ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಭವಿಷ್ಯ ನುಡಿದ ಯೋಗೇಂದ್ರ ಯಾದವ್

ದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಯುಎಸ್ ಚುನಾವಣಾ ತಜ್ಞ ಇಯಾನ್ ಬ್ರೆಮ್ಮರ್ ನಂತರ, ರಾಜಕಾರಣಿ ಯೋಗೇಂದ್ರ ಯಾದವ್ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಯೋಗೇಂದ್ರ ಯಾದವ್ ಅವರ ಲೆಕ್ಕಾಚಾರ ಪ್ರಕಾರ ಈ ಬಾರಿ ಕಾಂಗ್ರೆಸ್ ೧೦೦ ಸ್ಥಾನಗಳನ್ನು ದಾಟಬಹುದು. ಬಿಜೆಪಿ ಗೆಲ್ಲಬಹುದು ಎಂದು ಹೇಳಿರುವ ಪ್ರಶಾಂತ್ ಕಿಶೋರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರಗಳಾಗುತ್ತಿವೆ. ಆದಾಗ್ಯೂ, ಪ್ರಶಾಂತ್ ಕಿಶೋರ್, ಯಾದವ್ ಅವರ ಚುನಾವಣಾ ಲೆಕ್ಕಾಚಾರವನ್ನು ಬೆಂಬಲಿಸಿದ್ದಾರೆ. ಯಾದವ್ ಪ್ರಕಾರ, ಬಿಜೆಪಿ ೨೪೦-೨೬೦ ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು ೩೪-೪೫ ಸ್ಥಾನಗಳನ್ನು ಗೆಲ್ಲುತ್ತವೆ. ಅಂದರೆ ಎನ್‌ಡಿಎ ಒಟ್ಟು ೨೭೫ ಮತ್ತು ೩೦೫ ಸ್ಥಾನಗಳನ್ನು ಗಳಿಸಬಹುದು.

ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ರ‍್ಥಮಾಡಿಕೊಳ್ಳುವವರಲ್ಲಿ ವಿಶ್ವಾಸರ‍್ಹ ವ್ಯಕ್ತಿ , ಯೋಗೇಂದ್ರ ಯಾದವ್ ಅವರು ೨೦೨೪ ರ ಲೋಕಸಭೆ ಚುನಾವಣೆಯ “ಅಂತಿಮ ಮೌಲ್ಯಮಾಪನ ಹಂಚಿಕೊಂಡಿದ್ದಾರೆ. ಯೋಗೇಂದ್ರ ಜಿ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ ೨೪೦-೨೬೦ ಸ್ಥಾನಗಳನ್ನು ಮತ್ತು ಎನ್‌ಡಿಎ ಮಿತ್ರಪಕ್ಷಗಳು ೩೫-೪೫ ಸ್ಥಾನಗಳನ್ನು ಪಡೆಯಬಹುದು.ಅಂದರೆ ಬಿಜೆಪಿ/ಎನ್‌ಡಿಎ ೨೭೫-೩೦೫ ಸ್ಥಾನ ಗಳಿಸಬಹುದು. ದೇಶದಲ್ಲಿ ರ‍್ಕಾರ ರಚಿಸಲು ೨೭೨ ಸ್ಥಾನಗಳ ಅಗತ್ಯವಿದೆ. ಈಗಿರುವ ರ‍್ಕಾರದಲ್ಲಿ ಬಿಜೆಪಿ/ಎನ್‌ಡಿಎ ೩೦೩/೩೨೩ ಸ್ಥಾನಗಳನ್ನು ಹೊಂದಿದೆ. (ಎನ್‌ಡಿಎ ಭಾಗವಾಗಿ ಶಿವಸೇನಾ ೧೮ ಸ್ಥಾನಗಳನ್ನು ಗೆದ್ದುಕೊಂಡಿದೆ ಆದರೆ ಈಗ ಅವರೊಂದಿಗೆ ಇಲ್ಲ). ಈಗ ಯಾರ ರ‍್ಕಾರ ರಚನೆಯಾಗುತ್ತಿದೆ ಎಂದು ನೀವೇ ನರ‍್ಣಯಿಸಿ. ಯಾರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಜೂನ್ ೪ ರಂದು ತಿಳಿಯಲಿದೆ ಎಂದು ಪ್ರಶಾಂತ್ ಕಿಶೋರ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ೮೫ ರಿಂದ ೧೦೦ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವ ಆಶಯ ಹೊಂದಿರುವ ಇಂಡಿಯಾ ಬ್ಲಾಕ್ ೧೨೦-೧೩೫ ಸ್ಥಾನಗಳಿಗೆ ಇಳಿಯುವ ಸಾಧ್ಯತೆಯಿದೆ ಎಂದಿದ್ದಾರೆ ಯೋಗೇಂದ್ರ ಯಾದವ್. ೨೦೧೯ ರ ಸರ‍್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ೫೨ ಸ್ಥಾನಗಳನ್ನು ಗೆದ್ದಿತ್ತು.

ಕಿಶೋರ್, ಈ ವಾರ ಸಂರ‍್ಶನವೊಂದರಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಗಮನರ‍್ಹ ಅತೃಪ್ತಿ ಇಲ್ಲದ ಕಾರಣ ಬಿಜೆಪಿ ಆರಾಮವಾಗಿ ಬಹುಮತದ ಅಂಕವನ್ನು ದಾಟುತ್ತದೆ ಎಂದು ಹೇಳಿದ್ದರು.

ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕ ಕೋಪದ ಬಗ್ಗೆ ನಾವು ಕೇಳಿಲ್ಲ ಎಂದು ಪ್ರಶಾಂತ್ ಕಿಶೋರ್ ಎನ್‌ಡಿಟಿವಿಗೆ ನೀಡಿದ ಸಂರ‍್ಶನದಲ್ಲಿ ಹೇಳಿದ್ದರು. ಏತನ್ಮಧ್ಯೆ ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ ’೩೭೦ ಸ್ಥಾನ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ.

 

ಬಿಜೆಪಿ ೨೯೫ ರಿಂದ ೩೧೫ ಸ್ಥಾನಗಳನ್ನು ಗೆಲ್ಲಬಹುದು ಎಂದು ಅಮೆರಿಕದ ರಾಜಕೀಯ ವಿಜ್ಞಾನಿ ಇಯಾನ್ ಬ್ರೆಮ್ಮರ್ ಅಭಿಪ್ರಾಯ ಪಟ್ಟಿದ್ದಾರೆ. ೨೦೧೯ ರ ಸರ‍್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ೩೦೩ ಲೋಕಸಭಾ ಸ್ಥಾನಗಳನ್ನು ಗೆದ್ದು, ಹಿಂದಿ ಹೃದಯ ರಾಜ್ಯಗಳಲ್ಲಿ ‘ಮೋದಿ ಅಲೆ ಸೃಷ್ಟಿಸಿತ್ತು. ೩೭೦ ಸ್ಥಾನಗಳನ್ನು ಗೆಲ್ಲಬೇಕಾದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ರ‍್ಜರಿ ಜಯಗಳಿಸಬೇಕಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top