ಹುನಗುಂದ -ಇಲಕಲ್ಲ ಅವಳಿ ತಾಲೂಕುಗಳ ಸಹಯೋಗದಲ್ಲಿ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ, ಶ್ರೀ ಗುರುಮಹಾಂತ ಸ್ವಾಮಿಜಿ ಹಾಗು ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಹಾಗು ಡಾ|| ಮಹಾಂತೇಶ ಕಡಪಟ್ಟಿ. ಅರವಿಂದ ಮಂಗಳೂರ . ಮಹಾಂತಗೌಡ ಪಾಟೀಲ ಹಲವಾರು ಪ್ರಮುಖರ ಹಾಗು ವೈಧ್ಯರ ಬಳಗದ ನೇತೃತ್ವದಲ್ಲಿ ರಕ್ತಗುಂಪು ತಪಾಸಣೆ ಹಾಗು ಬೃಹತ್ ರಕ್ತದಾನ ಶಿಬಿರ*ಕಾರ್ಯಕ್ರಮ ನಡೆಯಿತು.
ಹುನಗುಂದ ನಗರದಲ್ಲಿ ಆಯೋಜನೆ ಮಾಡಲಾಗಿದ ಶಿಬಿರದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುವುದರ ಮೂಲಕ ಮಾನವೀಯತೆ ಮೇರೆದರು. ಕಾರ್ಯಕ್ರಮದಲ್ಲಿ ತಾಲೂಕಾ ಬಿಜೆಪಿ ಕಾರ್ಯಕರ್ತರು, ಪ್ರಮುಖರು, ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.