31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ

ವಿಜಯನಗರ :ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರುವ ಮೂಲಕ ವಿಜಯನಗರ ಗತವೈಭವ ಪುನಃಸ್ಥಾಪನೆಯಾದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು. ನಗರದ ಜಿಲ್ಲಾಕ್ರೀಡಾಂಗಣದಲ್ಲಿ óಶನಿವಾರ ಸಂಜೆ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಜಯನಗರ ಜಿಲ್ಲೆ ಉದ್ಘಾಟನೆ ಮತ್ತು ವಿಜಯನಗರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯನಗರ ಜಿಲ್ಲೆಯು ಅತ್ಯಂತ ಶ್ರೀಮಂತ ಜಿಲ್ಲೆ;ಈ ಜಿಲ್ಲೆಗಿರುವ ಪರಂಪರೆ ರಾಜ್ಯದ ಇತರೇ ಜಿಲ್ಲೆಗಳಿಗಿಲ್ಲ. ಹಂಪಿಯ ಪ್ರತಿ ಶಿಲೆ ಒಂದು ಕಥೆಯನ್ನು ಹೇಳುತ್ತಿವೆ.ಪ್ರತಿ ಕಲ್ಲು ಸಂಸ್ಕøತಿ ಸಾರುತ್ತಿವೆ, ಸಂಗೀತ ಮೂಡಿಸುತ್ತಿವೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ನಮ್ಮ ಸರಕಾರ ಜಿಲ್ಲೆ ಘೋಷಣೆ ಮಾಡಿ ಸುಮ್ಮನೆ ಕುಳಿತುಕೊಳ್ಳದೇ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಹಿಂದೆ  ಜಿಲ್ಲೆಯ ಜನರು ಸುಖ ಶಾಂತಿ,ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರೋ ಅದೇ ರೀತಿ ಮುಂದಿನ ದಿನಗಳಲ್ಲಿ ಜನರ ಸರ್ವತೋಮುಖ ಬೆಳವಣಿಗೆಯಾಗಲಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ರಾಜ್ಯದ ಜನರೆಲ್ಲರೂ ಸುಖ-ಶಾಂತಿ ನೆಮ್ಮದಿಯಿಂದ ಮತ್ತು ಸ್ವಾಭಿಮಾನದಿಂದ ಬದುಕು ಸಾಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ನಮ್ಮ ಸರಕಾರ ಕೈಗೊಳ್ಳಲಿದೆ ಎಂದು ಹೇಳಿದರು.


ವಿಜಯನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಮತ್ತ ರಾಜ್ಯ ಸರ್ಕಾರದಿಂದ ರೂ.640 ಕೋಟಿ ಅನುದಾನದಲ್ಲಿ ವಿಶೇಷ ಯೋಜನೆ ರೂಪಿಲಾಗುತ್ತಿದ್ದು, ಈ ಮೂಲಕ ಐತಿಹಾಸಿ ಸ್ಥಳ ಹಂಪಿಯ ಸಮಗ್ರ ಅಭಿವೃದ್ಧಿ ಆಗಲಿದೆ. ಈ ಭಾಗದಲ್ಲಿ ಹೆಲಿ ಟೂರಿಸಂಗೆ ಒತ್ತು ನೀಡಲು ಸಹ ಉದ್ದೇಶಿಸಲಾಗಿದೆ. ರಾಜ್ಯದಲ್ಲಿರುವ ಪ್ರವಾಸಿಸ್ಥಳಗಳ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐತಿಹಾಸಿಕ ಹಂಪಿಯ ಸಮಗ್ರ ಅಭಿವೃದ್ಧಿಗಾಗಿಯೇ ಪ್ರವಾಸೋದ್ಯಮ ಖಾತೆಯನ್ನು ಸಚಿವ ಆನಂದಸಿಂಗ್ ಅವರಿಗೆ ನೀಡಲಾಗಿದೆ ಎಂದರು. ಮಾದರಿ ಜಿಲ್ಲಾಡಳಿತ ಭವನ ನಿರ್ಮಣ ಮಾಡುವ ನಿಟ್ಟಿನಲ್ಲಿ 80 ಎಕರೆ ಜಾಗ ಒದಗಿಸಲಾಗಿದೆ. ಈ ಕಾರ್ಯಕ್ಕೆ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಎಲ್ಲಾ ಇಲಾಖೆಗಳು ಕಾರ್ಯರೂಪಕ್ಕೆ ಬರಲಿವೆ. ಸರ್ಕಾರದಿಂದ ಎಲ್ಲಾ ರೀತಿಯ ಹಣಕಾಸಿನ ನೇರವು ನೀಡಲಾಗುವುದು.  ಜಿಲ್ಲೆಯ ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ.ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಜಿಲ್ಲೆ ಅಭಿವೃದ್ಧಿಯಾಗಲಿದೆ.ಆನಂದ್ ಸಿಂಗ್ ಅವರು ದೊಡ್ಡ ಹಠಮಾರಿ, ಅವರ ಹಠ ಜನರಿಗಾಗಿ;ಅವರ ಸ್ವಾರ್ಥಕ್ಕಾಗಿ ಅಲ್ಲ ಎಂದು ಜಿಲ್ಲೆಯ ಹೋರಾಟಕ್ಕೆ ಶ್ರಮಿಸಿದ ಆನಂದ್ ಸಿಂಗ್ ಅವರ ಶ್ರಮವನ್ನು ನೆನಪು ಮಾಡಿಕೊಂಡರು.


ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 250 ಬೆಡ್ ಸಾಮಾಥ್ರ್ಯದ ಹೊಸ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಇದರಿಂದ ಜಿಲ್ಲೆಯ ಆರು ತಾಲೂಕುಗಳ ಜನತೆಗೆ ಅನುಕೂಲವಾಗಲಿದೆ. ಜಿಲ್ಲೆಯ ಜನತೆಗೆ ಹಲವು ರೀತಿಯಲ್ಲಿ ನೆರವಾಗಲಿದೆ ಎಂದರು. ವಿಜಯನಗರದ ಹೋರಾಟದಕಿಚ್ಚು, ಕಣಕಣದಲ್ಲಿರುವ ಭಕ್ತಿಯ ಭಾವವೊಂದಿರುವ ಪುಣ್ಯಭೂಮಿಯಾಗಿದೆ. ಆರು ತಾಲೂಕುಗಳ ಕಟ್ಟಕಡೆಯ ಕುಟುಂಬದ ನೆಮ್ಮದಿಯ ಬದುಕಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು.ಸಮಗ್ರ ಅಭಿವೃದ್ಧಿಗೆ ಶ್ರಮವಹಿಸುವ ಸಂಕಲ್ಪ ಹೊಂದಿದ್ದೇನೆ ಎಂದರು ನಿಕಟಪೂರ್ವ ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಘೋಷಣೆಯ ಕಾರಣಿಕರ್ತರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ತುಂಗಾಭದ್ರ ಜಲಾಶಯದ ನಾಡು, ಸಿರಿವಂತಿಗೆ ಹೊಂದಿರುವ ಬೀಡು,ದೇವಾಲಯಗಳ ಒಡಲು, ನಾಡಿಗೆ ಅನ್ನ ನೀಡುವ ಭೂಮಿ, ಇತಿಹಾಸ ದಲ್ಲಿ ತನ್ನದೇ ಆದ ವೈಭವ ಸಾರಿದ ಸ್ಥಳ ವಿಜಯನಗರ ಎಂದರು. ತುಂಗಾಭದ್ರ ನಾಡಿನಲ್ಲಿ ಸಂಭ್ರಮದ ಗತವೈಭವ ಮರುಕಳಿಸಿದೆ. ಆನಂದ್ ಸಿಂಗ್ ಅವರು ಐತಿಹಾಸಿ ಕಾರ್ಯ ಮಾಡಿದ್ದಾರೆ.ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಮುಂದಿನ ದಿನಗಳಲ್ಲಿ ಆರು ತಾಲೂಕುಗಳ ಸಂಪೂರ್ಣ ಬೆಳವಣಿಗೆಗೆ ಸರ್ಕಾರ ಪಣತೊಟ್ಟಿದೆ ಎಂದರು. ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಲಾಗುವುದು..ಆನಂದ್ ಸಿಂಗ್ ಅವರು ತಮ್ಮ ರಾಜಿಕೀಯ ಜೀವನ ಪಣಕ್ಕಿಟ್ಟು ಜಿಲ್ಲೆಯ ರಚನೆಗೆ ಶ್ರಮಿಸಿದ್ದಾರೆ. ಅವರ ಹೊರಾಟದ ಶ್ರಮ ಇಂದು ಫಲ ನೀಡಿದೆ ಎಂದರು.


ಇತಿಹಾಸದ ಪುಟಗಳಲ್ಲಿ ಪರಂಪರೆ ಮೆರೆದ ನಾಡಿನ ವೈಭವವನ್ನು ಪುನರ್ ಸ್ಥಾಪಿಸುವಲ್ಲಿ ಆನಂದ್ ಸಿಂಗ್ ಅವರ ಕಾರ್ಯ ಮಹತ್ವದ್ದು ಎಂದರು.
ಸಾರಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿ ಸರ್ಕಾರಿ ಸೇವೆವಾಗಿ ಸಾರ್ವಜನಿಕರು ಪರದಾಡುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಜಿಲ್ಲೆಯ ವಿಭಜನೆ ಮಾಡಲಾಗಿದೆ. ದೇಹ ಎರಡಾದರೂ ಆತ್ಮ ಒಂದೇ ಎನ್ನುವಂತೆ ಎರಡು ಜಿಲ್ಲೆಯ ಜನರು ಸದಾ ಕಾಲ ಅಣ್ಣ ತಮ್ಮಂದಿರಂತೆ ಬಾಳೋಣ. ಜನರ ಸೇವೆಗಾಗಿ, ಜನರ ಒಳಿತಾಗಾಗಿ ಸರ್ಕಾರ ಶ್ರಮಿಸಲಿದೆ ಎಂದರು. ವಿಜಯನಗರದ ಹಿಂದಿನ ಇತಿಹಾಸ, ವೈಭವ ಮತ್ತೆ ಮರಕಳಿಸಲಿ. 35 ವರ್ಷಗಳ ನಿರಂತರ ಹೋರಾಟ ಫಲವಾಗಿ ಇಂದು ಜಿಲ್ಲೆಯ ಉದಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ ಬಳ್ಳಾರಿ ಜಿಲ್ಲೆಯ ಅಭಿವೃದ್ದಿಯ ಕಾರ್ಯವು ಕೂಡ ನೆರವೇರಲಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಎಲ್ಲಾ ರೀತಿಯಲ್ಲಿ ಜಿಲ್ಲೆಯ ಅಭಿವೃದ್ದಿಯಾಗಲಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಅವರು ಮಾತನಾಡಿ, ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಎರಡೂ ಜಿಲ್ಲೆಗಳ ಜನರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ರಚನೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಭಿವೃಧ್ಧಿಯ ಪರ್ವ ಶುರುವಾಗಲಿದೆ. ಜಿಲ್ಲೆ ಸಂಪೂರ್ಣ ಬೆಳವಣಿಗೆ ಸರ್ಕಾರ ತನ್ನದೇ ಆದ ನೆರವನ್ನು ನೀಡುತ್ತಿದೆ ಎಂದರು. 13 ನೇ ಶತಮಾನದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯ ಹಾಕಿದ್ದರು. ಅಲ್ಲಿಂದ ವಿಜಯನಗರವು ಇತಿಹಾಸ ಪುಟದಲ್ಲಿ ತನ್ನದೇ ಆದ ಸ್ಥಾನ ಪಡೆದು ಇಡೀ ದೇಶವೇ ತಿರುಗಿ ನೋಡುವಂತೆ ಆಳ್ವಿಕೆ ಮಾಡಲಾಗಿತ್ತು. ಹೊಸ ಜಿಲ್ಲೆಯ ರಚನೆಯ ಮೂಲನ ವಿಜಯನಗರದ ಗತವೈಭವ ಮರುಕಳಿಸಲಿದೆ ಎಂದರು.


ವಿಜಯನಗರ ಆರಂಭದಿಂದ ಜಿಲ್ಲೆಯಾಗುವವರೆಗೆ ನಡೆಸಿದ ಹೋರಾಟವನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು,ಸಿ.ಸಿ.ಪಾಟೀಲ್,ಡಾ.ಅಶ್ವತ್ ನಾರಾಯಣ, ವಿ.ಸುನೀಲಕುಮಾರ, ಎನ್.ಮುನಿರತ್ನ, ಭೈರತಿ ಬಸವರಾಜ, ಗೋಪಾಲಕೃಷ್ಣ, ಸಂಸದರಾದ  ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ಧೇಶ್ವರ, ಕರಡಿ ಸಂಗಣ್ಣ,ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್,ಎನ್.ವೈ.ಗೋಪಾಲಯ್ಯ,ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ನರಸಿಂಹ ನಾಯಕ(ರಾಜುಗೌಡ), ಎಂ.ಎಸ್.ಸೋಮಲಿಂಗಪ್ಪ,ಪರಣ್ಣ ಮನವಳ್ಳಿ, ಶಶೀಲ್ ನಮೋಶಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಎಂ.ಅಪ್ಪಣ್ಣ, ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್‍ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ ನೋವೆಲ್,ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ  ಪಾಂಡೆ, ನಿರ್ದೇಶಕಿ ಸಿಂಧೂ ಬಿ.ರೂಪೇಶ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top