ಸಂಡೂರು : ಯುವಕರು ಚೈತನ್ಯ ಮತ್ತು ಅರೋಗ್ಯವಾಗಿರಲು ಕ್ರೀಡೆಗಳು ಸಹಕಾರಿ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಸೋಲು- ಗೆಲುವು ಮುಖ್ಯವಲ್ಲ ಹಾಗಾಗಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎನ್. ಸೋಮಪ್ಪ ತಿಳಿಸಿದರು.
ಅವರು ತಾಲೂಕಿನ ದೇವರ ಬುಡ್ಡೆನ ಹಳ್ಳಿ ಗ್ರಾಮದಲ್ಲಿ ಶ್ರೀ ಹುಲಿಕುಂಟೇಶ್ವರ ಯವಕ ಸಂಘ ದವರು ದ್ವಿತೀಯ ಬಾರಿ ಹಮ್ಮಿಕೊಂಡಿದ್ದ ಮುಕ್ತ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ,ದೇವರಬುಡ್ಡೆನಹಳ್ಳಿ, ನಿಡುಗುರ್ತಿ , ತೋಕೆನಹಳ್ಳಿ, ಬಡೇಲಡಕು, ಗೊಪ್ಲಾಪುರ, ಕೂಡ್ಲಿಗಿ,ಲಿಂಗನಳ್ಳಿ,ನಾಗನಹಳ್ಳಿ,ಗಂಗನಹಳ್ಳಿ ,ಜಾಗಿರ್ ಬುಡ್ಡೆನಹಳ್ಳಿ , ಜಂಬೋಬನಹಳ್ಳಿ, ಹೊಸಹಳ್ಳಿ ಬೊಮ್ಮಲಗುಂಡು,ಒಬಳಾಪುರ,ಸೋವೆನಹಳ್ಳಿ ತಂಡಗಳು ಭಾಗವಹಿಸಿದ್ದವು.
ಬುಡ್ಡೆನಹಳ್ಳಿಯ ಜೆ ಡಿ ಎಸ್ ಮುಖಂಡರಾದ ಮರಿಸ್ವಾಮಿ,ರಾಮಾಂಜಿನಿ,ಹುಲಿರಾಜ,ಹುಲುಗಪ್ಪ, ಸೋಂಡುರಪ್ಪ,ಗೋವಿಂದಪ್ಪ, ಸೋಂಡ್ರಪ್ಪ,ಬಸವರಾಜ ,ಮೂರ್ತಿ,ಯುವ ಮುಖಂಡರುಗಳು ಉಪಸ್ಥಿತರಿದ್ದರು.
ಕ್ರಿಕೆಟ್ : ಚೋರನೂರು ಗ್ರಾಮದಲ್ಲಿ ಗ್ರಾಮ ಮಟ್ಟದ ಪ್ರೀಮಿಯರ್ ಲೀಗ್ ,ಕ್ರೀಕೇಟ್ ಪಂದ್ಯವಳಿಗೆ ಟಾಸ್ ಹಾಕುವುದರ ಮೂಲಕ ಚಾಲನೆ ನೀಡಿದರು. ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಜಯಿಸಿದ್ದೇ ಅದರೇ ಗ್ರಾಮಕ್ಕೆ ಕ್ರೀಡಾಂಗಣ ಮಂಜೂರು ಮಾಡಿಸುವುದಾಗಿ ಯುವಕರಿಗೆ ಭರವಸೆ ನೀಡಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಹುಸೇನ್ ಪೀರ ದೊಡ್ಡಮನೆ, ಕೆ.ಕೆ.ಮೆಹಬೂಬ್ ಬಾಷ ಚೋರ್ ನೂರ್ ನ ಖಾದರ್ ಬಾಷ, ಎ. ವಿರೇಶ್ ,ಬಂಡ್ರೇಪ್ಪ,ಒಬಳಾಪುರ ಮಾರೇಶ್ ,ಹನುಮಂತಪ್ಪ ,ಬುಡ್ಡೆನಹಳ್ಳಿ ಗಂಗಪ್ಪ ,ಪಕೀರಪ್ಪ, ಶಿವಶಂಕರ್ , ಸೋಮಶೇಖರ,ಹೆಚ್.ನಾಗರಾಜ , ಜೆ ಡಿ ಎಸ್ ಹಿರಿಯ ಮುಖಂಡರಾದ ಬೆಲ್ದಾರ್ ಮಹ್ಮದ್ ಸಾಬ್ , ಎರ್ರಿಸ್ವಾಮಿ , ಅಮಿತ್, ಮೆಹಬೂಬ್ , ವಿರೇಶ್ , ಚಂದ್ರಪ್ಪ, ಹನುಮಂತ ,ಶರ್ಮಸ್ , ರವಿ, ಬೆಲ್ದಾರ್ ಹುಸೇನ್, ಓಬಳೇಶ್ , ಮುಜ್ಜು, ಸೀನಾ, ರುದ್ರಪ್ಪ, ಹಾಗೂ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು , ಕಾರ್ಯಕರ್ತರು, ಯುವ ಮುಖಂಡರು ಉಪಸ್ಥಿತರಿದ್ದರು