ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ

ಕೊಪ್ಪಳ,: ಉರ್ದು ಭಾಷೆಯು ಕೇವಲ ಮುಸಲ್ಮಾನರ ಭಾಷೆಯಾಗದೆ ಬಹಳಷ್ಟು ಹಿಂದು ಹಾಗೂ ಸಿಖ್ ಬಾಂಧವರು ಈ ಭಾಷೆಯಲ್ಲಿ ಸಾಕಷ್ಟು ಕವನ, ಶಾಯರಿ, ಕಥೆ ಹಾಗೂ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಜಗತ್ ಪ್ರಸಿದ್ದಿ ಪಡೆದಿವೆ. ಹಾಗೇ ಉರ್ದು ಭಾಷೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಉರ್ದು ಕನ್ನಡಿಗರ 4ನೇ ಸಾಂಸ್ಕತಿಕ ಸಮ್ಮೇಳನದ ಸರ್ವಾಧ್ಯಕ್ಷ ಗಂಗಾವತಿಯ ಕಿಷ್ಕಿಂದ ಟಿವಿ ಖಾಸಗಿ ವಾಹಿನಿಯ ಸಂಪಾದಕ ಹಾಗೂ ಹೋರಾಟಗಾರ ಸೈಯದ್ ಅಲಿ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇಧಿಕೆ ಹಾಗೂ ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ ವತಿಯಿಂದ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಉರ್ದುಕನ್ನಡಿಗರ 4ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು ಇದು ನಮ್ಮ ದೇಶದಲ್ಲಿ ಹುಟ್ಟಿಬೆಳದ ಸೊಗಸಾದ ಭಾಷೆಯಾಗಿದೆ. ಎಲ್ಲರೂ ಪ್ರೀತಿಯಿಂದ ಮಾತಾನಾಡುವ ಭಾಷೆ ಇದಾಗಿದೆ ನಮ್ಮ ಮುಸ್ಲಿಂ ಸಮುದಾಯದವರು ಮಾತೃ ಭಾಷೆ ಉರ್ದು ಜೊತೆಗೆ ನಮ್ಮ ನಾಡಿನ ಆಡಳಿತ ಭಾಷೆಯಾಗಿರುವ ಕನ್ನಡ ಕಡ್ಡಾಯವಾಗಿ ಕಲಿಯಬೇಕು ಕನ್ನಡ ಭಾಷೆಗೂ ಹೆಚ್ಚಿನ ಆಧ್ಯತೆ ನೀಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.


ಕೊಪ್ಪಳ ಜಿಲ್ಲೆಯಾಗಿ 24 ವರ್ಷಗಳು ಕಳೆದಿವೆ ಕೆಲ ಪ್ರಮುಖ ಕಾರ್ಯಗಳು ಆಗುವದು ನೆನಗುದಿಗೆ ಬಿದ್ದಿದೆ. ಜಿಲ್ಲೆಯ ಹಿರೇಹಳ್ಳ ಆಣೆಕಟ್ಟು ಒಂದು ಮೀಟರ್ ಎತ್ತರ ಹೆಚ್ಚಿಸುವ ಕಾರ್ಯ ಕೂಡಲೆ ಪ್ರಾರಂಭಗೊಳ್ಳಬೇಕು, ತುಂಗಭದ್ರ ಜಲಾಶಯದ ಹೊಳನ್ನು ಸಮರ್ಪಕವಾದ ರೀತಿಯಲ್ಲಿ ತೆಗೆಯುವ ಕಾರ್ಯ ಕೂಡಲೆ ಕೈಗೊಳ್ಳಬೇಕು, ಗಂಗಾವತಿ ಭಾಗದ ಈ ವರ್ಷದ ಅತಿ ದೊಡ್ಡ ಹಗರಣವಾದ 14 ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾದ 13.5 ಕೋಟಿ ಹಣ ಲೂಟಿಯಾಗಿದ್ದು, ಸಮರ್ಪಕವಾಗಿ ತನಿಯಾಗಬೇಕು, ಏತನೀರಾವರಿ ಯೋಜನೆ ಹೆಚ್ಚಿಸಬೇಕು, ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು, ನಗರದಲ್ಲಿ ನಡೆಯುತ್ತಿರುವ ರಸ್ತೆಕಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೋಳಿಸಬೇಕು ಕೊಪ್ಪಳ ನಗರಕ್ಕೆ ಉದ್ಯಾನವನ ಸ್ಥಾಪಿಸಬೇಕು. ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಕಾಲೇಜಿನಿಂದ ಪ್ರತ್ಯೇಕಗೊಳಿಸಿ ಶಿಕ್ಷಕರ ಕೊರತೆ ಸರ್ಕಾರ ನೀಗಿಸಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉರ್ದು ಭಾಷೆಯನ್ನು 2ನೇ ರಾಷ್ಟ್ರ ಭಾಷೆಯಂದು ಘೋಷಿಸಬೇಕು, ಪ್ರತಿ ಜಿಲ್ಲಾ ಕೆಂದ್ರದಲ್ಲಿ ಉರ್ದು ಭವನ ನಿರ್ಮಾಣ ಮಾಡಬೇಕು, ಪ್ರಾಥಮಿಕ ಶಿಕ್ಷಣ ಹಂತದಿಂದಲೆ ಉರ್ದು ಒಂದು ಐಚ್ಛಿಕ ವಿಷಯವಾಗಿ ಪ್ರಾರಂಭಿಸಬೇಕು. ಉತ್ತರ ಕರ್ನಾಟಕ, ಹೈದ್ರಾಬಾದ್-ಕರ್ನಾಟಕ ಸೇರಿದಂತೆ ಬಹುಭಾಗ ಪ್ರದೇಶ ನೆರೆ ಹಾವಳಿಗೆ ತತ್ತರಿಸಿ ಜನರು ನೋವು ಅನುಭವಿಸುತ್ತಿದ್ದಾರೆ, ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೂಡಲೆ ಸರ್ಕಾರ ನೆರೆಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಮನೆ ಒದಗಿಸಿಬೇಕು. ಇವು ಎಲ್ಲಾ ಬೇಡಿಕೆಗಳು ಸರ್ಕಾರ ಪರಿಗಣಿಸಿ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲು ಇಲ್ಲಿಯ ಸಮಸ್ತ ಉರ್ದು ಕನ್ನಡಿಗರ ಪರವಾಗಿ ಸಮ್ಮೇಳನಾಧ್ಯಕ್ಷನಾಗಿ ಒತ್ತಾಯಿಸುತ್ತೇನೆ ಎಂದರು.


ಸಮ್ಮೇಳನದ ಉದ್ಘಾಟನೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ ಪಟೇಲ್ ನೆರೆವೆರಿಸಿದರು, ಸರ್ವಾದ್ಯಕ್ಷರ ಧರ್ಮಪತ್ನಿ ಅಶ್ರಫುನ್ನಿಸ್ಸಾ ಬೇಗಂ ರವರಿಗೆ ಸನ್ಮಾನಿಸಲಾಯಿತು ತಿರುಳುಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎಂ. ಸಾದಿಕ ಅಲಿ ಅದ್ಯಕ್ಷತೆ ವಹಿಸಿದ್ದರು, ಮಾನವ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಖಾಜಾವಲಿ ನವನಿರ್ಮಣ ಸೇನೆಯ ರಾಜ್ಯ ಸಂಚಲಕ ವಿಜಯಕುಮಾರ ಕವಲೂರು, ಸಂಘಟಕರಾದ ಮಹೇಶಬಾಬು ಸುರ್ವೆ, ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಹಿರಿಯ ಪತ್ರಕರ್ತ ಹರೀಶ್ ಹೆಚ್.ಎಸ್., ಶೋಷಿತ ಸಮೂದಾಯಗಳ ವೇದಿಕೆ ರಾಜ್ಯಪ್ರಧಾನ ಕಾರ್ಯದರ್ಶಿ ಅನಿಲ ಕುಮಾರ ಬೇಗಾರ, ಸೈಯದ್ ನಾಸಿರ್ ಕಂಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top