ರಾಯಚೂರು : ಕೊಪ್ಪಳ ಸ್ಥಳೀಯ ವಿಧಾನ ಪರಿಷತ್ತು ಚುಣಾವಣೆ ನೆಡೆದ ಹಿನ್ನೆಲೆ ಇಂದು ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶರಣಗೌಡ ಪಾಟೀಲ ಬಯ್ಯಾಪೂರ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿಶ್ವನಾಥ ಬನಹಟ್ಟಿ ಸ್ಪರ್ಧೆ ಮಾಡಿದ್ದರು ಆದರೆ ಬೆಳಿಗ್ಗೆಯಿಂದ ಮತ ಏಣೆಕೆ ಪ್ರಾರಂಭದ ಹಂತದಲ್ಲಿ ಶರಣಗೌಡ ಬಯ್ಯಾಪೂರ ಮುನ್ನಡೆ ಸಾಧಿಸಿ ಕೊನೆಯ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ವಿರುದ್ಧ 423 ಮತಗಳಿಂದ ಜಯಶಾಲಿಯಾದರು.

ಜಯಶಾಲಿಯಾದ ಹಿನ್ನೆಲೆ ಕುಷ್ಟಗಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಬಣ್ಣವನ್ನು ಹಾಕಿಕೊಳ್ಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
