ಕನ್ನಡನಾಡು ವಾರ್ತೆ, : ವಾಲ್ಮೀಕಿ ಮಹರ್ಷಿಗಳು ಕೊಟ್ಟಂತಹ ರಾಮಾಯಣ ಎಲ್ಲರಿಗೂ ಆದರ್ಶವಾಗಿದೆ, ಇಂಥಹ ವಾಲ್ಮೀಕಿ ಮಹರ್ಷಿಗಳ ಸಮುದಾಯಕ್ಕೆ ಸೇರಿದ ಹೆಮ್ಮೆ ನನಗಿದೆ ಎಂದು ಕುರೇಕುಪ್ಪ ಘಟಕದ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರಾದ ಎನ್ ಸೋಮಪ್ಪ ಅವರು ಮಾತನಾಡಿದರು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕುರೇಕುಪ್ಪ ಘಟಕದ ಅಧ್ಯಕ್ಷ ಶಂಕರ್ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣದ ಆದರ್ಶಗಳು ನಮ್ಮ ದೇಶದ ಪ್ರತಿಯೊಂದು ಮನೆಯ ದಿನನಿತ್ಯದ ಸಹಜ ಜೀವನಕ್ಕೆ ಒಗ್ಗಿಕೊಂಡಿವೆ ಎಂದು ತಿಳಿಸಿದರು.

ವಿಜೃಂಭಣೆಯಿಂದ ನಡೆದ ಮೆರವಣಗೆಯು ಊರಿನ ವಾಲ್ಮೀಕಿ ಮಹರ್ಷಿಗಳ ದೇವಸ್ಥಾನದಿಂದ ವಾಲ್ಮೀಕಿ ಸಮುದಾಯ ಭವನದವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಸಮುದಾಯ ಮುಖಂಡರಾದ ಎನ್ ಅಂಬಣ್ಣ, ಏನ್ ನಾಗಲಿಂಗಪ್ಪ, ಬಿ. ಹೇಮಣ್ಣ, ತಿಪ್ಪೇಸ್ವಾಮಿ ಡಿ, ಮಂಜುನಾಥ ಡಿ, ಗೌರವಧ್ಯಕ್ಷರಾದ ಎನ್, ಮಲ್ಲಿಕಾರ್ಜುನ, ಈರಪ್ಪ ಹೊನ್ನೂರ್ ಸ್ವಾಮಿ ರುದ್ರ , ಚಿದಾನಂದ, ಚಿದಾನಂದಪ್ಪ, ಬಸವರಾಜ ,ಸುರೇಂದ್ರ ಮತ್ತು ಸಮಾಜದ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
