ಬೆಂಗಳೂರು,ಡಿ.೨೫- ಕೋಟ್ಯಂತರ ರೂ ಬಂಡವಾಳ ಹಾಕಿರುವ ಚಿತ್ರ “ಲವ್ ಯೂ ರಚ್ಚು” ಡಿಸೆಂಬರ್ ೩೧ ರಂದು ಬಿಡುಗಡೆಯಾಗದಿದ್ದರೆ ನನಗೆ ಆತ್ಮಹತ್ಯೆ ಒಂದೇ ದಾರಿ ಎಂದು ನಿರ್ದೇಶಕ-ನಿರ್ಮಾಪಕರು ದೇಶಪಾಂಡೆ ತಿಳಿಸಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದೆ ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಬಂದ್ ಮಾಡುವುದು ಅದರಲ್ಲೂ ಶುಕ್ರವಾರದಂದು ಮಾಡುವುದು ನಿರ್ಮಾಪಕರ ಪಾಲಿಗೆ ಕರಾಳ ದಿನ . ಆ ದಿನ ಚಿತ್ರ ಬಿಡುಗಡೆಯಾಗಿದ್ದರೆ ನನಗೆ ಬೇರೆ ದಾರಿಯಿಲ್ಲ ಆತ್ಮಹತ್ಯೆಯೊಂದೇ ದಾರಿ ಎಂದು ಹೇಳಿದ್ದಾರೆ.
“ಲವ್ ಯು ರಚ್ಚು” ಚಿತ್ರ ಡಿಸೆಂಬರ್ ೩೧ ರಂದು ಬಿಡುಗಡೆಯಾಗುತ್ತಿದೆ ಅಂದೇ ಕರ್ನಾಟಕ ಬಂದ್ ಇರುವುರಿಂದ ಎಂದಿನಂತೆ ಚಿತ್ರರಂಗದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈ ರಾಜ್ ಅವರಿಗೆ ಪತ್ರ ಬರೆದಿದ್ದಾರೆ ಅಲ್ಲದೆ ಈ ಸಂಬಂಧ ಅವರೊಂದಿಗೆ ಮಾತನಾಡಿ ನಿರ್ಮಾಪಕರ ಹಿತ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.