ಬೆಂಗಳೂರು: ಕ್ರಾಂತಿಕಾರಿ ಯೋಜನೆಯೊಂದಿಗೆ ಡಿಶ್ ಟಿವಿ ಭಾರತದಲ್ಲಿ ಮನೋರಂಜನಾ ಕ್ಷೇತ್ರವನ್ನು ಮರುವ್ಯಾಖ್ಯಾನಿಸುತ್ತಿದೆ. ಇದಕ್ಕಾಗಿ ಅತಿದೊಡ್ಡ ಒಟಿಟಿ ಪೂರೈಕೆದಾರರಾದ “ಡಿಶ್ ಟಿವಿ ಸ್ಮರ‍್ಟ್+” ಅನ್ನುಅನಾವರಣಗೊಳಿಸಲಾಗಿದೆ.
ಇದು ಕ್ರಾಂತಿಕಾರಿ ಕೊಡುಗೆಯಾಗಿದೆ. ಈ ನೂತನ ಸೇವೆಯಲ್ಲಿ ಯಾವುದೇ ಪರದೆಯಲ್ಲಿ, ಎಲ್ಲಿಯಾದರೂ ಟಿವಿ ಮತ್ತು ಒಟಿಟಿ ವಿಷಯಕ್ಕೆ ಗ್ರಾಹಕರಿಗೆ ಉಚಿತ ಪ್ರವೇಶ ನೀಡುವ ಮೂಲಕ ಉದ್ಯಮ ಒಂದು ಅದ್ಭುತ ಮೈಲಿಗಲ್ಲನ್ನು ಸಾಧಿಸಿದೆ. ಸೇವೆಗಳನ್ನುಅನಾವರಣಗೊಳಿಸಿದ ನಟಿ ಶ್ರದ್ಧಾದಾಸ್ ಮಾತನಾಡಿ, ಇದು ಸೌರ‍್ಯ, ಹೊಂದಿಕೊಳ್ಳುವಿಕೆ ಮತ್ತು ಸುಧಾರಿತ ಮನೋರಂಜನಾ ಆಯ್ಕೆಗಳನ್ನು ನೀಡುವುದರೊಂದಿಗೆ, ಬಳಕೆದಾರರು ತಮ್ಮ ವೀಕ್ಷಣೆಯ ಅನುಭವವನ್ನು ಆನಂದಿಸಲು ಅವಕಾಶ ಒದಗಿದೆ. ಹೊಸ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಡಿಶ್ ಟಿವಿ ಮತ್ತು ಡಿ೨ಎಚ್ ಮತ್ತು ಡಿಶ್ ಟಿವಿ ಸ್ಮರ‍್ಟ್ ಆಗಿ ಕರ‍್ಯನರ‍್ವಹಿಸಲಿದೆ ಎಂದರು.
ಡಿಟಿಎಚ್ ಆಪರೇಟರ್ ನಿಂದ ಪರ‍್ಣ-ಸೇವೆಯ ಮನೋರಂಜನಾ ಪೂರೈಕೆದಾರರಾಗಿ ರೂಪಾಂತರಗೊಳ್ಳುವ ಮೂಲಕ, ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು, ನಾವೀನ್ಯತೆ ಮತ್ತು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಮನೋರಂಜನೆ ಅನುಭವವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದರು.