ಹರಿಹರ,ಮಾ,27 : ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಅವರು ತುಳಸಿ ಕಟ್ಟೆಗೆ ನೀರು ಹಾಯಿಸಿ, ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಧರ್ಮ ಸಭೆಗೆ ಚಾಲನೆ ನೀಡಿದರು. ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ವಹಿಸಿದ್ದರು.

ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕರಾದ ಶ್ರೀ ಎಸ.ರಾಮಪ್ಪ, ಹರಿಹರ ತಾಲ್ಲೂಕಿನ ತಹಶಿಲ್ದಾರ ರಾಮಚಂದ್ರಪ್ಪ, ಬೆಳ್ಳೂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಬೀರಪ್ಪ, ಹರಿಹರ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಜಡಿಯಪ್ಪ ಸೇರಿದಂತೆ ಹಲ ಗಣ್ಯರು, ಮಠದ ಭಕ್ತರು ಉಪಸ್ಥಿತರಿದ್ದರು.
