18 ವರ್ಷ ಮೇಲ್ಪಟ್ಟ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ

ದೇವನಹಳ್ಳಿ: ವಿಜಯಪುರ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬೂತ್ ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಮತದಾರರ ವಿಶೇಷ ಪರಿಷ್ಕರಣ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಮತ್ತು ನೋಡಲ್ ಅಧಿಕಾರಿ ಶ್ರೀಕಂಠಯ್ಯ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಕಾರ್ಯಕ್ರಮ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಾಗೂ ಜಿಲ್ಲಾಡಳಿತದ ವತಿಯಿಂದ ನಡೆಸುತ್ತಿದ್ದು, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಜನರಿಗೆ ಮತದಾನದ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವ ಪ್ರಕ್ರಿಯೆ ಹಾಗೂ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಈಗಾಗಲೇ ಪುರಸಭಾ ಕಚೇರಿ ಆವರಣ, ಬಸ್ ನಿಲ್ದಾಣ ಹಾಗೂ ಗಾಂಧಿಚೌಕದಲ್ಲಿ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ.

ನವಮತದಾರರು ಮತದಾನದ ಹಕ್ಕು ಚಲಾಯಿಸಿ: 18 ವರ್ಷ ತುಂಬಿದ ನವ ಮತದಾರರು ನಮೂನೆ ಆರರಲ್ಲಿ ತಮ್ಮ ಹೆಸರನ್ನು ನೊಂದಾಯಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಅವಕಾಶವಿದೆ. ವಿಎಚ್ ಎ ಆಪ್: ಮೊದಲು ಹೆಸರು ನೋಂದಾವಣಿಗೆ ಅರ್ಜಿ ನೀಡಿ ಅದನ್ನು ತುಂಬಿಸಿಕೊಳ್ಳುತ್ತಿದ್ದು, ಭಾರತ ಚುನಾವಣಾ ಆಯೋಗ ವಿಎಚ್ ಎ ಆಪ್ ( ವೋಟರ್ಸ್ ಹೆಲ್ಪ್ ಲೈನ್ ಆಪ್) ಬಿಡುಗಡೆ ಮಾಡಿದ್ದಾರೆ. ಇದರ ಮೂಲಕ ಫಾರಂ ನಂ. 6,7,8, 8ಎ ಅರ್ಜಿಗಳನ್ನು ಹೆಸರು ನೊಂದಾಯಿಸಲು, ಬದಲಾವಣೆ ಮಾಡಲು, ತಿದ್ದುಪಡಿ ಮಾಡಲು ಈ ಆಪ್ ಉಪಯೋಗ ಯಾವ ರೀತಿ ಮಾಡಬಹುದು ಎಂದು ತಿಳಿಸುತ್ತಿದ್ದೇವೆ. ಪ್ರತಿ ಭಾನುವಾರ ಜಾಗೃತಿ ಅಭಿಯಾನ: ನವೆಂಬರ್ ತಿಂಗಳ ನಾಲ್ಕು ಭಾನುವಾರಗಳು ಮತದಾರರ ಪಟ್ಟಿಯ ಪರಿಷ್ಕರಣೆಗೆ ಜಾಗೃತಿ ನೀಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದೇವೆ ಎಂದು ತಿಳಿಸಿದರು.

ತಾಲ್ಲೂಕು ಚುನಾವಣಾ ಶಿರಸ್ತೆದಾರರಾದ ಚೈತ್ರ ಮಾತನಾಡಿ, ಪ್ರತಿ ಕಾಲೇಜಿಗೂ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಬಗ್ಗೆ ನವ ಮತದಾರರ ನೊಂದಣಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಅಂಗವಿಕಲರು ಮತ್ತು ಇತರರು ನಮಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಕೆಲವೊಂದು ವಿಶೇಷಗಳ ಬಗ್ಗೆ ಸಂದೇಶ ನೀಡಿ ಮತದಾನದ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಜಯಪುರ ಪುರಸಭೆ ವ್ಯವಸ್ಥಾಪಕ ಆಂಜನೇಯಲು, ಪರಿಸರ ಅಭಿಯಂತರ ಮಹೇಶ್ ಕಂದಾಯಾಧಿಕಾರಿ ಗೋಪಾಲ್, ಬಿಲ್ ಕಲೆಕ್ಟರ್ ಸಯ್ಯದ್ಅಸ್ಮತುಲ್ಲಾ, ಸುನೀಲ್, ಗುಮಾಸ್ತ ಲಕ್ಷ್ಮೀನಾರಾಯಣ್, ರೆವಿನ್ಯೂ ಅಧಿಕಾರಿ ಕುಮಾರ್ ಅಂಗನವಾಡಿ ಕಾರ್ಯಕರ್ತೆಯರು ಅಧಿಕಾರಿ ವರ್ಗ ಇದ್ದರು.

Leave a Comment

Your email address will not be published. Required fields are marked *

Translate »
Scroll to Top