ಬೆಂಗಳೂರು: ರಾಜಭವನದಲ್ಲಿಂದು 11;45 ಕ್ಕೆ ಆರಂಭವಾದ ಸಮಾರಂಭದಲ್ಲಿ ಇಪ್ಪತ್ನಾಲ್ಕು ಮಂದಿ ನೂತನ ಸಚಿವರಿಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು.ಆ ಮೂಲಕ ಒಟ್ಟು 34 ಮಂದಿ ಸಚಿವರೊಂದಿಗೆ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದಂತಾಗಿದ್ದು, ಇದೀಗ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.
ಹಾಗಾದರೆ ನೂತನ ಸಚಿವರಿಗೆ ಸಿಕ್ಕ ಖಾತೆ ಯಾವುದು ಒಮ್ಮೆ ನೋಡಿ ಬಿಡಿ

- ಸಿದ್ಧರಾಮಯ್ಯ – ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ಡಿಪಿಎಆರ್, ವಾರ್ತಾ ಇಲಾಖೆ, ಹಂಚಿಕೆಯಾಗದ ಎಲ್ಲಾ ಖಾತೆಗಳು
- ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿಇಲಾಖೆ
- ಪರಮೇಶ್ವರ್ – ಗೃಹ ಖಾತೆ
- ಕೆ.ಜೆ.ಜಾರ್ಜ್ – ಇಂಧನ
- ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
- ಎಂ.ಬಿ.ಪಾಟೇಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಐಟಿ ಬಿಟಿ
- ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ರಾಮಲಿಂಗಾರೆಡ್ಡಿ – ಸಾರಿಗೆ
- ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
- ಕೃಷ್ಣ ಬೈರೇಗೌಡ – ಕಂದಾಯ
- ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
- ಭೈರತಿ ಸುರೇಶ್ – ನಗರ ಅಭಿವೃದ್ಧಿ
- ಡಾ.ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ
- ರಾಜಣ್ಣ – ಸಹಕಾರ
- ಆರ್. ಬಿ. ತಿಮ್ಮಾಪುರ್ – ಅಬಕಾರಿ, ಮುಜುರಾಯಿ
- ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಚಲುವರಾಯಸ್ವಾಮಿ – ಕೃಷಿ
- ಕೆ.ವೆಂಕಟೇಶ್ – ಪಶುಸಂಗೋಪನೆ ಹಾಗೂ ರೇಷ್ಮೆ
- ಈಶ್ವರ್ ಖಂಡ್ರೆ – ಅರಣ್ಯ, ಪರಿಸರ
- ಶರಣ ಬಸಪ್ಪ ದರ್ಶನಾಪುರ್ – ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
- ಶಿವಾನಂದ ಪಾಟೀಲ್ – ಜವಳಿ ಮತ್ತು ಸಕ್ಕರೆ
- ಎಸ್.ಎಸ್. ಮಲ್ಲಿಕಾರ್ಜುನ್ – ಗಣಿ, ತೋಟಗಾರಿಕೆ
- ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳು ಮತ್ತು ಎಸ್‌ಟಿ ಕಲ್ಯಾಣ
- ಮಂಕಾಳು ವೈದ್ಯ – ಮೀನುಗಾರಿಕೆ ಮತ್ತು ಬಂದರು
- ರಹೀಂ ಖಾನ್ – ಪೌರಾಡಳಿತ, ಹಜ್
- ಸಂತೋಷ್ ಲಾಡ್ – ಕಾರ್ಮಿಕ, ಕೌಶಲ್ಯಭಿವೃದ್ಧಿ
- ಎನ್.ಎಸ್. ಬೋಸರಾಜು – ಪುವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
- ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಎಂ.ಸಿ. ಸುಧಾಕರ್ – ವೈದ್ಯಕೀಯ ಶಿಕ್ಷಣ
- ಡಿ. ಸುಧಾಕರ್ – ಮೂಲಸೌಕರ್ಯ ಅಭಿವೃದ್ಧಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ
- ಬಿ.ನಾಗೇಂದ್ರ – ಯುವ ಸಬಲೀಕರಣ ಮತ್ತು ಕ್ರೀಡ, ಕನ್ನಡ ಮತ್ತು ಸಂಸ್ಕೃತಿ
- ಜಮೀರ್ ಅಹಮದ್ ಖಾನ್ – ವಸತಿ ಹಾಗೂ ವಕ್ಫ್