ವಚನ ಸಾಹಿತ್ಯ ಜಾತ್ಯಾತೀತವಾದುದು-ಬಿ.ವೆಂಕಟೇಶ್ ಪ್ರಸಾದ

ಬಳ್ಳಾರಿ: ಸಮಾಜದಲ್ಲಿ ಕೋಮು ಸೌಹಾರ್ದತೆಯ ಕ್ರಾಂತಿ ಕಿಡಿ ಹಚ್ಚಿದ 12ನೇ ಶತಮಾನದ ಶಿವಶರಣರು ಹುಟ್ಟು ಹಾಕಿರುವ ವಚನ ಸಾಹಿತ್ಯ ಅಂದು, ಇಂದು ಮತ್ತು ಮುಂದೆಂದಿಗೂ ಜಾತ್ಯಾತೀತ, ಧರ್ಮಾತೀತ ಮತ್ತು ಲಿಂಗಾತೀತವಾದುದಾಗಿದೆ ಎಂದು ಯುವಜನ ಸಬಲೀಕರಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ ಅವರ ಸಹೋದರ, ಸಮಾಜ ಸೇವಕ ವೆಂಕಟೇಶ್ ಪ್ರಸಾದ್ ಅವರು ಹೇಳಿದರು. 

ನಿನ್ನೆ ಇಲ್ಲಿನ ರಾಘವ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಟಿಎಚ್‍ಎಂ ಶಿವರುದ್ರ ಶಾಸ್ತ್ರಿ ಹಾಗೂ ಟಿಎಚ್‍ಎಂ.ವೀರಮ್ಮ ದತ್ತಿ, ಟಿಎಚ್‍ಎಂ ಸದಾಶಿವಯ್ಯ ಹಾಗೂ ಟಿಎಚ್‍ಎಂ ಸರ್ವಮಂಗಳಾ ದತ್ತಿ, ಟಿಎಚ್‍ಎಂ ಶಿವಯ್ಯ ಹಾಗೂ ಟಿಎಚ್‍ಎಂ ಶಿವಗಂಗಮ್ಮ ದತ್ತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ ನಾಟಕ ಪ್ರಹಸನ ಉದ್ಘಾಟಿಸಿ ಮಾತನಾಡಿದ ಅವರು, ಕಸಾಪ ಮತ್ತು ಕಇಅ ಉಭಯ ಸಂಘಟನೆಗಳು ಜನರ ನಾಡಿ ಮಿಡಿತ ಹೊಂದಿವೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯ ಸುವರ್ಣ ಯುಗ ಕಂಡಿತ್ತು. ಅಂದಿನಿಂದ ಇಂದಿನವರೆಗೂ ವಚನಸಾಹಿತ್ಯದ ದೀವಿಗೆ ಮನುಷ್ಯರ ಬಾಳಿನಲ್ಲಿ ಬೆಳಗುತ್ತಿದೆ ಎಂದರು.

 

ಶಿವಶರಣರು ನುಡಿದಂತೆ ನಡೆದವರು. ಅವರು ನುಡಿದದ್ದೇ ವಚನವಾಯಿತು. ವಚನವೇ ನುಡಿಯಾಯಿತ್ತು. ಜಗತ್ತಿಗೆ ಕಾಯಕದ ಮಹತ್ವ ಸಾರಿದ ಶರಣರು ಕಾಯಕವೇ ಕೈಲಾಸ ಎನ್ನುವ ವಚನವಾಕ್ಯ ವೇದದ ಸಮಾನವಾಗಿದೆ. ಬಸವಣ್ಣವನರ ವಿಚಾರಗಳನ್ನು ಅಳವಡಿಸಿಕೊಂಡರೆ ಎಲ್ಲರ ಬದುಕು ಸಾರ್ಥಕವಾಗುತ್ತದೆ ಎಂದರು. 

ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷರು, ಇತಿಹಾಸ ಸಂಶೋಧಕರಾದ ಟಿಎಚ್‍ಎಂ ಬಸವರಾಜ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಬಸವಣ್ಣನವರ ವಚನಗಳನ್ನು ನಮ್ಮ ಕುಟುಂಬದ ಹಿರಿಯರು ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡುವ ಮೂಲಕ ಜಗತ್ತಿನ ಜನರಿಗೆ ವಚನ ಸಾಹಿತ್ಯದ ಅಮೂಲ್ಯ ವಿಚಾರಗಳು ತಿಳಿದುಕೊಳ್ಳಲು ಸಹಕಾರವಾಗಿದೆ ಎಂದರು. ದತ್ತಿ ಕಾರ್ಯಕ್ರಮದ ಮೂಲಕ ಬಸವಣ್ಣನವರ ನಾಟಕ ಪ್ರದರ್ಶನ ಏರ್ಪಾಡು ಮಾಡಿದ್ದೇವೆ. ಬಸವಣ್ಣನವರು ಎಂದೆಂದಿಗೂ ಪ್ರಸ್ತುತವಾಗಿದ್ದಾರೆ ಎಂದ ಅವರು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಮೂಢ ನಂಬಿಕೆಗಳಿಲ್ಲ. ಬಸವಣ್ಣನವರ ತತ್ವದಲ್ಲಿ ಆಡಳಿತ ನಡೆಸುತ್ತಿದ್ದಾರೆ. ವಚನಗಳಲ್ಲಿ ನಂಬಿಕೆ ಇರುವುದರಿಂದ 136 ಸ್ಥಾನಗಳನ್ನು ಪಡೆದು ವಿರೋಧ ಪಕ್ಷವನ್ನು ಮಣಿಸಿದ್ದಾರೆ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ್ ಅವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ, ದತ್ತಿ ದಾನಿಗಳಾದ ಟಿಎಚ್‍ಎಂ ಚನ್ನವೀರಸ್ವಾಮಿ, ಇತಿಹಾಸ ಸಂಶೋಧಕರಾದ ಟಿಎಚ್‍ಎಂ ಬಸವರಾಜ,  ಸಮಾಜ ಸೇವಕರಾದ ಸುರೇಶ್ ಕುಮಾರ್, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಕೆವಿ ರವಿಶಂಕರ್, ಧುರೀಣರಾದ ಮೃತ್ಯುಂಜಯ ಹಿರೇಮಠ, ಡಾ.ಸುಶೀಲಾ ಹಿರೇಮಠ, ಅರುಣ ಸ್ವಾಮಿ, ಡಾ.ವಿಜಯ ದಂಡಾವತಿಮಠ, ಟಿಎಚ್‍ಎಂ ಮೃತ್ಯುಂಜಯ, ಟಿಎಚ್‍ಎಂ ರಾಜಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ವಿಜಯಕುಮಾರ್ ಇನ್ನಿತರರು ಇದ್ದರು.

 

ಸುಶೀಲಾ ಹಿರೇಮಠ ಪ್ರಾರ್ಥಿಸಿದರು. ಜಡೇಶ ಎಮ್ಮಿಗನೂರು ನಾಡಗೀತೆ ಹಾಡಿದರು. ಕುಮಾರಿ ಸರಯೂ ರಾವ್ ಮತ್ತು ತಂಡದವರಿಂದ ಪ್ರಾರ್ಥನಾ ನೃತ್ಯ ಜರುಗಿತು. ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೂ ಸನ್ಮಾನಿಸಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಂತರ ಬಸವಣ್ಣನವರ ನಾಟಕ ಪ್ರದರ್ಶನ ನಡೆಯಿತು. 

Facebook
Twitter
LinkedIn
WhatsApp
Email

Leave a Comment

Your email address will not be published. Required fields are marked *

Translate »
Scroll to Top