ಮೂರನೇ ಅಲೆ ತಡೆಗಟ್ಟುವ ಮುಜಾಗೃತ ಕ್ರಮವಾಗಿ

ಕುಷ್ಟಗಿ:- ನಾನು ಆವೇಶದಲ್ಲಿ ಬಿಜೆಪಿ ಪಕ್ಷದ ಮುಖಂಡರು ಸತ್ತರೆ 1 ಕೋಟಿ ನಮ್ಮ ಕಾಂಗ್ರೆಸ್ ಪಕ್ಷ ಕೊಡುತ್ತದೆ ಎಂದಿದ್ದು ನಿಜ
ಆದರೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಈ ವಿಷಯವನ್ನ ರಾಜಕೀಯವಾಗಿ ತೆಗೆದುಕೊಂಡು ನನ್ನ ಮತ್ತು ನಮ್ಮ ಕುಟುಂಬದವರ
ಬಗ್ಗೆ ಮಾತನಾಡಿದ್ದಾರೆ ನಾನು ಯಾರ ಹತ್ತಿರ ಸಾಲವನ್ನು ತೆಗೆದುಕೊಂಡಿದ್ದೇನೆ ಎನ್ನುವದನ್ನು ಸಾಲದ ದಾಖಲಾತಿಯನ್ನು ತೆಗೆದುಕೊಂಡು
ನಿಮ್ಮ ಮನೆಗೆ ಬರುವ ಆದರೆ ನಾನು ಸಾಲ ತೆಗೆದುಕೊಂಡಿದ್ದು ಯಾರಾದರು ನಿಮ್ಮ ಬಳಿ ಹೇಳಿದರೆ 24 ಗಂಟೆಯ ಒಳಗೆ ನಿಮ್ಮ
ಮನೆಯಲ್ಲೇ ಕುಳಿತು ನನ್ನ ಸಂಪೂರ್ಣ ಆಸ್ತಿಯನ್ನಾದರು ಮಾರಾಟ ಮಾಡಿ ಸಾಲವನ್ನು ತೀರಿಸುವೆ ಈ ಸವಾಲನ್ನು ಸ್ವೀಕರಿಸುವಿರಾ?
ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರವರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲವರಿಗೆ ಸವಾಲಾಕ್ಕಿದ್ದಾರೆ.

ಇಲ್ಲಿನ ಶಾಸಕರ ಕಾರ್ಯಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಕುಷಗಿ ಕ್ಷೇತ್ರದ ಶಾಸಕನಾಗಿ ಈ ಕ್ಷೇತ್ರದ
ಜನತೆ ನನನ್ನು ಎರಡು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ ಆದರೆ ಈ ಮಣ್ಣಿನ ಋಣ ತಿರಿಸಲು ನಾನು ಬದ್ಧ ಎಂದರು.
ಕೃಷ್ಣಾ ಬೀ ಸ್ಕೀಂ ಯೋಜನೆ ಕೊಪ್ಪಳ ಏತ ನೀರಿವರಿ ಯೋಜನೆ ಆಗುತ್ತದೆ ಆದರೆ‌ 5 ವರ್ಷದಲ್ಲಿ ಮುಗಿಯುವುದಿಲ್ಲ ಎಂದು ಹೇಳಿದ್ದೇನೆ ವಿನಹ
ಕಡ್ಡಾಯವಾಗಿ ಆಗುವದಿಲ್ಲ ಎಂದು ಹೇಳಿಲಿಲ್ಲ ಆದರೆ ಈಗಲಾದರು ಏಳುತ್ತೇನೆ ಮಾಜಿ ಶಾಸಕ ದೊಡ್ಡನಗೌಡರ ಸರಕಾರದ ಇದೇ 1
ವರ್ಷದಲ್ಲಿ ಕೃಷ್ಣಾ ಬೀ ಸ್ಟೀಂ ಯೋಜನೆ ಕಾಮಗಾರಿಯನ್ನು ಮುಗಿಸಿ ರೈತರ ಹೊಲಗಳಿಗೆ ನೀರು ಕೊಟ್ಟರೆ ನಾನು ರಾಜಕೀಯ ನಿವೃತ್ತಿ
ಹೊಂದುತ್ತೇನೆ ಎಂದು ಸವಾಲ್ ಎಸೆದರು.


ಊರು ಬಿಟ್ಡು ಬಂದವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪದೇ ಪದೇ ಏಳಿಕೆಯನ್ನು ಕೊಡುತ್ತಿದ್ದಾರೆ ಆದರೆ ನಾನು ಎರಡು
ಬಾರಿ ಕುಷ್ಟಗಿ ಕ್ಷೇತ್ರದ ಶಾಸಕನಾಗಿದ್ದೇನೆ ದೊಡ್ಡನಗೌಡ ಕೂಡ ಎರಡು ಬಾರಿ ಶಾಸಕರಾಗಿದ್ದಾರೆ ನನ್ನ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಅವರ
ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಬಹಿರಂಗ ಚರ್ಚೆಗೆ ನಾನು ಸದಾ ಸಿದ್ಧ ಬೇಕಾದರೆ ಈ ಸವಾಲನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸ್ವೀಕರಿಸುತ್ತಾರೆಯೇ ಎಂದು ಗುಡಿಗಿದರು. ಈ ಸಂದರ್ಭದಲ್ಲಿ ಮರಸಭೆ ಸದಸ್ಯರಾದ ಮೈನುದ್ದೀನ್ಸ್ ಮುಲ್ಲಾ.ನಾಗರಾಜ) ಚಿರಂಜೀವಿ ಹಿರೇಮಠ, ವಸಂತ ಮೇಲಿನಮನಿ, ರಾಮಣ್ಣ ಬಿನ್ನಾಳ, ಕಾಂಗ್ರೇಸ್ ಮುಖಂಡರಾದ ಸೋಮಶೇಖರ ವೈಜಾಪೂರ, ಮಂಜುನಾಥ ಕಟ್ಟಿಮನಿ, ಯಮನೂರ ಸಂಗಂಟಿ, ಮಹೇಶ
ಕೊಳೂರ ಸದ್ದಾಮ್ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top