ಹುಲಿಗಿ ಗ್ರಾಮದಲ್ಲಿ ಬೃಹತ್ ಲಸಿಕಾ ಮೇಳ

ಕೊಪ್ಪಳ,: ತಾಲೂಕಿನ ಹುಲಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಬೃಹತ್ ಲಸಿಕಾ ಮೇಳ ನಡೆಸಲಾಯಿತು.ಗ್ರಾಮದ ಜನರಿಗೆ ಲಸಿಕೆ ಹಾಕಿಸಿ ಕೊಳ್ಳಿ ಯಾವುದೇ ವಂದತಿಗೆ ಹಾಗೂ ತಪ್ಪು ಕಲ್ಪನೆಗಳು ತಿಳಿದುಕೊಳ್ಳದೆ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿ ಕೊಳ್ಳಿ ಎಂದು ಆರೋಗ್ಯ ಅಧಿಕಾರಿ ಡಾ.ಶಪೀ ಹಾಗೂ ಗ್ರಾಪಂ ಕಾರ್ಯದರ್ಶಿನಾಗರಾಜ ಹಲಿಗೇರಿ ಹೇಳಿದರು.

ನಂತರ ಮನೆ-ಮನೆಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿಸಿ ಕೊಳ್ಳದ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಿ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಒಪ್ಪದೆ ಇದ್ದ ಕುಟುಂಬಗಳಿಗೆ ಮನವೊಲಿಸಿ ಲಸಿಕೆ ಹಾಕಿಸಲಾಯಿತು. ಇಲ್ಲಿಯವರೆಗಿನ ವರದಿ 1ನೇ ಡೊಸ್-48, 2ನೇ ಡೊಸ್ -65 ಒಟ್ಟು 113 ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ತಿಕ್, ರೇಖಾ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಗಳು ಸೇರಿ ಲಸಿಕೆ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳ್ಳಿಸಿದರು.

Leave a Comment

Your email address will not be published. Required fields are marked *

Translate »
Scroll to Top