ಬೆಂಗಳೂರು ಸರ್ಜಿಕಲ್‌ ಸೊಸೈಟಿಯಿಂದ ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ವಾಕಾಥಾನ್‌

ಹೊಸ ತಂತ್ರಜ್ಞಾನಗಳ ಅಳವಡಿಕೆಯ ಶಸ್ತ್ರಚಿಕಿತ್ಸೆಗಳಿಂದ ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ

ಬೆಂಗಳೂರಿನ 200 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಾಕಾಥಾನ್

ಬೆಂಗಳೂರು: ಹೊಸ ತಂತ್ರಜ್ಞಾನಗಳ ಅಳವಡಿಕೆಯ ಶಸ್ತ್ರಚಿಕಿತ್ಸೆಗಳಿಂದ ಬೆಂಗಳೂರು ವಿಶ್ವದ ಮೆಡಿಕಲ್‌ ಟೂರಿಸಂ ನಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನ ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಸರ್ಜಿಕಲ್‌ ಸೊಸೈಟಿ ಕಾರ್ಯಕ್ರಮಗಳು ಮತ್ತು ತರಬೇತಿಗಳನ್ನು ಹಮ್ಮಿಕೊಳ್ಳಲಿದೆ ಎಂದು ಬೆಂಗಳೂರು ಸರ್ಜಿಕಲ್‌ ಸೊಸೈಟಿ ಅಧ್ಯಕ್ಷರಾದ ಡಾ. ವೆಂಕಟೇಶ್‌ ತಿಳಿಸಿದರು. 

ರಾಜಶೇಖರ್ ಸಿ ಜಾಕಾ: ಬೆಂಗಳೂರು ಸರ್ಜಿಕಲ್ ಸೊಸಾಯಿಟಿಯ ಅಧ್ಯಕ್ಷರು (ಚುನಾಯಿತ) ಮತ್ತು ಕರ್ನಾಟಕ ರಾಜ್ಯ ಸರ್ಜನ್ಸ ಅಸೋಸಿಯೇಷನ್ ಖಜಾಂಚಿ  ರವರು ಮಾತನಾಡಿ, ಸರ್ಜಿಕಲ್ ಸೊಸೈಟಿ 50ನೇವರ್ಷ ಸಂಭ್ರಮಾಚರಣೆ ಅಚರಿಸುತ್ತಿದೆ. ವೈದ್ಯರ ಜೊತೆಯಲ್ಲಿ ಸರ್ಜಿಯ ಆಗುವ ರೋಗಿಯ ಆರೋಗ್ಯ ಮುಖ್ಯ. ನಡಿಗೆ ಮೂಲಕ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬಹುದು. ಪ್ರತಿದಿನ ಮೂರು ಕಿಲೋ ಮೀಟರ್ ವಾಕಿಂಗ್ ನಿಂದ ಕ್ಯಾನ್ಸರ್ ಮತ್ತು ಹೃದಯ ಸಂಭಂದಿಸಿ ಖಾಯಿಲೆಯಿಂದ ದೂರವಿರಬಹುದು. ಪ್ರತಿದಿನ ಆಪರೇಷನ್ ಮಾಡಿ ಸರ್ಜಿಕಲ್ ಡಾಕ್ಟರ್ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ , ನಡಿಗೆ ಮಾಡುವ ಮೂಲಕ ತಮ್ಮ ಆರೋಗ್ಯದ ಜೊತೆಯಲ್ಲಿ ಮಾನಸಿಕ ಸ್ಥಿತಿ ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ನಮ್ಮ ಸರ್ಜಿಕಲ್ ಸೊಸೈಟಿ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ಖ್ಯಾತ ಸರ್ಜಿಕಲ್ ಡಾಕ್ಟರ್ ಗಳು ಇದ್ದಾರೆ ಎಂದು ಹೇಳಿದರು.

 

ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ASICC(R) ಗೋಲ್ಡನ್ ಜುಬ್ಲಿ ಆಚರಣೆ ಮತ್ತು ಕರ್ನಾಟಕ ಸ್ಟೇಟ್ ಚಾಪ್ಟರ್ ಆಫ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ Surgeon’s Day (ಶಸ್ತ್ರಚಿಕಿತ್ಸರ ದಿನ) ಪ್ರಯುಕ್ತ ವಾಕ್ ಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

“ಶುಶ್ರತರವರು ವಿಶ್ವದ ಮೊದಲ ಆಪರೇಷನ್ ಮಾಡಿದ ಸರ್ಜಿಕಲ್ ವೈದ್ಯ. ಅದರಿಂದ ಸರ್ಜಿಕಲ್ ದಿನವನ್ನು ಅಚರಿಸಲಾಗುತ್ತಿದೆ. ಕ್ಯಾನ್ಸರ್ ಮತ್ತು ಹೃದಯ ಸಂಭಂದಿದ ಮತ್ತು ಹಲವಾರು ರೋಗಗಳ ನಿವಾರಣೆಗಾಗಿ ಶಸ್ತ್ರಚಿಕಿತ್ಯೆ ಮುಖ್ಯ. ಇಂದು ಮೆಡಿಕಲ್ ಟೂರಿಸಂನಲ್ಲಿ ಬೆಂಗಳೂರುನಗರ ವಿಶ್ವಮಟ್ಚದಲ್ಲಿ ಹೆಸರು ಪಡೆದಿದೆ. ಶಸ್ತ್ರಚಿಕಿತ್ಸೆಯಲ್ಲಿ ನಮ್ಮ ನಗರದ ವೈದ್ಯರುಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಹೆಚ್ಚಿನ ವೈದ್ಯಕೀಯ ಕಾಲೇಜುಗಳು ಇರುವುದರಿಂದ ಉತ್ತಮ ಸೇವೆ ಹಾಗೂ ತರಬೇತಿಯನ್ನು ನೀಡಲು ಸಾಧ್ಯವಾಗುತ್ತಿದೆ. ಶಸ್ತ್ರಚಿಕಿತ್ಸೆ ಕುರಿತು ಯುವ ವೈದ್ಯರುಗಳನ್ನು ಸಮರ್ಪಕವಾಗಿ ತಯಾರಿ ಮಾಡಿ ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಇನ್ನಷ್ಟು ತರಬೇತಿ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ವಿಶ್ವದ ಮೆಡಿಕಲ್‌ ಟೂರಿಸಂ ನಲ್ಲಿ ನಮ್ಮ ಸ್ಥಾನವನ್ನ ಇನ್ನಷ್ಟು ಉತ್ತಮಗೊಳಿಸಲಾಗುವುದು ಎಂದು ಹೇಳಿದರು”.

 

500 ಹೆಚ್ಚು ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಳು ನಡಿಗೆ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೆಂಟ್ ಮಾರ್ಥಾಸ್ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರು ದಾದಿಯರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಿಂದ ಫ್ರೀಡಂ ಪಾರ್ಕವರಗೆ 5ಕಿಲೋ ಮೀಟರ್ ವರಗೆ ವಾಕ್ ಥಾನ್ (ನಡಿಗೆ ಜಾಥ) ನಡೆಸಿದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top