ಮರಿಯಮ್ಮನಹಳ್ಳಿ,ಫೆ,16 : ಸದಾ ಜನರ ಹಿತಕ್ಕಾಗಿ ಸ್ಮಯೋರ್ ಕಂಪನಿಯ ಮೂಲಕ ವಿವಿಧ ಗ್ರಾಮಗಳ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು, ಕ್ರೀಡಾ ಪರಿಕರಗಳ ವಿತರಣೆ, ದೇವಸ್ಥಾನಗಳ ನಿರ್ಮಾಣ, ಜನರಿಗೆ ಉಚಿತ ಶೌಚಾಲಯ ನಿರ್ಮಾಣ ಹಾಗೂ ಸಸಿಗಳ ವಿತರಣೆ ಸೇರಿದಂತೆ ಗ್ರಾಮದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಸ್ಮಯೋರ್ ಕಂಪನಿಯು ಮಾಡಿದೆ ಎಂದು ಅಭಿಮಾನದಿಂದ ಬಹೀರ್ಜಿ ಘೋರ್ಪಡೆ ಅಭಿಮಾನಿಗಳು ಸ್ಮಯೋರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಮಹಾರಾಜ ಬಹೀರ್ಜಿ ಘೋರ್ಪಡೆಯವರಿಗೆ ಸನ್ಮಾನಿಸಿದರು.