ಪಪಂ ಚುನಾವಣೆ ನಿಮಿತ್ತ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ

ಮರಿಯಮ್ಮನಹಳ್ಳಿ,ಡಿ,25 : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆಯಿಂದ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಹರೀಶ್ ರವರು ಹೇಳಿದರು.

ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಸಂಜೆ ನಡೆದ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿ ಹಗರಿಬೊಮ್ಮನಹಳ್ಳಿ ಪುರಸಭೆ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣೆ ನಿಯಮವನ್ನು ಪಾಲಿಸುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಚುನಾವಣಾ ಆಯೋಗ ನಿಗದಿಗೊಳಿಸಿದ ಜನಕ್ಕಿಂತ ಹೆಚ್ಚಿನ ಜನರನ್ನು ಸೇರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೇ ಚುನಾವಣೆ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ  ಸಿಪಿಐಗಳಾದ ಮಂಜುನಾಥ, ವಸಂತ್ ಅಸೊದೆ, ಪಿಎಸ್ಐಗಳಾದ ಹನುಮಂತಪ್ಪ ತಳವಾರ, ಸರಳಾ, ಮಾರುತಿ, ಮೀನಾಕ್ಷಿ, ಎಎಸ್ಐಗಳಾದ ದುರುಗಪ್ಪ, ನಿರಂಜನಗೌಡ, ರಾಮಕೃಷ್ಣ ನಾಯ್ಕ್, ಮುರಾರಿ, ಪೇದೆಗಳಾದ ನಾಗಭೂಷಣ, ಬಸವನಗೌಡ, ಕೊಟ್ರೇಶ್, ಪ್ರವೀಣ್, ರೇವಣ ಸಿದ್ದಪ್ಪ, ಅಂಜಿನಪ್ಪ, ರವಿ, ಶಿವರಾಜ್, ಸಂಜೀವ್, ಪಂಪಾಪತಿ, ಗುರುಬಸವ ಇತರರಿದ್ದರು. 

Leave a Comment

Your email address will not be published. Required fields are marked *

Translate »
Scroll to Top