ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಮುಖ್ಯಮಂತ್ರಿ ನಿರ್ದೇಶನ

ಬೆಂಗಳೂರು, ಜನವರಿ, 28 : ರಾಜ್ಯ ಸರಕಾರದ ಮಹತ್ವಾಕಂಕ್ಷೆಯ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿ ಗಳ ಆಯ್ಕೆಗೆ ಇರುವ ವಾರ್ಷಿಕ ವರಮಾನ ಮಿತಿಯನ್ನು ರೂಪಾಯಿ ೧.೨೦ ಲಕ್ಷಕ್ಕೆ ಹೆಚ್ಚಿಸಲು, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ನಿರ್ದೇಶಿಸಿ ದ್ದಾರೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡುತ್ತ, ಈ ಮಹಿತಿ ನೀಡಿದ ಸಚಿವರು, ” ವರಮಾನ ಮಿತಿ ಹೆಚ್ಚಿಸುವಂತೆ, ವಸವಿ ವಂಚಿತ ಬಡವರು ಮನವಿ ಸಲ್ಲಿಸುತ್ತಾ ಬಂದಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಹಾಗೂ ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದರು.

ಕೇಂದ್ರ ಸರಕಾರವು ಬಿಪಿ ಎಲ್ ಕಾರ್ಡುದಾರರ ವರಮಾನ ಮಿತಿಯನ್ನು ರೂಪಾಯಿ ೧.೨೦ ಲಕ್ಷಕ್ಕೆ ಈಗಾಗಲೇ ಹೆಚ್ಚಿಸಿದೆ, ಆದರೆ ರಾಜ್ಯದಲ್ಲಿ, ಆಶ್ರಯ ಯೋಜನೆ ಫಾನುಭವಿಗಳಿಗೆ ವರಮಾನ ಮಿತಿ ರೂಪಾಯಿ ೩೨೦೦೦ ದಷ್ಟಿದ್ದು, ಹೆಚ್ಚಿನ ಅರ್ಹರು ಯೋಜನೆಯ ಲಾಭ ಪಡೆಯುವುದರಿಂದ ವಂಚಿತರಾಗಿದ್ದಾರೆ. ತನ್ನ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು, ಸರಕಾರದ ಮುಖ್ಯ ಕಾರ್ಯದರ್ಶಗಳಿಗೆ ಹಾಗೂ ವಸತಿ ಖಾತೆಯ ಕಾರ್ಯದರ್ಶಿಗಳಿಗೆ, ಸೂಕ್ತ ನಿರ್ದೇಶನ ನೀಡಿದರು, ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಗಳ ನಿರ್ಧಾರದಿಂದ ಲಕ್ಷಾಂತರ ಮಂದಿ ವಸತಿ ವಂಚಿತ ಬಡವರು ಪ್ರಯೋಜನ, ಪಡೆಯಲಿದ್ದಾರೆ, ಎಂದು ಸಚಿವರು ತಿಳಿಸಿದ್ದಾರೆ. ಸಕಾರಾತ್ಮಕ ವಾಗಿ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಸಚಿವರು ಕೃತಜ್ಞತೆ, ಸಲ್ಲಿಸಿದ್ದಾರೆ

Leave a Comment

Your email address will not be published. Required fields are marked *

Translate »
Scroll to Top