ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಹಲವೆಡೆ ಈಗಾಗಲೇ ಅನೇಕ ಅನಾಹುತಗಳು ಸಂಭವಿಸಿವೆ. ಬೆಂಗಳೂರಿನಲ್ಲಿಯೂ ಹಲವೆಡೆ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರೊಂದು ನೀರಿನಲ್ಲಿ ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಂಗಾರು ಮಳೆಗೆ ಬೆಂಗಳೂರು ಹೇಗೆ ಸಿದ್ಧಗೊಂಡಿದೆ ಮತ್ತು ಮಹಾನಗರದಲ್ಲಿ ಪ್ರವಾಹ ಭೀತಿ ಎದುರಿಸುತ್ತಿರುವ ಎಷ್ಟು ಪ್ರದೇಶಗಳಿವೆ ಎಂಬುದನ್ನು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ ಪಟ್ಟಿ ಮಾಡಿದೆ.

ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ ಇತ್ತೀಚಿನ ವರದಿಯು ಮುಂಬರುವ ಮಾನ್ಸೂನ್ ಋತುವಿಗೆ ಬೆಂಗಳೂರು ಎಷ್ಟು ಕಳಪೆಯಾಗಿ ಸಿದ್ಧವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಈಗಾಗಲೇ ಇನ್ಫೋಸಿಸ್ ಟೆಕ್ಕಿ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನಗರದಲ್ಲಿ ಪೂರ್ವ ಮುಂಗಾರು ಮಳೆಯ ನಂತರ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಕೆಎಸ್‌ಎನ್‌ಡಿಎಂಸಿ ವರದಿಯು ಬೆಂಗಳೂರಿನಲ್ಲಿ ದಿನಕ್ಕೆ 70 ಮಿಮೀ ಮಳೆಯಯಾದರೆ ನಗರದಲ್ಲಿ ಎಷ್ಟು ಪ್ರದೇಶಗಳು ಮುಳುಗಡೆಯಾಗಬಹುದು ಎಂಬುದನ್ನು ಅಂದಾಜಿಸಿದೆ. ಕೆಎಸ್‌ಎನ್‌ಡಿಎಂಸಿ ಪ್ರಕಾರ, ದಿನಕ್ಕೆ 70 ಮಿಮೀ ಮಳೆಯಯಾದರೆ ಸುಮಾರು 226 ಪ್ರದೇಶಗಳಲ್ಲಿ ಮುಳುಗಡೆ ಉಂಟಾಗಲಿದೆ. ಬೆಂಗಳೂರು ದಕ್ಷಿಣ ವಲಯ ಇಂತಹ ಅತಿ ಹೆಚ್ಚು ಸಂಭಾವ್ಯ ಮುಳುಗಡೆ ಪ್ರದೇಶಗಳನ್ನು (61) ಹೊಂದಿದೆ. ನಂತರ ಬೆಂಗಳೂರು ಪಶ್ಚಿಮ 40, ದಕ್ಷಿಣದಲ್ಲಿ 40 ಮತ್ತು ಯಲಹಂಕದಲ್ಲಿ 11 ಸಂಭಾವ್ಯ ಮುಳುಗಡೆ ಪ್ರದೇಶಗಳಿವೆ.

ಸಂಭಾವ್ಯ ಮುಳುಗಡೆ ಪ್ರದೇಶ ಎಲ್ಲೆಲ್ಲಿ ಎಷ್ಟು? : ಬೆಂಗಳೂರು ಪೂರ್ವ – 61 ಬೆಂಗಳೂರು ಪಶ್ಚಿಮ – 40 ಬೆಂಗಳೂರು ದಕ್ಷಿಣ – 40 ಯಲಹಂಕ – 11 ಮಹದೇವಪುರ – 24 ಬೊಮ್ಮನಹಳ್ಳಿ – 24 ಆರ್ಆರ್ ನಗರ – 23 ದಾಸರಹಳ್ಳಿ – 3