಪಿ.ಟಿ.ಸಿ.ಎಲ್.ಹೈಟೆನ್ಷನ್ ಲೈನ್ ನನ್ನು ತೆರವುಗೊಳಿಸುವ ಕಾಮಗಾರಿ ಪೂಜೆಯನ್ನು ದೀಪಾ ಬೆಳಗಿಸಿ ವಸತಿ ಸಚಿವರಾದ ವಿ.ಸೋಮಣ್ಣರವರು ಚಾಲನೆ ನೀಡಿದರು. ಬಿ.ಬಿ.ಎಂ.ಪಿ.ವಿಶೇಷ ಆಯುಕ್ತರಾದ ದೀಪಕ್ಅಧಿಕಾರಿಗಳು ಮತ್ತು ಜಂಟಿ ಆಯುಕ್ತರಾದ ಶ್ರೀನಿವಾಸ್ ,ಕೆ.ಪಿ.ಟಿ.ಸಿ.ಎಲ್.ಮುಖ್ಯ ಅಭಿಯಂತರಾದ ಜಯಕುಮಾರ್, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ , ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರೂಪಲಿಂಗೇಶ್ವರ್ , ಗಂಗಭೈರಯ್ಯ,ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್,ವಾಗೇಶ್,ಶಿಲ್ಪ ಶ್ರೀಧರ್, ಪಲ್ಲವಿರವರು ,ಬಿ.ಜೆ.ಪಿ.ಮುಖಂಡರಾದ ರಾಜಪ್ಪ, ಹೆಚ್.ರಮೇಶ್ ರವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣರವರು ಮಾತನಾಡಿ ಸರ್ಕಾರದ ಯೋಜನೆಗಳು ಯಶ್ವಸಿಯಾಗಲು ಅಧಿಕಾರಿ ಮತ್ತು ಜನರ ಸಹಕಾರ ಮುಖ್ಯ.
ಶ್ರೀ ಶಿವಕುಮಾರ ಸ್ವಾಮೀಜಿ ,ಬಾಲಗಂಗಾಧರ ಸ್ವಾಮೀಜಿರವರ ಆಶೀರ್ವಾದದಿಂದ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ. ಜನರ ಸಹಕಾರದಿಂದ 3ವರ್ಷದಲ್ಲಿ ನೂರಾರು ಅಭಿವೃದ್ದಿ ಕೆಲಸವಾಗಿದೆ. 7ಎಕರೆ ಬಾಳಯ್ಯನ ಕೆರೆ ಭೂಕಬಳಿಕೆದಾರರಿಂದ ಬಿಡಿಸಿ ,ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದದಿಂದ ಉಳಿಸಲಾಯಿತು .
2ಕೋಟಿ ವೆಚ್ಚದಲ್ಲಿ ಎಸ್.ಟಿ.ಪಿ.ಪ್ಲಾಂಟ್ ನಿರ್ಮಾಣ ಮತ್ತು 57ದೇವಾಲಯಗಳ ನವೀಕರಣ,ಜೀರ್ಣೋದ್ದಾರ ಮತ್ತು ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಮಾನಸನಗರದಲ್ಲಿ 2000ಸಾವಿರ ಮಕ್ಕಳ ಪ್ರವೇಶಾವಕಾಶ ಇರುವ ಶಾಲೆ ಆರಂಭವಾಗಲಿದೆ. 45ಉದ್ಯಾನವನ ,24ಬ್ಯಾಡ್ಮಿಂಟನ್ ಕೋರ್ಟ್ ಗಳು ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 12ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ 250ವಿದ್ಯಾರ್ಥಿಗಳ ಉಳಿದುಕೊಳ್ಳುವ ಪಿ.ಜಿ.ಸೆಂಟರ್ ಹಾಗೂ ಐ.ಎ.ಎಸ್.ಮತ್ತು ಐ.ಆರ್.ಎಸ್.ತರಭೇತಿ ಕೇಂದ್ರ ಉಚಿತ ಡಯಾಲಿಸಿಸ್ ಕೇಂದ್ರ . ದಾಸರಹಳ್ಳಿ ವಾರ್ಡ್ ನಲ್ಲಿ 200ಹಾಸಿಗೆ ಸಾಮ್ಯರ್ಥದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಂತರಪಾಳ್ಯದಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ,ಒಳಚರಂಡಿ ರಸ್ತೆಗಳು ಸುವ್ಯವಸ್ಥಿತವಾದ ಮಾದರಿ ವಿಧಾನಸಭಾ ಕ್ಷೇತ್ರವಾಗಿದೆ ಎಂದು ಹೇಳಿದರು.