ಮರಿಯಮ್ಮನಹಳ್ಳಿ ,,ಫೆ,16 : ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ ನರ್ಸರಿ ಹತ್ತಿರ ಬರುವ ಶ್ರೀ ನರ್ಸರಿ ದುರ್ಗಾದೇವಿ ಮತ್ತು ಶ್ರೀ ಗಾಳೆಮ್ಮದೇವಿ ದೇವಸ್ಥಾನದಲ್ಲಿ ಭಾರತ್ ಹುಣ್ಣಿಮೆ ನಿಮಿತ್ತ 3ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮವನ್ನು ಬುಧವಾರ ದೇವಸ್ಥಾನದ ಕಮಿಟಿಯಿಂದ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕಾರ್ಯಕ್ರಮ ನಿಮಿತ್ತ ಉಭಯ ದೇವಿಯರುಗಳಿಗೆ ಗಂಧ, ಪುಷ್ಪಾಲಂಕಾರಗಳಿಂದ ದೇವಿಯರನ್ನು ಅಲಂಕರಿಸಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿದಿ-ವಿಧಾನಗಳ ಮೂಲಕ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಮುಂಜಾನೆ ದೇವಸ್ಥಾನದ ಹತ್ತಿರದ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆಯನ್ನು ಸಕಲ ವಾದ್ಯ ಮೇಳಗಳೊಂದಿಗೆ ನೆರವೇರಿಸಲಾಯಿತು. ದೇವಸ್ಥಾನವನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿದ್ದು, ಮರಿಯಮ್ಮನಹಳ್ಳಿ ಸೇರಿದಂತೆ ಗಾಳೆಮ್ಮನ ಗುಡಿ, ಹನುಮನಹಳ್ಳಿ, ಡಣಾಪುರ, ವೆಂಕಟಾಪುರ, ಹಂಪಿನಕಟ್ಟೆ, ವ್ಯಾಸನಕೆರೆ ಗ್ರಾಮದ ನೂರಾರು ಭಕ್ತ ವೃಂದವು ಪೂಜೆಯಲ್ಲಿ ಪಾಲ್ಗೊಂಡು ದೇವಿಯರ ಕೃಪೆಗೆ ಪಾತ್ರರಾದರು.
ಅನ್ನಸಂತರ್ಪಣೆ: ಸ್ಮಯೋರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಮಹಾರಾಜ ಬಹೀರ್ಜಿ ಘೋರ್ಪಡೆಯವರು ಹಾಗೂ ಆದಿತ್ಯ ಘೋರ್ಪಡೆಯವರು ನರ್ಸರಿ ದುರ್ಗಾದೇವಿ ಮತ್ತು ಶ್ರೀ ಗಾಳೆಮ್ಮದೇವಿಯವರಿಗೆ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಂಸ್ಥೆಯಿಂದ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಬಡಜನರ ಒಳಿತಿಗಾಗಿ ನಮ್ಮ ಸ್ಮಯೋರ್ ಸಂಸ್ಥೆಯಿಂದ ಗ್ರಾಮಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಮುಂದಾಗುತ್ತೇವೆ ಎಂದರು.
ವಸ್ತ್ರ ವಿತರಣೆ: ನರ್ಸರಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಗಾಳೆಮ್ಮದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಡಣಾಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಎ.ಗಾಳೆಪ್ಪ ರವರು ದೇವಸ್ಥಾನದ ಅರ್ಚಕರಿಗೆ, ಜೋಗತಿಯವರಿಗೆ, ಮಡಿವಾಳದವರಿಗೆ ಹಾಗೂ ಡೊಳ್ಳು ವಾದ್ಯದವರಿಗೂ ವಸ್ತ್ರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ನಾಗಮ್ಮ ಸಿ.ಎ.ಗಾಳೆಪ್ಪ, ಸಿ.ಎ.ನಾಗರಾಜ, ಪರಶುರಾಮ, ಶ್ರೀನಿವಾಸ, ಸಿ.ಎ.ವೆಂಕಟೇಶ, ಉಮೇಶ, ನಿಂಗಮ್ಮ, ರಾಧಮ್ಮ, ಗೌರಮ್ಮ, ಗಂಗಮ್ಮ, ಡಾಬಾ ಮಂಜುನಾಥ, ನರಸಿಂಹ, ಅಂಜಿನಪ್ಪ, ರಮೇಶ, ರಾಮ, ಪಿಂಜಾರ ರಾಜ, ಈಶ್ವರ ಗೌಡ, ಅಂಜಿನಿ, ಚಂದ್ರು, ಬಾಬು, ಬಾರವಲಿ, ನೆತ್ತು ಕಲ್ಲಪ್ಪ, ಹನುಮಂತ, ಓಂಕಾರಿ, ಮೈಲಾರಪ್ಪ, ಪೂಜಾರಿ ರುದ್ರಪ್ಪ ಇತರರಿದ್ದರು.