ಬಳ್ಳಾರಿ. ಫೆ.14 – ಶ್ರೀ ಮಹಾದೇವ ಎಜುಕೇಶನ್, ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್, ವಂದೇ ಮಾತರಂ ಯುವಕ ಸಂಘ, ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಂಕ್ರಾ0ತಿ ವೈಭವ-2022 ವು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು 20-22 ಕಲಾವಿದರು ಚಿತ್ರಸಂತೆ-ಕರಕುಶಲ ಪ್ರದರ್ಶನ ಮಾಡಿದರು, ಅದರಲ್ಲಿ ಮುಖ್ಯವಾಗಿ ಕಿನ್ನಾಳ್ ಕಲೆ ಮತ್ತು ತೆಂಗಿನಕಾಯಿಯಿoದ ವಿವಿಧ ಕಲಾಕೃತಿಗಳನ್ನು ತಯಾರಿಸುವುದು ಎಲ್ಲರನ್ನೂ ಆಕರ್ಷಣೆಗೊಳಿಸಿತ್ತು. ವಿವಿಧ ಸ್ಪರ್ಧೆಗಳಾದ ಗಾಯನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ಮಾದರಿ ಸ್ಪರ್ಧೆ, ನೃತ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ, ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ & ಮೆಹಂದಿ ಸ್ಪರ್ಧೆಗಳಲ್ಲಿ ಸುಮಾರು 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಕಾವ್ಯ-ಕುಂಚ-ಗಾಯನ – ಸಂಕ್ರಾoತಿ ಕವಿಗೋಷ್ಠಿಯಲ್ಲಿ ಸುಮಾರು 30 ಕವಿ-ಸಾಹಿತಿಗಳು ಭಾಗವಹಿಸಿದ್ದರು ಮತ್ತು ಅವರು ಬರೆದ ಕವಿತೆಗಳ “ಸುಗ್ಗಿ ಸಂಕ್ರಾoತಿ 2022” ಕವನ ಸಂಕಲನ ಲೋಕಾರ್ಪಣೆಯಾಯಿತು. ಶಶಿಧರ ಉಬ್ಬಳಗುಂಡಿ “ಹೃನ್ಮಂದಿರ” (ಸಮಗ್ರ ಭಾವಗೀತೆಗಳು) ಪುಸ್ತಕ ಬಿಡುಗಡೆಯೂ ನಡೆಯಿತು. ಸೇವಾ ಸಾಧಕ ಕಾಯಕ ಸನ್ಮಾನ: ಡಾ. ನಿಷ್ಠಿರುದ್ರಪ್ಪ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ, ಕು. ಬಿಂದು ಆರ್. ಡಿ.ರಾಂಪುರ, ಹವ್ಯಾಸಿ ಲೇಖಕಿ, ಕವಯಿತ್ರಿ ಆಧುನಿಕ ವರ್ತನಕಾರ್ತಿ, ಅತಿಥಿ ಶಿಕ್ಷಕಿ, ಶ್ರೀಮತಿ. ರಂಜು, ಯೋಗ ಶಿಕ್ಷಕರು, ಹಂಪಿ, ಸುಭಾಷ್, ಚಿತ್ರನಟ / ನೃತ್ಯ ಗುರುಗಳು ಸಂಯೋಜಕರು, ಬಳ್ಳಾರಿ ಇವರಿಗೆ ನೀಡಿ ಸನ್ಮಾನಿಸಲಾಯಿತು. ರಾಜ್ಯಮಟ್ಟದ “ಕಲಾ ಕಾಯಕ ಸೇವಾ ರತ್ನ” ಪ್ರಶಸ್ತಿಯನ್ನು ಕು. ಅವಂತಿಕ – ನೃತ್ಯ ಕ್ಷೇತ್ರ, ಕು. ಹರ್ಷ ಉಪ್ಪಾರ್ – ಸಂಗೀತ ಕ್ಷೇತ್ರ, ಬಿ.ಎಸ್. ಸತ್ಯನಾರಾಯಣ, ಚಿತ್ರಕಲೆ ಕ್ಷೇತ್ರ, ರವಿ ಕುಮಾರ್, ಯುವ ರೈತ, ಅಜಯ್ ಬಣಕಾರ್, ಸಾಹಿತ್ಯ ಇವರಿಗೆ ನೀಡಿ ಸನ್ಮಾನಿಸಲಾಯಿತು. ಆರ್ ಕೆ ನಾರಾಯಣ್ರವರ ನಾಟಕ, ಕನ್ನಡಕ್ಕೆ ಡಾ. ಕೆ.ಪಿ. ಮಂಜುನಾಥ ರೆಡ್ಡಿ, ಉಪನ್ಯಾಸಕರು, ಬಳ್ಳಾರಿ ಇವರು ಭಾಷಾಂತರಿಸಿದ “ಕೆರೆಯ ಕಾವಲುಗಾರ” ನಾಟಕವನ್ನು ನೇತಿ ರಘುರಾಮ್, ರಂಗನಿರ್ದೇಶಕ ಇವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.
ಜೀವಮಾನ ಸಾಧನೆಗಾಗಿ ರಾಜ್ಯ ಮಟ್ಟದ “ನಮ್ಮ ಬಳ್ಳಾರಿ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ಸಿಂಧುವಾಳ ಕೇಶವರೆಡ್ಡಿ, ಪ್ರಗತಿಪರ ಮತ್ತು ಸಾವಯುವ ಕೃಷಿ ರೈತ, ಶ್ರೀಮತಿ ವನಮಾಲ ಕುಲಕರ್ಣಿ, ಖ್ಯಾತ ಶಾಸ್ತ್ರೀಯ ನೃತ್ಯ ಗುರುಗಳು, ಶ್ರೀಮತಿ ರಮಾದೇವಿ, ಖ್ಯಾತ ವಕೀಲರು, ಡಾ. ಪರಸಪ್ಪ ಬಂದ್ರಕಳ್ಳಿ, ಖ್ಯಾತ ನೇತ್ರ ತಜ್ಞರು, ಡಾ. ಬಿ ಜಿ ಕನಕೇಶಮೂರ್ತಿ, ಪ್ರಾಂಶುಪಾಲರು, ಸಹ ಪ್ರಾಧ್ಯಾಪಕರು, ವಿಜಯನಗರ ಇವರಿಗೆ ನೀಡಿ ಗೌರವಿಸಲಾಯಿತು. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ದೀಪದ ಕೋಲಿನ ನೃತ್ಯ ವಾಲ್ಯನಾಯ್ಕ್ & ರವಿವರ್ಮ ತಂಡ, ಅನಂತಶಯನಗುಡಿ, ವಿಜಯನಗರ ಜಿಲ್ಲೆಯವರು ಪ್ರಸ್ತುತ ಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. “ಶತಮಾನಗಳಿಂದಲೂ ಬಳ್ಳಾರಿ ಜಿಲ್ಲೆ ಭಾಷಾ ಬಾಂಧವ್ಯ ಮತ್ತು ಭಾವ್ಯಕ್ಯತೆಗೆ ಹೆಸರುವಾಸಿಯಾಗಿದೆ. ಆರ್ಥಿಕವಾಗಿ ಸಬಲರಾಗಿರುವವರು ಸಂಗೀತ, ಕಲೆ, ಸಂಸ್ಕೃತಿ, ಸಾಹಿತ್ಯ ಪ್ರಾಕಾರಗಳನ್ನು ಆಯೋಜಿಸಿ ಉತ್ತೇಜಿಸುವ ವೇದಿಕೆಗಳಿಗೆ ಸಹಕಾರ ಮತ್ತು ಪಾಲ್ಗೊಳ್ಳವಿಕೆ ಬಹುಮುಖ್ಯವಾಗಿದೆ” ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮದು ಕ್ಯಾಷ್ ಪ್ರೈಜ್ ಕೊಡುವ ಕಾರ್ಯಕ್ರಮವಲ್ಲ. ಮಾನವೀಯ ಹೃದಯಗಳಿಂದ ಸೇವೆ ಸಲ್ಲಿಸಿದ ಅನಘ್ರ್ಯ ರತ್ನಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ರಸೂಲ್ ಸಾಬ್ ಅಂಥವರು ಭಾಷಾ ಬಾಂಧವ್ಯ ವೃದ್ಧಿಸುವಲ್ಲಿ ಶ್ರಮಿಸಿದ್ದಾರೆ. ಅವರು ನಮ್ಮೊಂದಿಗಿಲ್ಲವಾದರೂ ಅವರ ಸೌಹಾರ್ದ ಗುಣ ಎಲ್ಲೆಡೆ ಪಸರಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲೆಮರೆಯ ಕಾಯಿಯಂತೆ ಅದೆಷ್ಟೋ ಜನರು ನಮ್ಮಲ್ಲಿದ್ದಾರೆ. ಅವರನ್ನು ಸರ್ಕಾರ ಗುರುತಿಸುವುದಿಲ್ಲ. ಟ್ರಸ್ಟ್ ನವರು, ಅಕಾಡೆಮಿ ಅವರು ಉತ್ತಮ ವೇದಿಕೆಗಳನ್ನು ನೀಡುತ್ತಿದ್ದಾರೆ. ಪ್ರೀತಿ ಹಂಚುತ್ತಿದ್ದಾರೆ. ಎಲ್ಲ ಧರ್ಮೀಯರು ಒಟ್ಟಿಗೆ ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿಕೆ ಸರಿಯಾದದ್ದಲ್ಲ. ಪರಿಷತ್ ಗೆ ಆಸಕ್ತಿ ಇದ್ದರೆ ಯಾರುಬೇಕಾದರೂ ಸದಸ್ಯತ್ವ ಸ್ಥಾನ ಪಡೆಯಬಹುದು. ಹೆಬ್ಬೆಟ್ಟಿನವರು ಸದಸ್ಯರಾಗಿದ್ದಾರೆ ಎಂಬ ಹೇಳಿಕೆಯಿಂದ ಕನ್ನಡಿಗರಲ್ಲಿ ಬೇಸರವಾಗಿದೆ. ರಾಜ್ಯದ 30 ಜಿಲ್ಲೆಗಳ ಮತ್ತು ಗಡಿ ಜಿಲ್ಲೆಗಳ ಎಲ್ಲ ಕಸಾಪ ಅಧ್ಯಕ್ಷರು ಈ ಕುರಿತು ಜೋಷಿ ಅವರಲ್ಲಿ ಮನವರಿಕೆ ಮಾಡಿಕೊಡುತ್ತೇವೆ ಎಂದರು. ವರನಟ ಡಾ.ರಾಜಕುಮಾರ್, ಗುಬ್ಬಿ ವೀರಣ್ಣ, ಬೆಳಗಲ್ಲು ವೀರಣ್ಣ, ದರೋಜಿ ಈರಮ್ಮನಂಥವರು ಇಡೀ ರಾಷ್ಟ್ರವೇ ಮೆಚ್ಚುವಂಥ ಕಲಾ ನೈಪುಣ್ಯತೆಯನ್ನು ಹೊಂದಿದ್ದಾರೆ. ಲತಾ ಮಂಗೇಶ್ಕರ್ ಅಂಥವರೇ ಕೇವಲ ಒಂದೇ ದಿನ ಶಾಲೆಗೆ ಹೋದವರು ಮತ್ತೆ ತಿರುಗಿ ಕೂಡ ಶಾಲೆಗೆ ಹೋದವರಲ್ಲ. ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲಿಲ್ಲವೇ? ಮಹೇಶ್ ಜೋಷಿ ಅವರಿಗೆ ಈ ರೀತಿ ಹೇಳಿಕೆ ಮತ್ತೆ ನೀಡದಂತೆ ನೋಡಿಕೊಳ್ಳುತ್ತೇವೆ ಎಂದರು.
ಉದ್ಘಾಟನೆಯ ದಿವ್ಯ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು, ಕಮ್ಮರಚೇಡು ಮಹಾಸಂಸ್ಥಾನ, ಬಳ್ಳಾರಿ ವಹಿಸದ್ದರು ಮತ್ತು ಈ ಎಲ್ಲಾ ಕಾರ್ಯಕ್ರಮಗಳಿಗೆ ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಮುರಾರಿ ಗೌಡ, ಜಿಲ್ಲಾಧ್ಯಕ್ಷರು, ಭಾರತೀಯ ಜನತಾ ಪಕ್ಷ, ಬಳ್ಳಾರಿ, ಡಾ. ಕೆ ಎಸ್ ಅಶೋಕ್, ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ, ಶ್ರೀಮತಿ ಚೇತನ ವೇಮಣ್ಣ, ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ, ನಜೀರ್ ಬಾಷ, ನಿರ್ದೇಶಕರು, ಅಮ್ಮ ಕಿಂಡರ್ ಗಾರ್ಡನ್ ಶಾಲೆ, ಬಳ್ಳಾರಿ, ಹಂಪನ ಗೌಡ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ, ಗಾದೆಪ್ಪ, ಸಾಹಿತಿಗಳು, ಹಂಪಿ ವಿಶ್ವವಿದ್ಯಾಲಯ, ಡಿ. ಮಲ್ಲಿಕಾರ್ಜುನ, ಕವಿಗಳು, ಮಾಲಿಕರು, ಎಸ್.ಜಿ.ಆರ್.ಎಲ್. ಲಾಜಿಸ್ಟಿಕ್ಸ್ ಪ್ರೆöÊ.ಲಿ. ಬಿ.ಎಸ್. ಪ್ರಭುಕುಮಾರ್, ಅಧ್ಯಕ್ಷರು, ಕನ್ನಡ ಚೈತನ್ಯ ವೇದಿಕೆ, ಬಳ್ಳಾರಿ ಸಿದ್ದಲಿಂಗೇಶ ಕೆ ರಂಗಣ್ಣನವರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ, ಬಿ.ಎಂ. ಈರಪ್ಪಯ್ಯ, ಸಾವಯವ ಕೃಷಿಕರು/ಸಿರಿಧಾನ್ಯ ಬೆಳೆಗಾರರು, ಬೈರಾಪುರ, ಶಿರುಗುಪ್ಪ ತಾ., ಅಲಿವೇಲು ಸುರೇಶ್, ಯುವ ಮುಖಂಡರು, ಸೂರ್ಯಕಲಾ ಮತ್ತು ಸೇವಾ ಬಳಗ, ಬಳ್ಳಾರಿ, ಕೋನಂಕಿ ತಿಲಕ್, ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ, ಶ್ರೀಮತಿ ಬೋರಮ್ಮ, ಜಿಲ್ಲಾಧ್ಯಕ್ಷರು, ಸಾವಿತ್ರಿ ಬಾಯಿ ಫುಲೆ ಶಿಕ್ಷಕರ ಸಂಘ, ಬಳ್ಳಾರಿ, ಎರೆಗೌಡ ಕೆ, ಅಧ್ಯಕ್ಷರು, ವಕೀಲರ ಸಂಘ, ಬಳ್ಳಾರಿ, ಇಬ್ರಾಹಿಂ ಬಾಬು, ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ, ಹನುಮಂತ ಗುಡಿಗುಂಟೆ, ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ, ಎನ್ ಬಸವರಾಜ್, ಉಪಾಧ್ಯಕ್ಷರು, ರಾಘವ ಕಲಾ ಮಂದಿರ, ಬಳ್ಳಾರಿ, ನರಸಿಂಹಮೂರ್ತಿ, ಪತ್ರಕರ್ತರು, ಸುವರ್ಣ ಟಿವಿ, ಬಳ್ಳಾರಿ, ಶ್ರೀಮತಿ. ತ್ರಿವೇಣಿ ಪತ್ತಾರ್, ಸಹ ಕಾರ್ಯದರ್ಶಿ, ಬಳ್ಳಾರಿ ವಕೀಲರ ಸಂಘ, ಬಳ್ಳಾರಿ, ಶ್ರೀಮತಿ. ರೋಜಾ ವಿಶ್ವನಾಥ್, ಬಳ್ಳಾರಿ, ಡಾ. ರಮೇಶ್ ಗೋಪಾಲ್, ಅಧ್ಯಕ್ಷರು, ಆರ್ಯವೈಶ್ಯ ಸಂಘ, ಬಳ್ಳಾರಿ, ಶಿವಾಜಿ ರಾವ್, ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಬಳ್ಳಾರಿ, ನರೇಂದ್ರ, ಉದ್ಯಮಿಗಳು, ಕೆಸ್ಟರ್ ಮಾರ್ಕೆಟಿಂಗ್, ಬಳ್ಳಾರಿ
ಕಾರ್ಯಕ್ರಮಗಳ ನಿರೂಪಣೆಯನ್ನು ಮುಕ್ತಾ ವಿ, ಶೋಭಾ ವಿ ಕಾತರಕಿ, ಎಸ್ ಸತ್ಯನಾರಾಯಣ, ಪ್ರತಿಭಾ ಪಾಟೀಲ್ ನಿರ್ವಹಿಸಿದರು ಸ್ಮಿಯಾಕ್ ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿ, ಮೇಡಂ ಕ್ಯೂರಿ ವಿಜ್ಙಾನ ಅಕಾಡಮಿ ಅಧ್ಯಕ್ಷ ಡಾ.ಎಸ್.ಮಂಜುನಾಥ, ವಂದೇ ಮಾತರಂ ಯುವಕ ಸಂಘದ ಅರುಣ್ ಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಹೆಚ್ ರೇಣುಕಾ, ಕೆ.ತಿಪ್ಪೇರುದ್ರಪ್ಪ, ಕೆ.ಕೋದಂಡರಾಮ, ಸುಮ ನಾಡಿಗಾರ್, ಜಿ.ಹರಿಪ್ರಸಾದ್, ಟ್ರಸ್ಟಿಗಳಾದ ಕೆ.ಚನ್ನಬಸಪ್ಪ, ಗುರುಪ್ರಸಾದ್ ವೈಎಸ್, ಸುಧೀಂದ್ರ ನಾಡಿಗರ್, ಇ ಬಾಲಾಜಿ, ಸುಭದ್ರಾ ವಿ., ಗುರುಗಳಾದ ಲಕ್ಷ್ಮೀ, ಸರೋಜಾ ಬ್ಯಾತನಾಳ್ ಮತ್ತಿತರರು ಇದ್ದರು.