ಮತದಾನ ಸಂವಿಧಾನಿಕ ಹಕ್ಕು, ಪ್ರತಿಯೊಬ್ಬರೂ ಚಲಾಯಿಸಿ: ನ್ಯಾ.ಪುಷ್ಪಾಂಜಲಿ ದೇವಿ

ಬಳ್ಳಾರಿಯಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಣೆ

ಬಳ್ಳಾರಿ : ಮತದಾನವು ಭಾರತ ಸಂವಿಧಾನ ನೀಡಿರುವ ಹಕ್ಕಾಗಿದ್ದು, ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ಹೇಳಿದರು.

          ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆಎಂಬ ಘೋಷವಾಕ್ಯದಡಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿ.ಡಿ.ಎ.ಎ ಫುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

          ಮತದಾನವು ನಮ್ಮ ನಾಗರಿಕ ಜವಾಬ್ದಾರಿಯಾಗಿದೆ. ಗಣರಾಜ್ಯದ ಭವಿಷ್ಯ ಯುವ ಮತದಾರರ ಕೈಯಲ್ಲಿದೆ. ಯುವಕರು ಹಕ್ಕು ಭಾದ್ಯತೆಗಳನ್ನು ಅಳವಡಿಸಿಕೊಂಡು, ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ಯೋಗ್ಯ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಿ ಮತ ಚಲಾಯಿಸಬೇಕು ಎಂದರು. 

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು, ಯಾರು ಕೂಡ ಮತದಾನದಿಂದ ವಿಮುಖರಾಗದೇ ಕಡ್ಡಾಯವಾಗಿ ಮತಚಲಾಯಿಸಬೇಕು ಎಂದರು.

 

          ಪ್ರತಿ ವರ್ಷದ ಥೀಮ್ ಅನ್ನು ಮತದಾರಿಗೆ ಅರ್ಪಿಸಲಾಗುತ್ತದೆ. ಎನ್‍ವಿಡಿ 2024ರ ಥೀಮ್ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆʼ ಎಂಬುದಾಗಿದೆ. 18 ವರ್ಷ ತುಂಬಿದ ಯುವಕ ಯುವತಿಯರು ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಮಾತನಾಡಿ, 2011ರ ಜನವರಿ 25 ರಂದು ಮೊದಲ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಹೆಚ್ಚು ಹೆಚ್ಚು ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಮತದಾನ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

          18 ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿ ತಮ್ಮ ಹೆಸರು ನೋಂದಾಯಿಸಲು ನಿರಾಸಕ್ತಿ ತೋರಬಾರದು. ದೇಶದ ಅಭಿವೃದ್ಧಿ ಚಿತ್ರಣದಲ್ಲಿ ಮತದಾನ ಅತ್ಯಮೂಲ್ಯವಾಗಿದೆ ಎಂದರು.

 

          ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

          ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ನವೀನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ತಹಶೀಲ್ದಾರ ಗುರುರಾಜ ಸೇರಿದಂತೆ ಚುನಾವಣಾ ತಹಶೀಲ್ದಾರರು, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

          ಯುವ ಮತದಾರರಾದ ವೈಷ್ಣವಿ, ಮೊಹಮ್ಮದ್ ಹಸೀದ್, ಲಾವಣ್ಯ.ಕೆ., ರಾಜಲಕ್ಷ್ಮೀ, ಆಕಾಶ್, ಗಾಯತ್ರಿ, ವರುಣ್ ಇವರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ:

          ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರೌಢಶಾಲಾ ಹಂತ:

          ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಅಂಜಲಿ ತೋರಣಗಲ್ ಸರಕಾರಿ ಪ್ರೌಢಶಾಲೆ(ಪ್ರಥಮ ಸ್ಥಾನ), ಹುಸೇನಮ್ಮ ತೋರಣಗಲ್ ಸರಕಾರಿ ಪ್ರೌಢಶಾಲೆ(ದ್ವಿತೀಯ ಸ್ಥಾನ), ಮರೂರು ಶ್ರಾವಣಿ ಕಪ್ಪಗಲ್ಲು ಸರಕಾರಿ ಪ್ರೌಢಶಾಲೆ(ತೃತೀಯ).

          ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾರ್ಥನಾ.ಯು.ಎಂ. ಆದರ್ಶ ವಿದ್ಯಾಲಯ(ಪ್ರಥಮ), ಪೂಜಾ ಆದರ್ಶ ವಿದ್ಯಾಲಯ (ದ್ವಿತೀಯ), ಸ್ವಾತಿ ಸಿಂಗ್ ವಾಡ್ರ್ಲಾ ಶಾಲೆ(ತೃತೀಯ).

          ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಕೆ.ಉಷಾ ಕೊಳಗಲ್ಲು ಸರಕಾರಿ ಪ್ರೌಢಶಾಲೆ(ಪ್ರಥಮ), ಸುಕನ್ಯ ಸಿರುಗುಪ್ಪ(ದ್ವಿತೀಯ), ಸನಿಯಾ ಆದರ್ಶ ವಿದ್ಯಾಲಯ(ತೃತೀಯ).

 

          ಕ್ವಿಜ್ ಸ್ಪರ್ಧೆಯಲ್ಲಿ ಸಂತೋಷ ಕೋರಿ, ಅಜ್ಮಿತ್ ಬೇಗಂ(ಪ್ರಥಮ). ಚೈತ್ರ.ಯು, ಜಯಲಕ್ಷ್ಮೀ.ಯು(ದ್ವಿತೀಯ). ಕೆ.ಮಲ್ಲಿಕಾರ್ಜುನ, ಕೆ.ಮುರಳಿಕೃಷ್ಣ(ತೃತೀಯ).

ಪದವಿ ಪೂರ್ವ ಕಾಲೇಜು ಹಂತ:

          ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಯು.ಲಕ್ಷ್ಮೀ(ಪ್ರಥಮ), ಬಿ.ಜ್ಯೋತಿ(ದ್ವಿತೀಯ), ನಸ್ರೀನ್.ಬಿ(ತೃತೀಯ).

          ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾಶ್ರೀ.ಎಸ್.ಗೌಡರ್(ಪ್ರಥಮ), ಎನ್.ಸೋನಿ (ದ್ವಿತೀಯ), ಜೆ.ನಂದಿನಿ(ತೃತೀಯ).

          ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಎಸ್.ಸ್ಪೂರ್ತಿ(ಪ್ರಥಮ), ಎಸ್.ಆರ್.ಕೀರ್ತನ(ದ್ವಿತೀಯ), ಮೇಘನಾ ಭಾಯಿ (ತೃತೀಯ).

          ಕ್ವಿಜ್ ಸ್ಪರ್ಧೆಯಲ್ಲಿ ಸಹನಾ ಬೇಗಂ, ಎನ್.ಹುಲಿಗೆಮ್ಮ (ಪ್ರಥಮ). ಎ.ನಂದೀಶ್ವರಿ, ಎಸ್.ಮಲ್ಲಮ್ಮ(ದ್ವಿತೀಯ). ಆಶೀರ್ವಾದ, ತಶ್ಕೀರಾ (ತೃತೀಯ).

ಪದವಿ ಕಾಲೇಜು ಹಂತ:

          ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎನ್.ಹುಲಿಗೆಮ್ಮ(ಪ್ರಥಮ), ಕವಿತಾ(ದ್ವಿತೀಯ), ಬಿ.ಸಿ.ಜಯಸುಧಾ(ತೃತೀಯ).

          ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಹೇಮಾವತಿ.ಆರ್(ಪ್ರಥಮ), ಮಹೇಶ್ವರಿ(ದ್ವಿತೀಯ), ಬಸವರಾಜ.ಎಸ್(ತೃತೀಯ).

          ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ರುದ್ರೇಶ(ಪ್ರಥಮ), ಯಶೋಧಾ(ದ್ವಿತೀಯ), ಕೃಷ್ಣತೇಜಾ(ತೃತೀಯ).

 

          ಕ್ವಿಜ್ ಸ್ಪರ್ಧೆಯಲ್ಲಿ ಮೇಘಾ, ಕವಿತಾ (ಪ್ರಥಮ). ತಿಪ್ಪೇಸ್ವಾಮಿ, ನಂದೀಶ(ದ್ವಿತೀಯ). ಬಸವರಾಜ, ಶಾಂತಿ(ತೃತೀಯ).

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top