ಸಂಸತ್ತಿನಲ್ಲಿ ಬಳ್ಳಾರಿಯ ಪರ ಧ್ವನಿ ಎತ್ತಲು ಈ ತುಕಾರಾಂ ಅವರನ್ನ ಗೆಲ್ಲಿಸಿ : ಸಚಿವ ಬಿ.ನಾಗೇಂದ್ರ

ಬಳ್ಳಾರಿ:  ತಾಲೂಕಿನ ಸಿಂಧುವಾಳ ಗ್ರಾಮದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಂದ ಕಾಂಗ್ರೆಸ್ ಪಕ್ಷದ‌ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ರೊಡ್ ಶೋ ನಡೆಸಿ ಬಹಿರಂಗ ಪ್ರಚಾರ ಮಾಡುವ ಮೂಲಕ ಮತ ಯಾಚನೆ ಮಾಡಿದರು.

ನಂತರ ಮಾತನಾಡಿ ಈ ಬಾರಿಯ ಲೋಕಸಭಾ  ಚುನಾವಣಾ ಅಭ್ಯರ್ಥಿ ಯನ್ನಾಗಿ ಸೋಲಿಲ್ಲದ ಸರದಾರ, ನಾಲ್ಕು ಬಾರಿ ಶಾಸಕರಾಗಿ ಹಲವಾರು ಹುದ್ದೆ ಅಲಂಕರಿಸಿರುವ ಯಾವುದೆ ಕಳಂಕವಿಲ್ಲದಂತಹ ಸಂಸತ್ತಿನಲ್ಲಿ ಬಳ್ಳಾರಿ ಜಿಲ್ಲೆ ಜನರ ಪರ ಧ್ವನಿಯಾಗುವ ಈ.ತುಕಾರಾಂ ಅವರನ್ನ ಹೆಚ್ಚಿನ ಬಹುಮತಗಳಿಂದ ಗೆಲ್ಲಿಸಬೇಕು ನನ್ನ ಚುನಾವಣೆಯಲ್ಲಿ ಮತದಾನ ಮಾಡಿದಂತೆ ಈ ಚುನಾವಣೆಯಲ್ಲೂ ಉತ್ಸಾಹದಿಂದ  ತುಕಾರಾಂ ಅವರಿಗೆ ಮತ ಚೆಲಾಯಿಸುವಂತೆ ಮನವಿ ಮಾಡಿದರು.ಇದೇ ವೇಳೆ ಬಿಜೆಪಿ ಪಕ್ಷದ ಮುಖಂಡರಾದ ರೆಡ್ಡಪ್ಪ, ಹೊಸಳ್ಳಿ ವಿರೇಶ್, ಸಂಗಾಲಿ ಚನ್ನಾ, ಹೊಸಳ್ಳಿ ಚಂದ್ರ, ಕೊಂಡಲು ಬಜ್ಜಯ್ಯ, ಕಸಪುರ ಪಂಪ ಸೇರಿದಂತೆ ಇನ್ನೂ ಅನೇಕ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಸಚಿವ ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಗಾದಿಲಿಂಗನಗೌಡ, ಭೀಮನಗೌಡ, ರಾಮಾಂಜಿನಿ, ಸಂಗಾಲಿ ಈರಣ್ಣ, ತಿಮ್ಮನಗೌಡ, ಮೂಲೆಮನೆ ಗಾದಿಲಿಂಗಪ್ಪ, ವೈ.ರಾಘವೇಂದ್ರ, ದೊಡ್ಡ ಗಾದಿಲಿಂಗಪ್ಪ, ಸಣ್ಣ ಗಾದಿಲಿಂಗಪ್ಪ, ಬಗರ್ ಹುಕುಂ ಕಮೀಟಿ ಅಧ್ಯಕ್ಷರಾದ ಹೆಚ್.ತಿಮ್ಮನಗೌಡ, ಅಣ್ಣಾ ನಾಗರಾಜ್, ಯರ್ರಗುಡಿ ಮುದಿಮಲ್ಲಯ್ಯ, ಗೋವರ್ಧನ ರೆಡ್ಡಿ, ವೈ.ಅರುಣ್ ಕುಮಾರ್, ವೈ.ರೇವಣಸಿದ್ಧಪ್ಪ, ಪಾಪಿರೆಡ್ಡಿ, ಉಳುರಿ ಸಿದ್ದನಗೌಡ, ಮೊಹಮದ್, ಕೋಳಿ ಪೊಂಪಣ್ಣ, ದೊಡ್ಡ ಪೋತಯ್ಯ, ವೈ.ಬಸವರಾಜ್, ಗುಂಡಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top