ಮತದಾನ ಗೌಪ್ಯತೆ ಕಾಪಾಡದ ನಿಯಮ ಉಲ್ಲಂಘನೆ: ದಾವಣಗೆರೆ ಬಿಜೆಪಿ ಸಂಸದನ ವಿರುದ್ಧ ಎಫ್‌ಐಆರ್ ದಾಖಲು!

ದಾವಣಗೆರೆ: ಗೌಪ್ಯ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮರ‍್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ದಾವಣಗೆರೆ ಬಿಜೆಪಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ೧೦೬ನೇ ವೃತ್ತದ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪಿಎಸ್- ೨೩೬ ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಕೊಠಡಿ ಸಂಖ್ಯೆ- ೧ರಲ್ಲಿ ಬೆಳಗ್ಗೆ ಸುಮಾರು ೯.೩೦ರ ಸುಮಾರಿಗೆ ಜಿಎಂ ಸಿದ್ದೇಶ್ವರ್ ಅವರು ಮತ ಚಲಾಯಿಸಿದ್ದರು.

ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ರ‍್ಥಿಯಾಗಿರುವ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರೊಂದಿಗೆ ಹಾಲಿ ಬಿಜೆಪಿ ಸಂಸದರು ಮತದಾನ ಮಾಡಿದರು. ಮೊದಲು ಮತದಾನ ಮಾಡಿದ ಸಿದ್ದೇಶ್ವರ ಅವರು ಗಾಯತ್ರಿಯವರ ಮತದಾನ ಆಗುವವರೆಗೆ ಅಲ್ಲೇ (ಮತಯಂತ್ರದ ಪಕ್ಕದಲ್ಲೇ) ಉಳಿದಿದ್ದರು. ಗಾಯಿತ್ರಿ ಅವರು ಮತದಾನ ಮಾಡಲು ಹೋದಾಗ ಸಿದ್ದೇಶ್ವರ್ ಅವರು ಬ್ಯಾಲಟ್ ಮಿಷಿನ್‌ನ್ನು ಇಣುಕಿ ನೋಡಿದ್ದಾರೆ. ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದಾವಣಗೆರೆ ಉತ್ತರ ಸಹಾಯಕ ಚುನಾವಣಾಧಿಕಾರಿ ಇಸ್ಮಾಯಿಲ್ ಅವರು ದಾವಣಗೆರೆ ಸಂಸದೀಯ ಕ್ಷೇತ್ರದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರಿಗೆ ವರದಿ ಸಲ್ಲಿಸಿದ್ದಾರೆ.

ಈ ವಿಡಿಯೋ ತುಣುಕನ್ನು ಗಮನಿಸಿದ ಚುನಾವಣಾಧಿಕಾರಿಗಳು, ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

 

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಸಹಾಯಕ ಚುನಾವಣಾಧಿಕಾರಿಗಳು, ಸಿದ್ದೇಶ್ವರ ಅವರ ವೀಡಿಯೋವನ್ನು ಬೆಳಗ್ಗೆ ೧೦.೪೮ ಗಂಟೆ ಸುಮಾರಿಗೆ ನನ್ನ ಮೊಬೈಲ್‌ಗೆ ವೀಡಿಯೋ ಬಂದಿದ್ದು, ನಾನು ಅದನ್ನು ನೋಡಿರುತ್ತೇನೆ. ದಾವಣಗೆರೆಯ ಸಂಸದರಾದ ಜಿ.ಎಂ ಸಿದ್ದೇಶ್ವರ್ ತಮ್ಮ ಹೆಂಡತಿಯ ಮತದಾನ ಮಾಡುವ ಪ್ರಕ್ರಿಯೆಯನ್ನು ನೋಡಿರುವ ಕಾರಣ ಮತದಾನ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿದ್ದಾರೆ. ಗೌಪ್ಯತೆಯ ಬಗ್ಗೆ ಈಗಾಗಾಲೇ ಚುನಾವಣಾ ಆಯೋಗ ಕೆಲವಾರು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದರೂ, ಸಿದ್ದೇಶ್ವರ ಅವರು ಆದೇಶಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top