ಗದಗ : ಕೇ೦ದ್ರ ಮತ್ತು ರಾಜ್ಯ ಸರಕಾರದ ಕಾಯ೯ಕ್ರಮಗಳನ್ನು ಅನುಷ್ಠಾನಗೊಳಿಸಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದವರನ್ನು ಮುಖ್ಯವಾಹಿನಿಗೆ ತರುವ೦ತೆ ಗದಗ ಜಿಲ್ಲಾ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದ ಸಲಹಾ ಸಮಿತಿ ಅಧ್ಯಕ್ಷರಾದ ಗದಗ ಜಿಲ್ಲಾಧಿಕಾರಿ ಎ೦. ಸು೦ದರೇಶಬಾಬು ಸಲಹೆ ನೀಡಿದರು. ಗದಗ ಜಿಲ್ಲಾಧಿಕಾರಿಗಳ ಸಭಾ೦ಗಣದಲ್ಲಿ ಗುರುವಾರ ಜರುಗಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದ ಸಲಹಾ ಸಮಿತಿ ಸಭೆ ಹಾಗೂ ಅವರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದವರಿಗಿರುವ ಸಕಲ ಸವಲತ್ತುಗಳನ್ನು ಸಕಾಲಕ್ಕೆ ಅನುಷ್ಠಾನ ಮಾಡಿ ಅವೆ ಸವ೯ತೋಮುಖ ಬೆಳವಣಿಗೆಗೆ ಶ್ರಮಿಸಬೇಕಾಗಿದೆ. ಅವರಿಗೆ ಜಮೀನು, ಮನೆ ನಿಮಿ೯ಸಿಕೊಳ್ಳಲು ಸಹಾಯಧನ, ವಿದ್ಯಾಥಿ ವೇತನ, ವಸತಿ ನಿಲಯಗಳಲ್ಲಿ ಆ ಜನಾ೦ಗದ ವಿದ್ಯಾಥಿ೯ಗಳಿಗೆ ಮೊದಲ ಆದ್ಯತೆ ನೀಡುವದು ಸೇರಿದ೦ತೆ ಅವರಿಗಿರುವ ಸಕಲ ಸರಕಾರಿ ಕಾಯ೯ಕ್ರಮಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇದೇ 29 ರ೦ದು ಗದಗ, ಮು೦ಡರಗಿ ಮತ್ತು ರೋಣ ತಾಲೂಕುಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದವರ ಅರಿವು ಮೂಡಿಸುವ ಕಾಯ೯ಕ್ರಮ ನಡೆಸುವ೦ತೆ ಸೂಚನೆ ನೀಡಿದರು.
ಈ ಸ೦ದಭ೯ದಲ್ಲಿ ಸಲಹಾ ಸಮಿತಿ ಉಪಾಧ್ಯಕ್ಷರಾದ ಜಿಪ೦ ಸಿಇಓ ಎಸ. ಭರತ, ಹಿ೦ದುಳಿದ ವಗ೯ಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೆಹಬೂಬ ತು೦ಬರಮಟ್ಟಿ, ಕನಾ೯ಟಕ ರಾಜ್ಯ ಸರಕಾರಿ ನೌಕರ ಸ೦ಘದ ಗದಗ ಜಿಲ್ಲಾದ್ಯಕ್ಷ ರವಿ ಗು೦ಜೀಕರ, ಡಾ. ಬಸವರಾಜ ಬಳ್ಳಾರಿ, ಅಲೆಮಾರಿ ಜನಾ೦ಗದ ಮುಖ೦ಡ ಕೆ೦ಚಪ್ಪ ಹೆಳವಾರ ಸೇರಿದ೦ತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.