ದೃಷ್ಟಿಯು ವಯಸ್ಸಾಗುವಿಕೆಯ ಪ್ರಮುಖ ಅಂಶ ಶೇ.86 ರಷ್ಟು ಭಾರತೀಯರ ಅಭಿಮತ

ಬೆಂಗಳೂರು: ಅಲ್ಕಾನ್ ಐ ಆನ್ ಕ್ಯಾಟರಾಕ್ಟ್ ಜಾಗತಿಕ ಸಮೀಕ್ಷೆಯಿಂದ ಈ ಅಂಶ ಬಹಿರಂಗ, ಭಾರತದಲ್ಲಿ ವೃದ್ಧಾಪ್ಯದ ಪ್ರಮುಖ ಅಂಶಗಳಲ್ಲಿ ದೃಷ್ಟಿಗೆ 1 ಸ್ಥಾನ, ನಂತರದಲ್ಲಿ ನೆನಪಿನ ಶಕ್ತಿ ಮತ್ತು ಚಲನಶೀಲತೆ, 50+ ವಯೋಮಾನದ 54% ಭಾರತೀಯರು ಕನ್ನಡಕವನ್ನು ಧರಿಸುವುದರಿಂದ ವಯಸ್ಸಾದವರಂತೆ ಭಾವಿಸುತ್ತಾರೆ. ಜಾಗತಿಕ ಮಟ್ಟದ ಕಣ್ಣಿನ ಆರೈಕೆ ಸಂಸ್ಥೆಯಾಗಿರುವ ಅಲ್ಕಾನ್ 2023 ರ ಮಾರ್ಚ್ –ಏಪ್ರಿಲ್ ನಲ್ಲಿ ಭಾರತ ಸೇರಿದಂತೆ 10 ದೇಶಗಳಲ್ಲಿ ಕಣ್ಣಿನ ಪೊರೆ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ 50+ ವಯೋಮಾನದವರಲ್ಲಿ ದೃಷ್ಟಿ ಮತ್ತು ಕಣ್ಣಿನ ಪೊರೆ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕಣ್ಣಿನ ಪೊರೆ ತಪಾಸಣೆ ಮಾಡಿಸಿಕೊಳ್ಳುತ್ತಿರುವವರು ಮತ್ತು ಕಣ್ಣಿನ ಪೊರೆ ಸರ್ಜರಿ ಮಾಡಿಕೊಂಡವರು ಸಹ ಇದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಕಣ್ಣಿನ ಪೊರೆಯ ಕುರಿತು ತಪಾಸಣೆ ಮಾಡಿಸಿಕೊಳ್ಳದೇ ಇರುವ 50 ರ ವಯೋಮಾನದವರನ್ನೂ ಸಂದರ್ಶಿಸಲಾಗಿದೆ. ಈ ಸಮೀಕ್ಷೆಯಲ್ಲಿ ಕಣ್ಣಿನ ಪೊರೆ ಸರ್ಜರಿ ಮಾಡಿಸಿಕೊಂಡವರಲ್ಲಿ ಬಹುತೇಕ ರೋಗಿಗಳು ಸರ್ಜರಿ ನಂತರ ದೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿರುವುದರ ಜೊತೆಗೆ ಗುಣಮಟ್ಟದ ಜೀವನವೂ ಸುಧಾರಿಸಿದೆ ಎಂದು ಹೇಳಿದ್ದಾರೆ.


ಭಾರತದಲ್ಲಿ ಬಹುತೇಕ ಜನರು ವಯಸ್ಸಿಗೆ ಅಥವಾ ವೃದ್ಧಾಪ್ಯ ತಲುಪುತ್ತಿರುವುದಕ್ಕೆ ದೃಷ್ಟಿಯಲ್ಲಿ ಉಂಟಾಗುವ ದೋಷವು ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ. ಅಂದರೆ, ದೃಷ್ಟಿಯಲ್ಲಿ ದೋಷ ಕಂಡುಬಂದರೆ ತಮಗೆ ವಯಸ್ಸಾಗುತ್ತಿದೆ ಎಂದು ಭಾವಿಸುತ್ತಾರೆ. ಇದರ ಪರಿಣಾಮ ಈ ದೃಷ್ಟಿಗೆ ನಂಬರ್ ಒನ್ ಸ್ಥಾನ ನೀಡಿದ್ದಾರೆ. ನಂತರದ ಸ್ಥಾನದಲ್ಲಿ ನೆನಪು ಮತ್ತು ಚಲನಶೀಲತೆ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದ್ದಾರೆ. ಬಹುತೇಕ ಭಾರತೀಯರು ಅಂದರೆ ಶೆ.90 ರಷ್ಟು ಜನರು ಕೆಟರಾಕ್ಟ್ ಸರ್ಜರಿ ಮಾಡಿಕೊಳ್ಳಲು ಬಯಸಿದ್ದಾರೆ. ಈ ಮೂಲಕ ಸ್ಪಷ್ಟ ದೃಷ್ಟಿಯನ್ನು ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಭಾರತದಲ್ಲಿ ನಾವು ಕನ್ನಡಕ ಧರಿಸುತ್ತಿರುವುದರಿಂದ ವಯಸ್ಸಾದವರಂತೆ ಕಾಣುತ್ತೇವೆ ಎಂದು ಶೇ.54 ಜನರು ಹೇಳಿಕೊಂಡಿದ್ದರೆ, ಶೇ.92 ರಷ್ಟು ಜನರು ಕನ್ನಡಕದ ಬದಲಾಗಿ ಲೆನ್ಸ್ ಗೆ ಹಣ ನೀಡಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಕೆಟರಾಕ್ಟ್ ಸರ್ಜರಿಗೆ ಸಂಬಂಧಿಸಿದಂತೆ ತಾವು ಕಣ್ಣಿನ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯುತ್ತೇವೆ ಎಂದು ಶೇ.59 ರಷ್ಟು ಜನರು ಹೇಳಿಕೊಂಡಿದ್ದರೆ, ಶೇ.39 ಮತ್ತು ಶೇ.37 ರಷ್ಟು ಜನರು ಕ್ರಮವಾಗಿ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಲಹೆ ಪಡೆಯುವುದಾಗಿ ಹೇಳಿದ್ದಾರೆ. ಇನ್ನು ಶೇ.36 ರಷ್ಟು ಜನರು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ವೆಬ್ ಸೈಟ್ ಗಳ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈ ಸಮೀಕ್ಷೆ ಬಗ್ಗೆ ಮಾತನಾಡಿದ ಅಲ್ಕಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಮರ್ ವ್ಯಾಸ್ ಅವರು, “ಜಾಗತಿಕವಾಗಿ ಜೂನ್ ತಿಂಗಳನ್ನು ಕೆಟರಾಕ್ಟ್ ಜಾಗೃತಿ ಮಾಸವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಾವು ನಡೆಸಿದ ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಭಾರತದಲ್ಲಿ ವಯಸ್ಸಾದ 260 ಮಿಲಿಯನ್ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಪ್ರಕಾರ ಉತ್ತಮ ದೃಷ್ಟಿ ಪಡೆಯುವುದು ಮುಖ್ಯವಾಗಿದೆ ಎಂಬುದನ್ನು ಅರಿಯಲಿ ಎಂಬ ಉದ್ದೇಶ ನಮ್ಮದಾಗಿದೆ. ಸ್ಪಷ್ಟ ದೃಷ್ಟಿಯು ಪ್ರತಿಯೊಬ್ಬರ ದೈನಂದಿನ ಚಟುವಟಿಕೆ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಮತ್ತು ಇದು ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನಡೆಸಿರುವ ಸಮೀಕ್ಷೆಯು ಜನರಲ್ಲಿ ಕಣ್ಣಿನ ಆರೋಗ್ಯ ಮತ್ತು ಆರೈಕೆ ಮಾಡಿಕೊಳ್ಳುವುದು ಸೂಕ್ತ ಎಂಬುದನ್ನು ಒತ್ತಿ ಹೇಳುತ್ತದೆ’’ ಎಂದು ತಿಳಿಸಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top