ಬೆಂಗಳೂರು,ಡಿ.೨೫ : ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಕನ್ನಡ ಪರ ಸಂಘಟಗಳು ಡಿಸೆಂಬರ್ ೩೧ ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ. ಕನ್ನಡ ಪರ ಸಂಘಟಗಳ ಬಂದ್ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡಿದ್ದು, ಆ ದಿನ ನಡೆಯುವ ಚಿತ್ರರಂಗದ ಚಟುವಟಿಕೆ ನಿಲ್ಲಿಸುವುದಿಲ್ಲ ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮಾಹಿತಿ ನೀಡಿದ್ದಾರೆ.
ಇದರ ಕುರಿತು ಮಾತನಾಡಿದ ಅವರು,ಕೊರೊನದಿಂದ ಚಿತ್ರರಂಗ ಈಗಾಗಲೇ ಸಾಕಷ್ಟು ಸಮಸ್ಯೆ, ನಷ್ಟ ಎದುರಿಸಿದೆ. ಅಲ್ಲದೇ ಡಿಸೆಂಬರ್ ೩೧ಶುಕ್ರವಾರವಾಗಿದ್ದು ಮೂರ್ನಾಲ್ಕು ಕನ್ನಡ ಚಿತ್ರಗಳು ರಿಲೀಸ್ ಆಗಲಿವೆ. ಈಗಾಗಲೇ ಸಾಕಷ್ಟು ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಪತ್ರ ಬರೆದು ಬಂದ್ ಗೆ ಬೆಂಬಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಬಂದ್ ದಿನ ನಾವು ಫಿಲ್ಮ್ ಚೇಂಬರ್ ಎದುರು ಸಾಂಕೇತಿಕವಾಗಿ ಮೌನಾಚರಣೆ ಮಾಡಿ ಪ್ರತಿಭಟನೆ ಗೆ ನೈತಿಕ ಬೆಂಬಲ ಕೊಡುತ್ತೇವೆಮದು ಮಾಧ್ಯಮಗಳಿಗೆ ತಿಳಿಸಿದ್ದಾರೆ