ಕೆಲಸ ಮಾಡಿದ ನಮಗೆ ಮತ ನೀಡಿ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ:  ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದ ಕಳೆದ 9 ತಿಂಗಳಲ್ಲಿ ಸರ್ಕಾರ ಕೆಲಸ ಮಾಡಿದೆ, ಅದರ ಆಧಾರದಲ್ಲಿ ಇಂದು ಮತ ಕೇಳಲು ಬಂದಿದ್ದೇನೆ, ನೀವು ನಮ್ಮ ಅಭ್ಯರ್ಥಿಗೆ ಆಶೀರ್ವದಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಹುಸೇನ್ ನಗರದಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಾತಾಡಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರ ಮತ ಯಾಚಿಸಿದರು.

ಬಳ್ಳಾರಿ ನಗರಕ್ಕೆ ನೂರಾರು ಕೋಟಿ ರೂ. ಗಳ ಅನುದಾನ ತಂದಿದ್ದೇನೆ. ಮಸೀದಿ, ಮಂದಿರ, ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿರುವೆ ಎಂದರು.

ಬಳ್ಳಾರಿ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಿ ದೇವಸ್ಥಾನ ಹಿಂದೆಂದೂ ಕಾರಣದ ರೀತಿ ಅಭಿವೃದ್ಧಿ ಆಗಿದೆ, ದುರ್ಗಮ್ಮ ಸರ್ಕಲ್ ಅಭಿವೃದ್ಧಿ ಆಗಿದೆ, ಜಾಮಿಯಾ ಮಸೀದಿಗೆ 50 ಲಕ್ಷ ರೂ. ಅನುದಾನ ತಂದಿರುವೆ. ಇದು ರಾಜ್ಯದಲ್ಲೇ ಪ್ರಥಮ ಎಂದರು. 

ಮುಸ್ಲಿಂ ಬಡ ಯುವತಿಯರ ವಿವಾಹಕ್ಕೆ ಅನುಕೂಲ ಆಗಲಿ ಎಂದು ಐದು ಕೋಟಿ ರೂ. ಅನುದಾನದಲ್ಲಿ ಶಾದಿ ಮಹಲ್ ನಿರ್ಮಾಣ ಮಾಡಲಿದ್ದೇವೆ ಎಂದ ಅವರು, ಬಿಜೆಪಿಯವರಂತೆ ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ ಎಂದರು.

ಬಿಜೆಪಿಯವರು ಹಿಂದೂ ಮುಸ್ಲಿಂರ ನಡುವೆ ಗಲಾಟೆ ಇಟ್ಟು ರಾಜಕೀಯ ಮಾಡುತ್ತಾರೆ, ಆದರೆ ನಾವು ಬಳ್ಳಾರಿಯಲ್ಲಿ ಅಣ್ಣ ತಮ್ಮಂದಿರಂತೆ ಇದ್ದೇವೆ, ನಾವು ಹೀಗೆಯೇ ಪ್ರೀತಿ ವಿಶ್ವಾಸದಿಂದ ಇರಬೇಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು, ನಮ್ಮ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರಿಗೆ ಮತ ನೀಡಿ ಎಂದರು.

ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನೀವು ತುಕಾರಾಂ ಅವರನ್ನು ಗೆಲ್ಲಿಸಿ, ನಿಮ್ಮನ್ನು ನಂಬಿ ನಾನು ಚನಾವಣೆಯಲ್ಲಿ ಬಂದೆ, ನೀವು ನನ್ನನ್ನು ಗೆಲ್ಲಿಸಿದಿರಿ, ಅದೇ ರೀತಿ ಸಂಸತ್ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು; ಇದು ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿರುವ ಯುದ್ಧ, ಬಿಜೆಪಿಯವರು ಸುಳ್ಳು ಹೇಳುವವರು, ಈ ಸುಳ್ಳು ಹೇಳುವ ಬಿಡೆಪಿಯನ್ನು ಸೋಲಿಸಿ ಎಂದರು.

 

ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಗ್ಯಾರಂಟಿ ಸ್ಕೀಂ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಾನಂದಪ್ಪ, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಹುಸೇನ್ ಪೀರಾಂ, ಮುಖಂಡ ಕಣೇಕಲ್ ಮಾಬುಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಅಭಿಲಾಶ್, ಪಾಲಿಕೆ ಸದಸ್ಯರಾದ ವಿವೇಕ್ ಪೇರಂ, ಮುಲ್ಲಂಗಿ ನಂದೀಶ್, ರಾಮಾಂಜನೇಯ ಮೊದಲಾದವರು ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top