ನುಡಿದಂತೇ ನಡೆದಿದ್ದೇವೆ, ಕಾಂಗ್ರೆಸ್ಗೆ ಆಶೀರ್ವಾದ ನೀಡಿ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಮಂಗಳವಾರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಟಿ.ಬೂದಿಹಾಳು,ಗೋಡೆಹಾಳು ಮತ್ತು ಅಸುಂಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಮತ ಪ್ರಚಾರ ನಡೆಸಿದರು.

ಈ ವೇಳೆ ಸಚಿವ ನಾಗೇಂದ್ರ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತರ ಹಾಗೂ ಬಡವರ ಪರ ಇರುವ ಸರ್ಕಾರ. ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿದಂತೆ ಭಾಗ್ಯಗಳನ್ನ ನಾಡಿನ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ. ನೀವುಗಳು ತುಕಾರಾಂ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಕಳಿಸಿದರೆ, ಈ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಧ್ವನಿಯಾಗುತ್ತಾರೆ ಎಂದರು.

ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರೆಂಟಿಗಳನ್ನು ಮೆಚ್ಚಿಕೊಂಡಿರುವ ರಾಜ್ಯದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಲಿದೆ ಎಂದು ಹೇಳಿದ ನಾಗೇಂದ್ರ ಅವರು, ಈ ಬಾರಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರೆಂಟಿ ಯೋಜನೆಯ ಹಣ ದೊರೆಯಲಿದೆ ಅದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕಾರಾಂ ಅವರನ್ನ ಹೆಚ್ಚಿನ ಬಹುಮತದಿಂದ  ಗೆಲ್ಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಕಡೆವರೆಗೂ ನಿಮ್ಮ ಜೊತೆ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಟ್ಟಿಗೆ ಇರುವುದಾಗಿ ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು.

 

ಪ್ರಚಾರ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಪಕ್ಷದ ಮುಖಂಡರಾದ ಸಣ್ಣಬಸವರಾಜ್, ಮಹಾರುದ್ರಗೌಡ, ವೆಂಕಟೇಶ್ ಪ್ರಸಾದ್, ಎ.ಮಾನಯ್ಯ, ಹೆಚ್.ತಿಮ್ಮನಗೌಡ, ಅಸುಂಡಿ ಹೊನ್ನೂರಪ್ಪ, ಅಣ್ಣ ನಾಗರಾಜ್, ಪಿ. ಜಗನ್ನಾಥ್, ಮುದಿ ಮಲ್ಲಯ್ಯ, ಬೆಣಕಲ್ ಬಸವರಾಜ್, ನಾಗಭೂಷಣಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top