ಕುಷ್ಟಗಿ,14 : ಹೌದು ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಶ್ರೀ ಹುಚ್ಚುರೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಪೋಲಿಸ್ ರು ಇಲ್ಲದ ಕಾರಣ ರಾಜಾರೋಷವಾಗಿ ರಣರಂಗದ ರಾಜಾ ಅಂಗಳದಲ್ಲಿ ಜುಜಾಟ ಮತ್ತು ಇಸ್ಪೀಟು ಆಟ ಜೋರಾಗಿ ನೆಡೆಯಿತು. ಕುಷ್ಟಗಿ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ಈ ಹಿರೇನಂದಿಹಾಳ ಗ್ರಾಮ ಶ್ರೀ ಹುಚ್ಚುರೇಶ್ವರ ಜಾತ್ರೆಯಲ್ಲಿ ಒಬ್ಬರು ಪೋಲಿಸ್ ರು ಇಲ್ಲದ ಕಾರಣ ಈ ಜಾತ್ರೆಯಲ್ಲಿ ಜುಜಾಟ ಮತ್ತು ಇಸ್ಪೀಟು ಆಟ ಜೋರಾಗಿ ನೆಡೆಯಿರು ಎಂದರೆ ತಪ್ಪಾಗಲಾರದು.
ಆದರೆ ಪೋಲಿಸರ ಕಣ್ಣುಗಾವಲು ಇಲ್ಲದ ಕಾರಣ ಕೆಲ ಪೋಲಿ ಹುಡುಗರು ಜುಜಾಟದ ಚಾಟನ್ನು ನೆಲದ ಕೆಳಗೆ ಹಾಸಿ ೧೦ ರೂ ಕಟ್ಟಿದರೆ ೧೦೦ ರೂ ಕೊಡುವದಾಗಿ ನೆಂಬಿಸಿ ಜನ ಸಾಮಾನ್ಯರ ಜೊತೆ ಹಣ ಸುಲುಗೆ ಮಾಡುವಂತದ್ದು ಬಹಳ ಕಂಡು ಬಂತು. ಮತ್ತು ಅದೇ ರೀತಿಯಲ್ಲಿ ಜಾರಾರೋಷವಾಗಿ ರಾಜಾ ಅಂಗಳದಲ್ಲಿ ಇಸ್ಪೀಟು ಆಟ ಹಾಡುವಂತದ್ದು ಕಂಡು ಬಂತು. ಇಂತಹ ಕೊವೀಡ್-೧೯ ಸಂದರ್ಭದಲ್ಲಿ ಸಾಮಾನ್ಯ ಜನರ ಹತ್ತಿರ ಕೇಳಿದರೆ ಹಣ ಇಲ್ಲದ ಕಾರಣ ಒಂದು ಒತ್ತಿನ ಊಟಕ್ಕು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ ಇಂತಹ ಸಂದರ್ಭದಲ್ಲಿ ಕೆಲ ಪುಂಡ ಪೋಕರಿಗಳು ಜನ ಸಾಮಾನ್ಯರಿಗೆ ಯಾವುದೋ ಒಂದು ಹೇಳಿ ಸಾಮಾನ್ಯ ಜನರ ತೆಲೆ ಕೆಡಿಸಿ ಹಣ ಸುಲುಗೆ ಮಾಡುವುದನ್ನು ಸಾರ್ವಜನಿಕರು ಶಾಪ ಹಾಕುವಂತದ್ದು ಕಂಡು ಬಂತು.
ಆದರೆ ಪೋಲಿಸರು ಜಾಲ ಬಿಸಿ ತಾಲೂಕಿನಲ್ಲಿ ನೆಡೆಯುವಂತಹ ಜಾತ್ರೆಯಲ್ಲಿ ಇಂತಹ ಪುಂಡ ಪೋಕರಿಗಳನ್ನು ಹಿಡಿದು ಜನ ಸಮಾನ್ಯರ ಜಬಿಗೆ ಕತ್ತರಿ ಹಾಕುವುದನ್ನು ತಡೆಗಟ್ಟಬೇಕು ಹಳ್ಳಿಯ ಜನರ ಹಣವನ್ನು ಉಳಿಸಬೇಕು ಎಂದು ಜಾತ್ರೆಯಲ್ಲಿ ಬಂದ ಯಾತ್ರಾರ್ಥಿಗಳು ನಮ್ಮ ವಾಹಿನಿಗೆ ತಿಳಿಸಿದ್ದಾರೆ.